ಪುಟ:ವತ್ಸರಾಜನ ಕಥೆ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೦ - ಕರ್ಣಾಟಕ ಕಾವ್ಯಕಲಾನಿಧಿ, - ಅವನಿಂದೊಡಗೂಡಿ ಕಾಂತಿಗಳಿಂದ ಹೆಚ್ಚಾಗಿ ಪೊಳೆಯುವ ಪಚ್ಚೆಯ ಚೌಕಿಯಲ್ಲಿ ಕುಳಿತಿರಲು ; ವಿದೂಷಕನು ಪಾರ್ಶ್ವಭಾಗವಂ ನೋಡಿ ತೆರೆದ ಬಾಗಿಲಿಂದೊಡ ಗೂಡಿರುವ ಶಾರಿಕೆಯ ಪಂಜರವಂ ಕಂಡು-- ಎಲೈ ರಾಜೇಂದ್ರನೇ, ಈ ತೆರನಾಗಿರುವ ಪಂಜರದಿಂದ ಶಾರಿಕೆಯು ಹಾರಿ ಬಂದುದು ?” ಎಂದು ಕುಳಿ ತಿರ್ದ ಸ್ಥಳಮಂ ಬಿಟ್ಟಿ ದ್ದು ಪೋಗಿ ನೋಡುತ್ತಿರುವಲ್ಲಿ ಒತ್ತಿನಲ್ಲಿ ಬಿದ್ದಿರುವ ಚಿತ್ರಪಟವಂ ಕಂಡು, ಬಡವನಿಗೆ ಭಾಗ್ಯ ಬಂದಂತೆ, ಅಧಿಕ ಸಂತೋಷದಿಂ ಯುಕ್ತನಾಗಿ ಆ ಚಿತ್ರಪಟವಂ ಕೈಗೆ ತೆಗೆದುಕೊಂಡು ಅಲ್ಲಿ ಬರೆದಿರುವ ರಾಯನ ಭಾವಚಿತ್ರವಂ, ಒತ್ತಿನಲ್ಲಿ ರತಿದೇವಿಗಿಂತಲೂ ಅತಿಶ ಯಳಾಗಿ ಬರೆದಿರುವ ಸಾಗ ರಿಕೆಯನ್ನೂ ಸಹ ನೋಡಿ,- ಎಲೈ ರಾಜೇ೦ದನೇ, ನಿನ್ನ ಪುಣ್ಯವೂ ಬಹಳ ವಾಗಿರುವುದು, ನೀನು ದೈವಯೋಗದಿಂದಲೆ ಅಭಿವೃದ್ದಿಯನ್ನು ಹೊಂದುತ್ತಿರುವೆ ? 1) ಎಂದು ಹರ್ಷದಿಂ ಕುಣಿಯುತ್ತಿರಲು; ರಾಮನು- ಎಲೈ ಮಿತ್ರನೇ, ಈಗ ನಿನಗೆ ದೊರಕಿರುವ ಚಿತ್ರಪಟದಲ್ಲಿ ಏನು ಬರೆದಿರುವುದು ? ನೀನು ಏತಕ್ಕೋ ಸುಗಮಾಗಿ ಕುಣಿಯುತ್ತಿರುವೆ ? ಎನ್ನೊ ಡನೆ ವಂಚಿಸದೆ ವೇಳುವನಾಗು ” ಎನಲು; ಅವನು - ಎಲೈ ರಾಜೋತ್ತಮನೇ, ಮೇಲಾಗಿ ಮನ್ಮಥನಂತೆ ಒಪ್ಪುತ್ತಿರುವ ನಿನ್ನ ನ್ನು ಈ ಪದದಲ್ಲಿ ಬರೆದಿರುವುದು, ನೀನಲ್ಲದೆ ಇನ್ನೊಬ್ಬ ಪುರುಷನು ಮನ್ಮಥನ ಸಾ ಮೃವಂ ಪೊಂದಲಾರನೆಂದು ಮೊದಲೇ ನಾನು ಹೇಳಿರುವೆನಾದುದರಿಂದ ಎನ್ನ ವಾಕ್ಯವು ಒಂದು ಕಾಲಕ್ಕೂ ಅಪದ್ದವಾಗಲಾರದು' ಇನ್ನೂ ಈ ಪಟದಲ್ಲಿ ವಿಶೇಷ ವಾದ ಕಾರವಿರುವುದು ” ಎಂದು ನುಡಿಯಲು ; ರಾಯನು ಎರಡು ಕರಗಳಂ ನೀಡಿ,- ಎಲೈ ಮಿತ್ರನೇ, ಅದರಲ್ಲಿ ಇನ್ನಾರ ಭಾವಚಿತ್ರವು ಬರೆದಿರುವುದು. ಅದನ್ನು ಎನ್ನ ಹಸ್ತಕೆ ಕೊಡುವನಾಗು, ನೋಡಿ ಸಂತೋಷವನ್ನು ಹೊ೦ದುವೆನು >> ಎಂದು ನುಡಿಯಲು; ವಿದೂಷಕನು- ಇಲ್ಲಿ ಮನ್ಮಥನ ಜಯಲಕ್ಷ್ಮಿಯಂತೆ ಕಾಮಿ ಗಳಿಗೆ ಕಲ್ಪಲತೆಯಂತೆ ಬರೆದಿರುವ ಈ ಕನ್ಯಾರತ್ನ ವನ್ನು ತೋರಿಸಬೇಕಾದಲ್ಲಿ ಎನಗೆ ರತ್ನ ಮಯವಾದ ಉಡುಗೊರೆಯನ್ನು ಕೊಟ್ಟಲ್ಲಿ ಈ ಪಟವನ್ನು ನಿನ್ನ ಹಸ್ತಕೆ ಒಪ್ಪಿ ಸುವೆನು ” ಎಂದು ಆ ಚಿತ್ರವನ್ನು ತನ್ನ ದೋತ್ರದ ಸೆರಗಿನಿಂದ ಮುಚ್ಚುತಿರಲು ; ರಾಯನು-- ಎಲೈ ವಿದೂಷಕನೇ, ಬಾಲಲೀಲೆಯಂ ಗೆಯ್ಯದೆ ಆ ಪಟವಂ ಎನಗೆ ಕೊಡು ?” ಎಂದು ಬಲಾತ್ಕಾರದಿಂದ ತೆಗೆದುಕೊಂಡು, ಚೆನ್ನಾಗಿ ನೋಡಿ, ಆಶ್ಚರವಂ ಪೊ೦ದಿ- ಎಲೈ ಮಿತ್ರನೇ, ಇವಳೇ ಶಕುಂತಶಾಲೆಯಲ್ಲಿರುವ ಸಂಗೀತಶಾಲೆಗೆ ಪ್ರವೇಶಿಸುತ್ತಿದ್ದ ಬಾಲೆಯು, ನಾನು ಹೇಳಿದ ವಾಕ್ಯಗಳನ್ನು ಅಪದ್ಧಗಳಾಗಿಯೇ ತಿಳಿಯುತ್ತ ಇದ್ದೆಯಷ್ಟೆ. ಈಗ ಇವಳ೦ ನೋಡುವನಾಗು. ಆದರೆ ಇಂಥ ಸ್ತ್ರೀಯು ಈ ಬ್ರಹ್ಮಸೃಷ್ಟಿಯಲ್ಲಿ ಪುಟ್ಟಿರುವಳೋ ಎ೦ಬ ಸ೦ದೇಹವು ಬಲವತ್ತರ ವಾಗಿ ಎನ್ನ ೦ ಬಾಧಿಸುತ್ತಿರುವುದು, ಇವಳ೦ ನೋಡಿದಲ್ಲಿ ಆಡುಸೊಬಗನ್ನು ವಹಿ