ವಿಷಯಕ್ಕೆ ಹೋಗು

ಪುಟ:ವತ್ಸರಾಜನ ಕಥೆ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವತ್ಸರಾಜನ ಕಥೆ, - FQ ಸಿದ ಈ ಕಾಂತೆಯು ತನ್ನ ವಿಲಾಸಗಳಿಂದ ಆದಿಲಕ್ಷ್ಮಿಯನ್ನೂ ತಿರಸ್ಕಾರವಂ ಗೆಯ್ಯು ಎನ್ನಲ್ಲಿ ಪಕ್ಷಪಾತವಂ ತಾಳಿದ ರಾಜಹಂಸಸ್ತಿಯಂತೆ ಎನ್ನ ಮಾನಸವನ್ನು ಪ್ರ ವೇಶಿಸುತ್ತಿರುವಳು. ಎಲೆ ಸ್ನೇಹಿತನೇ, ಇವಳಾರು ? ಈ ಪ್ರಕಾರವಾದ ಸೌಂದಯ್ಯ ಶಾಲಿಯಾದ ಕಾಂತೆಯು ಎನ್ನ ಕಂಗಳಿಗೆ ಗೋಚರಿಸದೆ ಎನ್ನ ಅಂತಃಪುರದಲ್ಲಿ ಹೇಗೆ ಅಭಿವೃದ್ದಿ ಯಂ ಪೊಂದಿದಳು ನೋಡು ? ” ಎಂದು ಆ ಭಾವಚಿತ್ರವನ್ನು ಬಹು ಪ್ರಕಾರವಾಗಿ ನೋಡುತ್ತಿರಲು ; - ಇತ್ತಲು ಸುಸಂಗತೆಯು ಎಲೆ ಸಾಗರಿಕೆಯೇ, ಶಾರಿಕೆಯು ಎತ್ತಲೋ ಹಾರಿಪೋದುದು, ಅದನ್ನು ನೋಡುವ ಬಾ ?” ಎಂದು ಅವಳಿಂದೊಡಗೂಡಿ ಸುವ ರ್ಣದ ಬಾಳೆಯ ಸ್ತಂಭಗಳಿಂದ ಸುಂದರವಾದ ಮಂದಿರದ ಸಮೀಪವಂ ಸೇರಲು ; ಸಾಗರಿಕೆಯು ಅದೇರೀತಿಯಂ ಮಾಡುವ ನಡೆ ಎಂದು ಇಬ್ಬರೂ ಆ ಕದ ೪ಗೃಹದ ಸವಿಾಪಕ್ಕೆ ಮೆಲ್ಲಮೆಲ್ಲನೆ ಅಡಿಯಿಟ್ಟು ಬರುತ್ತಿರಲು ; ಇತ್ತಲು ವಿದೂಷಕನು-- ಎಲೈ ಸ್ವಾಮಿಯೇ, ಈ ಚಿತ್ರಪಟದಲ್ಲಿ ಬರೆದಿ ರುವ ಕಾಂತೆಯು ಕಂಬನಿಗಳಂ ತುಂಬಿರುವಂತೆ ತೋರುತ್ತ ಇದ್ದಾಳು ” ಎಂದು ನುಡಿಯಲು ; ಸುಸಂಗತೆಯು ಎಲೆ ಸಖಿಯೇ, ಈ ಕದಳಿಗೃಹದಲ್ಲಿ ವಿದೂಷ ಕನು ಮಾತನಾಡುತಲಿದ್ದಾನೆ. ಆದುದರಿಂದ ಅಲ್ಲಿ ಮಹಾರಾಜನೂ ಇರುವುದಾಗಿ ತೋರುವುದು, ನಾವಿರ್ವರೂ ಈ ಬಾಳೆಯ ಪೊದರಿನಿಂದ ಮರೆಗೊಂಡು ನಿಂತು ಅವರು ಆಡುವ ಸರಸಸಲ್ಲಾಪಗಳನ್ನು ಕೇಳುವ ' ಎಂದು ನುಡಿದು, ಆ ಬಾಳೆಯ ಸ್ತಂಭಗಳ ಸಂದಿಯಲ್ಲಿ ಬಗ್ಗಿ ನೋಡಿ- ಎಲೆ ಬಾಲೆಯೇ, ನೀನು ದೈವಯೋಗ ದಿಂದ ಅಭಿವೃದ್ಧಿಯಂ ಪೊಂದುತ್ತಲಿರುವೆ. ಏಕೆಂದರೆ--ನಿನಗೆ ಪ್ರಾಣಕಾಂತನಾದ ವತ್ಸ ರಾಜನು ಚಿತ್ರಪಟದಲ್ಲಿ ನಿನ್ನ ಭಾವಚಿತ್ರವಂ ನೋಡಿ ನಿನ್ನನ್ನೇ ಬಣ್ಣಿಸುತ್ತ ಲಿರುವನು ” ಎನ್ನಲು ; ಸಾಗರಿಕೆಯು ಲಜ್ಜೆಯಿಂದೊಡಗೂಡಿ ಎಲೆ ಕಾಂತೆ ಯೇ, ಈ ನಿನ್ನ ವಿನೋದವಾಕ್ಯಗಳಿಂದ ಪ್ರಯೋಜನವೇನು ? ಬರಿದೆ ಏಕೆ ಎನ್ನ ನ್ನು ಲಜ್ಜಿಯಂ ಪೊಂದಿಸುತ್ತಲಿರುವೆ ? ?” ಎಂದು ನುಡಿಯಲು ; ವಿದೂಷಕನು ಮರಳಿ ರಾಯನಂ ಕುರಿತು ಎಲೈ ರಾಜೇಂದ್ರನೇ, ಈ ಸ್ತ್ರೀಯು ಏಕೆ ಕಂಬನಿಗಳಂ ತುಂಬಿರುವಳೆಂದು ಕೇಳಿದರೂ ಪ್ರತ್ಯುತ್ತರವನ್ನೇ ಯದೆ ಇರುವೆ ? " ಎಂದು ನುಡಿಯಲು ; ರಾಯನು-IC ಎಲೈ ಮಹಾಮಿತ್ರನೇ, ಮಹಾವಿರಪಾತುರಳಾಗಿ ಅವಳು ಹೇಳಿದ ಪದ್ಯದಿಂದಲೆ ವ್ಯಕ್ತವಾಗಿರುವಲ್ಲಿ, ಮರಳಿ ಮರಳಿ ಏತಕೆ ಎನ್ನನ್ನು ಬೆಸಗೊಳುತ್ತಿರುವೆ ? ” ಎನ್ನಲು ; ಸುಸಂಗತೆಯು ಆ ವಾಕ್ಯವಂ ಕೇಳಿ ಆಶ್ರವಂ ಪೊಂದಿ- ಎಲೈ ಕಾಂ ತೆಯೇ, ಮೇಧಾವಿನಿಯೆಂಬ ಶಾರಿಕೆಯು ತನ್ನ ಮೇಧಾವಿನೀತ್ವವನ್ನು ಪ್ರಕಟಿಸಿದಂತೆ ತೋರುವುದು, ಏಕೆಂದರೆ--ಆ ಶಾರಿಕೆಯ ಪೇಳದೆ ಇದ್ದಲ್ಲಿ ನೀನು ನಿರಪಾತುರೆ