ಪುಟ:ವತ್ಸರಾಜನ ಕಥೆ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ಕರ್ಣಾಟಕ ಕಾವ್ಯಕಲಾನಿಧಿ, - ಅಲ್ಲಿ ಉಂಟಾಗಿರುವ ಮಂಡಲಾಕಾರವಾದ ಗುರುತುಗಳಿಂದ ವ್ಯಕ್ತವಾಗಿ ಹೇಳುವು ದಲ್ಲದೆ, ಅವಳ ಸಂತಾಪವನ್ನೂ ಸಹ ಪೇಳುತ್ತಿರುವುದು ” ಎಂದು ನುಡಿಯಲು ; ವಿದೂಷಕನು ಸಾಗರಿಕೆಯ ಕುಚಗಳ ಒತ್ತಿನಲ್ಲಿ ಧರಿಸಿದ್ದ ತಾವರೆಯ ದಂಟಿನ ಹಾ ರವಂ ಕರದಲ್ಲಿ ಪಿಡಿದು - ಎಲೈ ಶೃಂಗಾರಶೇಖರನಾದ ರಾಜೇಂದ್ರನೇ, ಪೆರ್ಮೆ ಲೆಗಳ ಸಂದಿಯಲ್ಲಿ ಸಿಕ್ಕಿ ಕ೦ದಿ ಕಪ್ಪಾಗಿರುವ ಸೊಗಸುದೋರುವ ಮೃಣಾಳಹಾರ ಮಂ ನೋಡುವನಾಗು ' ಎಂದು ನುಡಿಯಲು ; ರಾಜೇಂದ್ರನು ಆ ತಾವರೆಯ ದಂ ಟಿನ ಹಾರವಂ ಕುರಿತು ಎಲೆ ಜಡಪ್ರಕೃತಿಯುಳ್ಳ ತಾವರೆಯ ದಂಟೇ, ಕೇಳು. ಮಹಾಸುಂದರಿಯಾದ ಈ ಮಂದಗಮನೆಯ ಸೆರ್ಮೊಲೆಗಳಿಂದ ವಿಯೋಗಮಂ ಪಡೆ ದೆನೆಂದು ಏತಕ್ಕೋಸುಗವಾಗಿ ವ್ಯಸನಮಂ ಪೊಂದುತ್ತಿರುವೆ ? ನಿನ್ನಲ್ಲಿ ಪುಟ್ಟದ ಸೂಕ್ಷವಾದ ನೂಲಿಗೂ ಆ ಕುಚಗಳ ಮಧ್ಯದಲ್ಲಿ ಸ್ಥಳವು ದೊರಕದೆ ಇದ್ದಲ್ಲಿ ನಿನ ಗೆ ಎಡಬಿಡದಿರುವ ಆ ಪೆರ್ಮೊಲೆಗಳಲ್ಲಿ ಸ್ಥಾನವು ಹೇಗೆ ದೊರಕೀತೋ ! ೨” ಎಂದು ನುಡಿಯಲು ; ಆ ವಾಕ್ಯವಂ ಕೆಳ ಸುಸಂಗತೆಯು ಬಲವಾದ ಅನುರಾಗದಿಂದ ವ್ಯಾ ಪ್ರವಾದ ಮನವುಳ್ಳ ನಮ್ಮ ರಾಯನು ಬಾಯಿಗೆ ಬಂದಂತೆ ಮಾತುಗಳನ್ನು ಆಡುವಲ್ಲಿ ಉದ್ಯುಕ್ತನಾಗಿರುವನು. ಇನ್ನು ಮೇಲೆ ನಾನು ಉಪೇಕ್ಷೆಯಂ ಮಾಡಿ ಅಲ್ಲಿ ಇರು ವುದು ನ್ಯಾಯವಲ್ಲ ಎಂದು ತನ್ನ ಮನದಲ್ಲಿ ಆಲೋಚಿಸಿ, ಒತ್ತಿನಲ್ಲಿರುವ ಸಾಗರಿ ಕೆಯಂ ಕುರಿತು ಎಲೆ ಕಾಂತೆಯೇ, ನೀನು ಯಾವ ವಸ್ತುಗೋಸುಗವಾಗಿ ಅಧಿ ಕವಾದ ಆಯಾಸವಂ ಪೊಂದುತ್ತಿದ್ದೆಯೋ ಆ ವಸ್ತು ನಿನ್ನ ಮುಂದುಗಡೆಯಲ್ಲಿಯೇ ಇ ರುವುದು” ಎಂದು ನುಡಿಯಲು: ಸಾಗರಿಕೆಯು ಅವಳು ಆಡಿದ ನುಡಿಗೆ ಮನದಲ್ಲಿ ಸಂ ತೋಷವುಂಟಾಗಿದ್ದರೂ ಹೊರಗೆ ಅಸೂಯೆಯಂ ಪೊಂದಿ ಎಲೆ ಸುಸಂಗತೆ ಯೇ, ನಾನು ಯಾವ ವಸ್ತುಗೋಸುಗವಾಗಿ ಆಯಾಸವಂ ಪೊಂದಿದೆ ? ಎನ್ನ ಮು೦ ದುಗಡೆಯಲ್ಲಿರುವ ಆ ವಸ್ತುವಾವುದು? ವಿಸ್ತಾರವಾಗಿ ವಿವರಿಸುವಳಾಗು ” ಎಂದು ಹುಬ್ಬು ಗಳ೦ ಗಂಟಿಕ್ಕಿ ನುಡಿಯಲು : ಸುಸಂಗತೆಯು, ಇವಳ ಅಭಿಪ್ರಾಯವಂ ತಿಳಿ ದು ನಸುನಕ್ಕು - ನಿನ್ನಲ್ಲಿ ನೀನೇ ಚಂಚಲವಂ ಪೊಂದುತ್ತಿರುವ ಚಂಚಲಚಿತ್ತಳಾದ ಎಲೆ ಕಾಂತೆಯೇ, ಕೇಳು. ಚಿತ್ರಪಟವು ಪೋದುದೆಂದು ಬಲವಾಗಿ ವ್ಯಸನವಂ ಪೊಂದುತಿದ್ದೆ ಯಷ್ಟೆ, ಆ ಚಿತ್ರಪಟವು ಮುಂದುಗಡೆಯಲ್ಲೇ ಇರುವುದು, ಅದನು ತೆಗೆದುಕೊಳ್ಳು ವಳಾಗು ' ಎಂದು ವಂಚಿಸಿ ನುಡಿಯಲು ; ಸಾಗರಿಕೆಯು ಕಪಟವಾದ ಕೋಪವಂ ತಾಳಿ, – ಎಲೆ ಕಾಂತೆಯೇ, ಇಲ್ಲಿರದೆ ಮತ್ತೊಂದು ಕಡೆಗೆ ಪೋಗು ಇಲಿರುವೆನು. ನೀನು ಎನ್ನ ನ್ನು ವಕ್ರವಾದ ವಾಕ್ಯಗಳಿಂದ ವಂಚಿಸುತ್ತಿರುವೆ ? ?? ಎಂದು ಎರಡು ಮೂರು ಹಜ್ಜೆಯನ್ನಿಟ್ಟು ಪೋಗುತ್ತಲಿರಲು ; ಸುಸಂಗತೆಯು ತನ್ನ ಮನದಲ್ಲಿ ಏನೋ ಒಂದು ಯೋಚಿಸಿ ಹೋಗುತ್ತಿರುವ ಸಾಗರಿಕೆಯಂ ತಡೆದು