ಪುಟ:ವತ್ಸರಾಜನ ಕಥೆ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-- ವತ್ಸರಾಜನ ಕಥೆ. -- ೯೯ ತೋರಿಸುವೆನು ಚಿತ್ತೈಸಬೇಕು ?” ಎಂದು ಕರೆದುಕೊಂಡು ಬರುತ್ತಿರಲು ; - ಸಾಗರಿಕೆಯು ಸ್ವಲ್ಪ ದೂರದಲ್ಲಿ ಬರುವ ವತ್ಸ ರಾಜನಂ ಕಂಡು, ಉದ್ಭವರೋ ಮಾಂಚನದಿಂ ಕೊಬ್ಬು ಮನದಿಂ ಹಬ್ಬುವ ಅನುರಾಗದಿಂ ನಸುನಡುಗುವೆ” ತೊಡೆ ಗಳಿ೦, ತಪ್ಪಿಡುವಡಿಗಳಿಂದೊಡಗೂಡಿ ಈ ಮಹಾರಾಜನಂ ಕಂಡು- ಇವನನ್ನು ನೋಡಿದಮಾತ ದಿಂದಲೇ ಎನ್ನ ತೊಡೆಗಳು ನಡುಗುತ್ತಿರುವವ; ಹತ್ತಿರಕೆ ಬಂ ದಲ್ಲಿ ಎಂತು ಮಾತನಾಡಲಿ ? ಹೇಗೆ ಭಯವಿಲ್ಲದೆ ಕಣ್ಣೆತ್ತಿ ನೋಡಲಿ ? ಆಲಿಂಗಿಸಿದಲ್ಲಿ ಹೇಗೆ ತಾಳಲಿ ? ಇವನ ಅಧರವಂ ಒ೦ದುಬಾರಿಯಾದರೂ ಇಂಬಾಗಿ ಚುಂಬನವಂ ಗೆಯ್ಯದಿರಲು, ಮನದಲ್ಲಿ ತುಂಬಿರುವ ಎನ್ನ ಹಂಬಲವ ಹೇಗೆ ತೊಲಗುವುದು? ಒಂದು ಬಾರಿಯಾದರೂ ಈ ಸುಂದರಾಂಗನನ್ನು ಹೊಂದಿದ ಮಂದಗಮನೆಯ ಜನ್ಮನೇ ಸಫಲ ವಾದುದು. ” ಎಂದು ತಿಳಿದು, ರಾಯನನ್ನು ನೋಡಿಯೂ ನೋಡದಂತೆಯೇ ಏನೋ ಒಂದು ವ್ಯಾಜವಂತಾಳಿ ಕುಳಿತಿರಲು ; - ವಿದೂಷಕನು ಜಗನಂ ಮೋಹಿಸುವ ಸಮೊತನವಿದ್ಯೆಯೇ ಮೂರ್ತಿ ಗೊಂಡು ರಾಜಿಸುವುದೋ ಎಂಬಂತೆ, ಕಣ್ಮನಗಳಂ ಕೈ ಸೊರೆಯಂ ಕೊಳ್ಳು ತ್ತ ಕುಳಿತಿ ರುವ ಸಾಗರಿಕೆಯಂ ಕಂಡು ಆಶ್ವರವಂ ಪಟ್ಟು, ಇಂಥ ಅಂದವಾದ ಸುಂದರಾಂಗಿ ಯು ಮನುಷ್ಯ ಸ್ತ್ರೀಯಲ್ಲಿ ಹುಟ್ಟು ವದು ದುರ್ಲಭವಾಗಿರುವುದು, ಎಲೈ ರಾಜೇಂ ದ್ರನೇ, ಚಂದವಾದ ಮಂದಾರ ವೃಕ್ಷದ ಜಗಲಿಯಲ್ಲಿ ಮಂಡಿಸಿರುವ ಕಾಂತೆಯ ನಿರಾ ಣಕರ್ತನಾದ ಬ್ರಹ್ಮನು ಇವಳಂ ನಿಮ್ಮಿಸಿ ಎನ್ನ ಸೃಷ್ಟಿಯಲ್ಲಿ ಇಂಥ ಸ್ತ್ರೀಯು ಪುಟ್ಟುವ ದೂ ಉಂಟೇ ಎಂದು ಆಶ್ಚರವಂ ಪೊಂದಿ, ಭ್ರಾಂತನಾಗಿರಬಹುದೆಂದು ಊಹಿಸುತ್ತಿ ರುವೆನು ಎನಲು ; ರಾಯನು ಸುಂದರವಾದ ಚಂದ್ರನ ಅಂದವಂ ನಿಂದಿಸುತ್ತ ಮಂದ ಹಾಸದಿಂದ ಬಂಧುರವಾದ ಮುಖಕಮಲದಿಂದ ಮುದ್ದಾಗಿರುವ ನಾಗರಿಕೆಯಂ ಕಂಡು- ಎಲೈ ಮಿತ್ರನೇ, ನೀನು ಹೇಳಿದಂತೆ ನಾನೂ ಊಹಿಸುತ್ತಿರುವೆನು. ಆದರೂ ಪೇಳುವೆನು ಕೇಳು. ಬ್ರಹ್ಮನು ಮೂರುಲೋಕಕ್ಕೂ ಅಲಂಕಾರಸ್ವ ರೂಪಳಾದ ಈ ಕಾಂತೆಯಂ ನಿರ್ಮಾಣವಂ ಗೆಯ್ದು ತನ್ನ ಎಂಟು ಕಣ್ಣು ಗಳಂ ಚೆನ್ನಾಗಿ ತೆರೆದು ನೋಡಿ ಮೂಗಿನಲ್ಲಿ ಬೆರಳನ್ನಿಟ್ಟು ನಿರ್ಮಾಣಕುಶಲತ್ವವು ಲೇಸಾದುದು ಲೇನಾ ದುದೆಂದು ತನ್ನ ನಾಲ್ಕು ತಲೆಗಳನ್ನೂ ಒಂದುಬಾರಿ ತೂಗುತ್ತಿರುವನೆಂದು ಊಹಿಸುತ್ತಿ ರುವೆನು ೨” ಎನ ಸಾಗರಿಕೆಯು ಸುಸಂಗತೆಯಂ ಕುರಿತು - ಎಲೆ ಸುಸಂಗತೆಯೇ, ನೀನು ಕದಳೀಗೃಹಕ್ಕೆ ಪೋಗಿ ಚೆನ್ನಾಗಿ ಚಿತ್ರಪಟವಂ ತಂದೆ? ” ಎಂದು ಮನದಲ್ಲಿ ಸಂತೋ ಷವಿದ್ದರೂ ಅದೇನೋ ಒಂದು ಬಗೆಯಾದ ಪುಸಿಯಾದ ಅಸೂಯೆಯಂ ಪೊಂದಿ, ತಾರಹಾರಗಳೂ ಬಟ್ಟ ಮೊಲೆಗಳೂ ಪುಟನೆಗೆದು ಹಾರುವಂತೆ ತಿರುಗಿ ನೋಡಿ ಪೋಗುತ್ತಿರಲು ; .p