ಪುಟ:ವತ್ಸರಾಜನ ಕಥೆ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧ಳಿ - ಕರ್ಣಾಟಕ ಕಾವ್ಯಕಲಾನಿಧಿ - ಎನಲು ; ಕಾಂಚನಮಾಲೆಯು ಶೀಘ್ರದಿಂ ಬಂದು ಆ ಚಿತ್ರ ಪರಮಂ ತೆಗೆದುಕೊಂಡು ನೋಡಿ- ಎಲೌ ಪೂಜ್ಯಳಾದ ದೇವಿಯೇ, ಇಲ್ಲಿ ಯಾರದೋ ಭಾವಚಿತ್ರವು ಬರೆದಿರು ವದು, ನೋಡು ” ಎಂದು ದೇವಿಯ ಹಸ್ತಕೆ ಒಪ್ಪಿಸಲು ; ದೇವಿಯು ಆ ಭಾವ ಚಿತ್ರಮಂ ಬಲವಾಗಿ ನೋಡಿ~ (( ಎಲೆ ಕಾಂಚನಮಾಲೆಯೇ, ಇವನು ನಮ್ಮ ರಾಜೇಂದ್ರನು, ಇವಳು ಸಾಗರಿಕೆಯು, ಈ ಪದವನ್ನು ಬರೆದವರಾರು ತಿಳಿಯ ಬೇಕು ” ಎಂದು ನುಡಿದು, ' ನಾನು ಎಷ್ಟು ಪ್ರಕಾರವಾಗಿ ನಾಗರಿಕೆಯು ರಾಯನ ದೃಷ್ಟಿಗೆ ಗೋಚರಿಸಲಾಗದೆಂದು ಮಾಡಿದ ಪ್ರಯತ್ನ ಗಳೆಲ್ಲವೂ ಭಗ್ನ ವಾಗಿಪೋದುವು. ಇಲ್ಲಿ ನಾಗರಿಕೆಯು ಹೇಗೆ ಬಂದಳು ? ಅಥವಾ ಬಂದ ರಾಯನನ್ನು ಒಡಗೂಡಿಸಿ ಈ ಪಟದಲ್ಲಿ ಇವಳಂ ಒರೆದವರಾರೋ ? ?” ಎಂದು ಬಹುಪ್ರಕಾರವಾಗಿ ಆಲೋಚಿ ಸುತ್ತಿರಲು ; ಕಾಂಚನಮಾಲೆಯು- ಎ ದೇವಿಯೇ, ಇಲ್ಲಿ ಪ್ರಾಣಿ ಮಾತ್ರವಾ ದರೂ ಪ್ರವೇಶಿಸುವುದಕ್ಕೆ ಆಗದೆ ಇರುವಲ್ಲಿ ಇನ್ನೊಬ್ಬರೂ ಬರೆದಹಾಗೆ ತೋರುವು ದಿಲ್ಲ, ನಮ್ಮ ರಾಜೇಂದ್ರನೇ ಬರೆದಿರಬಹುದೆಂದು ಊಹಿಸುವೆನು ?” ಎಂದು ನುಡಿ ಯಲು ; ದೇವಿಯು ಚಿತ್ರಪಟವನ್ನು ತನ್ನ ಹಸ್ತದಲ್ಲಿ ಪಿಡಿದಿರುವುದು ಕಂಡು ರಾಯನು ತಾವರೆಯೆಲೆಯಮೇಲೆ ಬಿದ್ದ ನೀರಿನಂತೆ ಚಂಚಲವಾದ ಚಿತ್ರವುಳ್ಳವನಾಗಿ ಹಿಂದಿರುಗಿ ವಿದೂಷಕನ ಮುಖವಂ ನೋಡಿ ಕಿವಿಯಲ್ಲಿ ಎಲೋ ಕೇಡಿಗನೇ, ಈಗ ದೇವಿಗೆ ನಾನು ಏನು ಪ್ರತ್ಯುತ್ತರವಂ ಪೇಳಲಿ? ” ಎಂದು ನುಡಿಯಲಾವಿದೂಷಕನು ಧೈರವಂ ತಂದುಕೊಂಡು.( ಅಯ್ಯಾ ಸ್ವಾಮಿಯೇ, ನೀನು ಯಾವುದಕ್ಕೂ ಯೋಚಿಸ ಬೇಡ, ನಾನು ಹೇಳುತ್ತಿರುವ ವಾಕ್ಯಗಳಂ ಕೇಳುತ್ತಿರುವನಾಗು ” ಎ೦ದು, ದೇವಿ ಯಂ ಕುರಿತು- ಎಲೌ ಪೂಜ್ಯಳಾದ ದೇವಿಯೇ, ನೀನು ಮತ್ತೊಂದು ಪ್ರಕಾರ ವಾಗಿ ಯೋಚಿಸಬೇಡ. ಈ ಚಿತ್ರನಟದ ಸಂಗತಿಯನ್ನು ಬಿತ್ತೈಸುವೆನು, ಕೇಳು. ನೀನು ಈ ಉಪವನಕ್ಕೆ ಬರುವುದು ತಡವಾದಲ್ಲಿ ವಿನೋದದಿಂದ ಕಾಲವಂ ಕಳೆಯು ವದಕ್ಕೋಸುಗವಾಗಿ ವಿನೋದದಿಂದ ರಾಯನಂ ಕುರಿತು-- ಎಲೈ ಮಹಾರಾ ಜನೇ, ಲೋಕದಲ್ಲಿ ಭಾವಚಿತ್ರಮಂ ಬರೆಯಬಲ್ಲ ಮನುಜರು ಎದುರಾಗಿರುವವನ ಆಕಾರವಂ ಬರೆವರಲ್ಲದೆ ತಮ್ಮ ಆಕಾರಗಳಂ ತಾವು ಬರೆಯಲಾರರು. ನೀನು ಸಮಸ್ತ ವಿದ್ಯಾಪಾರಂಗತನಾದುದರಿಂದ ಈ ಕದಳಿಗೃಹದಲ್ಲಿರುವ ಚಿತ್ರದ ಸಾಮ ಗ್ರಿಯನ್ನು ತೆ೦ಗಳ೦ಂಡು ನಿನ್ನ ಭಾವಚಿತ್ರವಂ ನೀನೇ ಬರೆಯುವನಾಗೆಂದು ನುಡಿದ ಎನ್ನ ವಾಕ್ಯವಂದ್ಯ ರಾಯನು ಅದೇರೀತಿಯಿಂದ ತನ್ನ ಆಕಾರವನ್ನು ಬರೆಯಲು, ಅಂದವಾದ ಚಿತ್ರ: ಪೊನೋಡಿ, ಎಲೈ ಸ್ವಾಮಿಯೇ ನಿನ್ನ ಭಾವಚಿತ್ರಕ್ಕೆ ಸರಿಯಾಗಿ, ರೂಪಿನಲ್ಲಿ ರತಿದೇವಿಸಿಂತಲೂ ಅತಿಶಯಳಾಗಿ ಫತ್ವದಲ್ಲಿ ಎಲ್ಲಿಯೂ ನೋಡದೆ ಇರುವಂಥ ಸುಂದರಳಾದ ಒಬ್ಬಾಳೊಬ್ಬ ಸ್ಕಿಯನ್ನು ಬರೆಯುವನಾಗೆಂದು ನಾನು ಬಲಾತ್ಕರಿಸಲಾಗಿ, ಎನ್ನ ವಾಕ್ಯವು ವಿಾರಲಾರದೆ ಒಬ್ಬಾಳೊಬ್ಬ ಸ್ತ್ರೀಯನ್ನು