ಪುಟ:ವತ್ಸರಾಜನ ಕಥೆ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವತ್ಸರಾಜನ ಕಥೆ, - ೧oಶಿ ಬರೆದಿರುವನು. ಇವಳು ನಿನ್ನ ಅಂತರದ ಹೆಣ್ಣು ಗಳಲ್ಲಿ ಯಾವವಳಂತೆ ನಿನಗೆ ತೋರುವಳೋ, ನಿನ್ನ ಚಿತ್ರದಲ್ಲಿ ಇನ್ನೇನು ಸಂದೇಹವಂ ಹೊಂದುತ್ತಿರುವೆಯೋ ತಿಳಿಯೆನು ?” ಎನಲು ; ವಾಸವದತ್ತೆಯು ನಸುನಕ್ಕು-« ವಸಂತಕನ ವಾಕ್ಯದ ಚಾತುರವಂ ಕೇಳಿದೆಯಾ ? ?” ಎನಲು ; ರಾಯನು ಏನೋ ಒಂದು ಪರಿಯಾದ ಮುಖವರ್ಣವಂ ತಾಳಿ, ( ಎಲೆ ದೇವಿಯೇ, ನೀನು ಸಂದೇಹವಂ ಪೊಂದಬೇಡ. ನಿಜವಾಗಿ ನಾನು ಒಬ್ಬ ಸ್ತ್ರೀಯನ್ನೂ ನೋಡಿ ಬರೆದವನಲ್ಲ. ನನ್ನ ಬುದ್ಧಿಯಿಂದ ಲೇ ಊಹಿಸಿ ಬರೆದೆನು ?” ಎಂದು ನುಡಿಯಲು ; ವಿದೂಷಕನು-- ಎಲ್' ದೇವಿ ಯೇ, ಒಬ್ಬಳ ನೋಡಿ ಬರೆದುದಲ್ಲವೆಂದು ನನ್ನ ಜನಿವಾರವಂ ಪಿಡಿದು ಪ್ರಮಾ ಣವಂ ಗೆಯ್ಯುವೆನು. ನಿಜವಾಗಿ ಇಂಥ ಕಾಂತೆಯನ್ನು ಎಲ್ಲಿಯೂ ಕಂಡುದಿಲ್ಲವು ?” ಎನಲು ; ದೇವಿಯು-( ವಸಂತಕನು ದಿನಕ್ಕೊಂದುನೂರು ಜನಿವಾರವಾದರೂ ಕಿತ್ತು ಮರಳಿ ಹಾಕುವುದರಲ್ಲಿ ಹಿಂದೆಗೆಯದೇ ಇರುವನು, ಇವನ ವಾಕ್ಯವನ್ನು ಸತ್ಯವೆಂದು ಹೇಗೆ ನಂಬಬಹುದು ” ಎಂದು ಏಕಾಂತವಾಗಿ ಕಾಂಚನಮಾಲೆಯೊಡನೆ ನುಡಿಯಲು ; ಕಾಂಚನಮಾಲೆಯು ಎಲೌ ದೇವಿಯೇ, ಜಲದಲ್ಲಿ ಘಣಗಳೆಂಬ ಹುಳುಗಳು ಸಂಚರಿಸುತ್ತಿರುವ ಸಮಯದಲ್ಲಿ ದೈವಯೋಗದಿಂದ ಒಂದು ಅಕ್ಷರವಾ ದಂತೆ ರಾಯನು ಸ್ವ ಬುದ್ಧಿಯಿಂದ ಊಹಿಸಿ ಬರೆದ ಭಾವಚಿತ್ರವು ನಾಗರಿಕೆಯಂತೆ ಆಗಿ ದರೂ ಆಗಿರಬಹುದು ?” ಎಂದು ದೇವಿಯಂ ಕುರಿತು ಹೇಳುತ್ತಿರಲು ; ದೇವಿಯು. CC ಎಲೆ ಮರುಳುಗೊಂಡ ಮಾನಿನಿಯೇ, ಇವನಾರು ? ವಸಂತಕನಲ್ಲವೆ? ಇವನ ವಕ್ರವಾಕ್ಯದ ರೀತಿಯ ಮೋಸಗಾರಿಕೆಯೂ ನಿನಗೆ ತಿಳಿಯದು ” ಎಂದು ಮೆಲ್ಲಗೆ ನುಡಿದು, ರಾಯನಂ ಕುರಿತು,- ಎಲೈ ಸ್ವಾಮಿಯೇ, ಈ ಚಿತ್ರಪಟವಂ ನೋಡಿ ದಾರಭ್ಯವಾಗಿ ಬಲವಾಗಿ ತಲೆನೋವು ಬಂದುದು, ಇಲ್ಲಿ ನಿಂತಿರಲಾರೆನು ?” ಎಂದು ನುಡಿದು, ಅಂತರಂಗದಲ್ಲಿ ಅಧಿಕ ಕೋಪವಂ ತಾಳಿ ಪೋಗುತ್ತಿರಲು ; ರಾಯನು ವಾಸವದತ್ತೆಯ ಮುಜೆರಗು ಹಿಡಿದು- 1 ಎಲೆ ಕಾಂತೆಯೇ, ಪ್ರಸನ್ನಳಾಗು, ಎಂದು ಪೇಳುವೆನಾದರೆ, ಈಗ ನಿನಗೆ ಉಂಟಾಗಿರುವ ಕೋಪದಲ್ಲಿ ಅಂಧ ವಾಕ್ಯಕೆ ಅವಕಾಶವೇ ಇಲ್ಲದೆ ಇರುವುದು, ಇನ್ನು ಮೇಲೆ ಇ೦ಧ ಕಾರ್ಯವಂ ಗೆಯುವು ದಿಲ್ಲವೆಂದರೆ, ಹಿಂದೆ ಮಾಡಿದುದು ಒಂದು ಅಪರಾಧವೆಂದು ನಿಶ್ಚಯವಾಗುವುದು. ಎನ್ನಲ್ಲಿ ಯಾವ ದೋಷವೂ ಇಲ್ಲವೆಂಬುದಂ ನೀನೇ ಬಲ್ಲೆ ಎಂದೆನೇ, ಆ ವಾಕ್ಯವೂ ಸತ್ಯವಾಗಿ ತೋರಲಾರದು. ಆದುದರಿಂದ ನಾನು ನಿನಗೇನೆ೦ದು: ಪ್ರತ್ಯುತ್ತರವಂ ಪೇಳಲಿ ? ಏನು ಕಾರವಂ ಗೆಯ್ಯಲಿ? ಎಂತು ಚಿಂತೆಯಿಲ್ಲದೆ ಇರಲಿ : ಪೇಳು ) ಎಂದು ನುಡಿದರೂ ಆ ವಾಸವದತ್ತೆಯು ವಿನಯದಿಂ ತನ್ನ ಸೆರಗಂ ಬಿಡಿಸಿಕೊಂಡು, (• ಎಲೈ ಮಹಾರಾಜನೇ, ನಿನ್ನ ಚಿತ್ರದಲ್ಲಿ ಇನ್ನೊಂದು ಪ್ರಕಾರವಾಗಿ ತಿಳಿಯಕೂ ಡದು, ನಿಶ್ಚಯವಾಗಿ ಶಿರೋವೇದನೆಯು ತಲೆದೋರಿರುವುದು ?” ಎಂದು ನುಡಿದು, 14