ಪುಟ:ವತ್ಸರಾಜನ ಕಥೆ.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧sk ಕರ್ಣಾಟಕ ಕಾವೈಕಲಾನಿಧಿ, - ನಿಲ್ಲದೆ, ಕಾಂಚನಮಾಲೆಯಿಂದೊಡಗೂಡಿ, ಅಂತಃಪುರವಂ ಕುರಿತು ಪೋಗಲು ; ವಿದೂಷಕನು-IC ಎಲೈ ಸ್ವಾಮಿಯೇ, ದೈವಯೋಗದಿಂದ ನಮಗೆ ಪ್ರಾಪ್ತ ವಾದ ಅಕಾಲಮೃತ್ಯುವು ಬಿಟ್ಟು ಪೋದುದು ” ಎಂದು ಸಂತೋಷಯುಕ್ತನಾಗಿ ನುಡಿ ಯಲು ; ರಾಯನು- ಎಲೈ ಮೂರ್ಖನಾದ ವಿದೂಷಕನೇ, ದೇವಿಯು ಪೋದ ಳೆಂದು ಏಕೆ ಸಂತೋಷವಂ ಪೊಂದುತ್ತಿರುವೆ ? ಆ ವಾಸವದತ್ತೆಯು ಸತ್ಕುಲದಲ್ಲಿ ಪುಟ್ಟಿದವಳಾದುದರಿಂದ ಏನು ಕೋಪವಿದ್ದರೂ ತನ್ನ ಅಂತರಂಗದಲ್ಲಿ ಅಡಗಿಸಿದ ಇಲ್ಲದೆ ಹೊರದೋರಿಸಲಿಲ್ಲ. ಆದುದರಿಂದ ಅವಳು ಸಂತೋಷದಿಂದ ಪೋದಳೆಂದು ತಿಳಿಯುತ್ತಿರುವೆ. ಆದರೆ ಪೇಳುವೆನು ಕೇಳು-ಕೋಪದಿಂದ ಹುಬ್ಬುಗಳು ಎದ್ದು ಕುಣಿಯುತ್ತಿದ್ದರೂ ನಾನು ಕಾಣೆನೆಂದು ಮುಖವಂ ಬಿಗಿಸುತ್ತಿರುವಳು ; ಮರ್ಮೋ ದ್ಘಾಟವಂ ಮಾಡುವ ಬಾಯಿನಿಂದ ಮಂದಹಾಸವಂ ಮಾಡುವಳು ; ಸ್ವಲ್ಪವಾ ದರೂ ನಿಷ್ಣು ರವಾಕ್ಯವಂ ವೇಳಲಿಲ್ಲ; ದೃಷ್ಟಿಯು ಕಣ್ಣೀರುಗಳಿಂದ ನೆನೆದಿದ್ದರೂ ಚೆನ್ನಾಗಿ ಕಣ್ಣೆತ್ತಿ ನೋಡಲಿಲ್ಲ; ಎಷ್ಟ ಪ್ರಕಾರವಾದ ವಿಷಾದವ ತೋರಿದರೂ ಎನ್ನಲ್ಲಿ ಮರಾದೆಗೂಡಿದ ವಿನಯವನ್ನು ಬಿಡಲಿಲ್ಲ. ಆದುದರಿಂದ ಈಗ ನಾವಿರ್ವ ರೂ ಪೋಗಿ ಅವಳ ಮನಸ್ಸಿನಲ್ಲಿರುವ ಕುನವಂ ನಿಶೇಷವಾಗಿ ಪರಿಹರಿಸುವ, ನಡೆ ೨೨ ಎಂದು ವಿದೂಷಕನಿಂದೊಡಗೂಡಿ ಬರುತ್ಯ, ನಾಗರಿಕೆಯಂ ಸ್ಮರಿಸಿ - (ಎಲೈ ಮಿತ್ರನೇ, ಮೂರು ಲೋಕದಲ್ಲಾದರೂ ಮಾರನ ಸಾಮಾಜ ದೇವತೆಯಂತೆ ಇರುವ ಆ ನಾರಿ ಶಿರೋಮಣಿಯಂತೆ ರಾಬಿಸುವ ಕಾಂತೆಯು ಫುಟ್ಟಲಾರಳು, ಮುಂದೆ ಆ ಕುಂದರದನೆಯ ಸಂದರ್ಶನವು ಎಂದಿಗಾಗುವುದೋ ಎಂದು ಇಂದುಧರನಂ ಸ್ಮರಿ ಸುತ್ತಿರುವೆನು. ಈಗ ಮುಂದಕೆ ಹೋಗುವುದಕ್ಕೆ ಚರಣಂಗಳು ಸಮರ್ಥಗಳಾ ಗವು ” ಎಂದು ದಂತದ ಕೆಲಸಗಳಿಂದ ಕಾಂತಿಗೀಡಾದ ಹಜಾರದಲ್ಲಿ ಶಯ್ಯಾಗೃಹ ವಂ ಪೊಂದಿ, ಪದ್ಮರಾಗದ ಪಾದಗಳಿ೦ದ ಪರಿಶೋಭಿಸುತ್ತಿರುವ ಮಂಚದಲ್ಲಿ ಶಯನ ವಂ ಗೆಯ್ದು, ( ಅಯ್ಯಾ ಮಿತ್ರನೇ, ನೀನು ಪೋಗಿ ಮಿಂಚಿನ ಬಳ್ಳಿಯಂತೆ ತೋರಿ ಹಾರಿದ ವಾರಿಜಾಕ್ಷಿಯು ಎಲ್ಲಿರುವಳೋ, ಹೇಗೆ ಇಲ್ಲಿಗೆ ಬರುವಳೋ, ಅ೦ಥ ಕಾರ ದಲ್ಲಿ ಉದ್ದು ಕನಾಗಿ ಸಂತತವಾದ ಸಂತಾಪವನ್ನು ಪರಿಹರಿಸುವನಾಗು, ಮತ್ತು ದೇವಿಯಾಗಲಿ, ಅವಳ ಸೇವಕಳಾದ ಕಾಂಚನಮಾಲೆ ಮುಂತಾದ ಕಾಂತೆಯರಾಗಲಿ ಎನ್ನ ನ್ನು ಎಲ್ಲಿರುವನೆಂದು ಕೇಳಿದಲ್ಲಿ ಅಧಿಕವಾದ ಆಯಾಸದಿಂದ ಶಯನವಂ ಗೆಯ್ದಿ ರುವನೆಂದು ನುಡಿಯುವನಾಗು ” ಎಂದು ವಿದೂಷಕನಿಗೆ ಆಜ್ಞೆಯನ್ಶಿಯಲು ; - ಅವನು ಆಜ್ಞೆಯಾದಂತೆ ನಡೆದುಕೊಳ್ಳುವೆನೆಂದು ಬರುತ್ತೆ, ( ರಾಜಸೇವೆಯು ಬಲುಕಷ್ಟವಾಗಿರುವುದು, ಆ ಕಾಂತೆಯು ಎಲ್ಲಿರುವಳೋ, ಹೇಗೆ ಬರುವಳೋ, ನಿಂದಿಸಿ ನುಡಿವಳೋ, ಅವಳಿಗೆ ದೇವಿಯು ಏನು ನಿರ್ಬಂಧವಂ ಗೆಯ್ಯುವಳೋ, ತಿಳಿಯೆನು ” ಎಂದು ಯೋಚಿಸುತ್ತ ಬರುತ್ತಿರಲು ;