ಪುಟ:ವತ್ಸರಾಜನ ಕಥೆ.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧y - ಕರ್ಣಾಟಕ ಕಾವ್ಯಕಲಾನಿಧಿ, - ಕಾಂಚನಮಾಲೆಯು,-ಎಲ್ವೆ ಮಂತ್ರಿಯಾದ ವಿದೂಷಕನೇ, ನೀನು ಮಾಡಿ ದುದು ಲೇಸಾದುದು, ಲೇಸಾದದು. ಸಂಧಿವಿಗ್ರಹಯಾನಧೀಭಾವ ಸಮಾಶ್ರ ಯಗಳೆಂಬ ಷಡ್ಡು ಣಗಳಿಂದಲೂ, ಸಮಾಧಾನ ಮೊದಲಾದ ಚತುರೋಪಾಯಗಳಿಂದ ಲೂ, ಪ್ರಭುಶಕ್ತಿ ಉತ್ಸಾಹಶಕ್ತಿ ಮಂತ್ರಶಕ್ತಿಗಳೆ೦ಬ ಶತ್ರಯಗಳಿಂದಲೂ, ಕ್ಷಯ ಸ್ಥಾನ ವೃದ್ಧಿಗಳೆಂಬ ವರ್ಗತ್ರಯದಿಂದಲೂ ಮಂತ್ರಿಯಾದ ಮೌಗಂಧರಾಯಣನಂ ತಿರಸ್ಕರಿಸುವೆ ? 1' ಎಂದು ನುಡಿಯುತ್ತ ಬರುತ್ತಿರಲು ; ಮದನಿಕೆಯು ಕಾಂಚನಮಾಲೆಯ ಸವಿಾಪವಂ ಸೇರಿ,– ಎಲೌ ಕಾಂತೆಯೇ, ವಸಂತಕನಿಂದ ಏನು ಕಾರವು ಮಾಡಲ್ಪಟ್ಟಿತು ? ಅವನನ್ನು ಏತಕ್ಕೋಸ್ಕರವಾಗಿ ಈ ಪ್ರಕಾರವಾಗಿ ಸ್ತೋತ್ರವಂ ಗೆಯ್ಯುತ್ತಿರುವೆ ? ?” ಎಂದು ಬೆಸಗೊಳಲು ; ಅವಳುCL ಎಲೆ ಮದನಿಕೆಯೇ, ಆ ವೃತ್ತಾಂತವನ್ನು ಏಕೆ ಕೇಳುತ್ತಿದ್ದೀಯೆ ? ನಿನಗೆ ಇನ್ನೂ ಬಾಲ್ಯವಯಸ್ಸಾದುದರಿಂದ ಈ ರಾಜರಹಸ್ಯವಂ ಸಂರಕ್ಷಿಸುವುದಕೆ ಸಮರಳಾಗ ಲಾರೆ ” ಎಂದು ನುಡಿಯಲು ; ಅವಳು-1( ಎಲೌ ಪೂಜ್ಯಳಾದ ಕಾಂಚನಮಾಲೆಯೇ, ನೀನು ಹೇಳಿದ ವಾಕ್ಯವನ್ನು ಯಾರೊಡನೆಯೂ ಹೇಳುವುದಿಲ್ಲವೆಂದು ನಿನ್ನ ವಾಸವ ದತ್ತಾ ದೇವಿಯ ಚರಣಗಳ ಮೇಲೆ ಆಣೆಯನ್ನಿಡುವೆನು. ಅವನು ಮಾಡಿದ ವೃತ್ತಾಂ ತವನ್ನು ಕೇಳಬೇಕೆಂಬ ಕುತೂಹಲವೂ ಬಲವಾಗಿರುವುದು ' ಎಂದು ಬಲಾತ್ಕರಿ ಸಲು ; ಕಾಂಚನಮಾಲೆಯು ಎಲೆ ಮದನಿಕೆಯೇ, ನೀನು ದೃಢವಾದ ಚಿತ್ರ ವೃತ್ತಿಯುಳ್ಳವಳಾದಲ್ಲಿ ಹೇಳುವೆನು, ಕೇಳು. ನಾನು ರಾಯನಿರುವ ದಂತದ ಹಜಾ ರದಿಂದ ಹೊರಟುಬರುತ್ತಿರಲು, ಸುಸಂಗತೆಯು ಅಧಿಕವಾದ ಸಂತೋಷಯುಕ್ತ ೪ಾಗಿ, ಅವಳ ಕೌಂಕುಳಲ್ಲಿ ಇರುವ ಸೀರೆ ಕುಪ್ಪುಸವಂ ಇರುಕಿಕೊಂಡು ಏನೋ ಕೆಲವು ವಸ್ತುಗಳನ್ನು ಸೋಗಿಲಲ್ಲಿ ಕಟ್ಟಿ ಕೊಂದು, ಮಂದಹಾಸವಂ ಗೆಯುತ್ತ ಚಿತ್ರ ಶಾಲೆಯ ಒತ್ತಿನಲ್ಲಿ ನಿಂತು ಕೈ ಬೀಸಿಬೀಸಿ ಕರೆದು ವಿದೂಷಕನ ಸವಿಾಪವಂ ಸೇರು ತಿರಲು ; ನಾನು ಈ ಸುಸಂಗತೆಯ ಸಂತೋಷಕೆ ಏನೋ ಒಂದು ಕಾರಣವಿರುವು ದೆಂದು ಯೋಚಿಸಿ ಅವರಿಗ್ಯರೂ ಕಾಣದಂತೆ ಆ ಚಿತ್ರಶಾಲೆಯಂ ಬಳಸಿಕೊಂಡು ಒಳಪೊಕ್ಕು ಮರೆಗೊಂಡು ನಿಂದಿರಲು, ಸುಸಂಗತೆಯೂ ವಿದೂಷಕನೂ ಅಲ್ಲಿಗೆ ಬಂದು, ಕೆಲವು ವಾಕ್ಯಗಳನ್ನು ಆಡಿದರು, ಆದರೆ ಅನ್ನ ವನ್ನಿತ್ತು ಸಾಕಿದವರಿಧೆ ಮೋಸವಂ ಗೆಯ್ಯುವ ಜನರಿಗೆ ದೇವನು ಹೇಗೆ ಬುದ್ದಿಯನ್ನೀಯುತ್ತಿರುವನೆಂದು ಹೃದಯದಲ್ಲಿ ಸಂತಾಪವುಂಟಾಗುವುದು ?” ಎನಲು ; ಮದನಿಕೆಯು-1, ಎಲೌ ಕಾಂ ತೆಯೇ, ಅವರಿತ್ವ ರೂ ಏನೆಂದು ಮಾತನಾಡುತ್ತ ಇದ್ದರು ಅದನ್ನು ಪೇಳು ” ಎನಲು; ಅವಳು- ( ವಸಂತಕನಾಡಿದ ವಾಕ್ಯವನ್ನು ಕೇಳು. " ಎಲೆ ಸುಸಂಗತೆಯೇ, ನಮ್ಮ ರಾಜೇಂದ್ರನ ಹೃದಯದಲ್ಲಿ ಪುಟ್ಟಿರುವ ಸಂತಾಪ ಪರಿಹಾರಕ್ಕೆ ಸಾಗರಿಕೆಯಂ ಬಿಟ್ಟು ಇನ್ನೊಬ್ಬಳು ಯೋಗ್ಯಳಾಗುವಳೇ ? ಇದಕೆ ಪ್ರತಿಕ್ರಿಯೆಯನ್ನು ಯೋಚಿಸಿ