ಪುಟ:ವತ್ಸರಾಜನ ಕಥೆ.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವತ್ಸ ರಾಜನ ಕಥೆ, - ೧೮ ದೀಯೋ ಪೇಳುವಳಾಗು ' ಎಂದು ನುಡಿದನು ?” ಎನಲು ; ಮದನಿಕೆಯು= ಎಲ್‌ ಕಾಂತೆಯೇ, ಈ ಪ್ರಕಾರವಾಗಿ ಹೇಳಿದ ವಿದೂಷಕನಿಗೆ ಸುಸಂಗತೆಯು ಏನು ಪ್ರತ್ಯುತ್ತರವಂ ಪೇಳಿದಳು ? ?” ಎಂದು ನುಡಿಯಲಾಕಾಂಚನಮಾಲೆಯು-- ಎಲೆ ಕಾಂತೆಯೇ, ಸುಸಂಗತೆಯು ಹೇಳಿದ ವಾಕ್ಯವೇನೆಂದರೆ, ' ಎಲೈ • ವಿದೂಷಕನೇ. ವಾಸವದತ್ತಾ ದೇವಿಯು ಚಿತ್ರಪಟವ ನೋಡಿದುದರಿಂದ ಅಧಿಕವಾದ ಸಂದೇಹ ದೊಡನೆ ಕೂಡಿದವಳಾಗಿ ಶಕುಂತಶಾಲೆಯಲ್ಲಿದ್ದ ಎನ್ನ ಕರೆಯಿಸಿ, ಎಲೆ ಬಾಲೆಯೇ ನೀನು ಬಾಲ್ಯದಿಂದ ಎನ್ನಿ೦ದಲೇ ಸಮಸ್ತ ವಿದ್ಯಾಬುದ್ದಿ ಗಳಂ ಕಲಿತು ವೃದ್ಧಿಯಂ ಪೊಂದಿರುವೆಯಾದುದರಿಂದಲೂ ಸಾಗರಿಕೆಯಲ್ಲಿ ಬಹಳ ಸಲಿಗೆ ಇರುವುದರಿಂದಲೂ, ಪೇಳುವುದೇನೆಂದರೆ ಅನೇಕ ಪ್ರಯತ್ನ ಗಳಿಂದಲೂ ಈ ನಾಗರಿಕೆಯನ್ನು ರಾಯನ ದೃಷ್ಟಿಗೆ ಬೀಳದಂತೆ ಸಲಹುತ್ತಿರುವಳಾಗು. ಯಾವ ಕಾಲಕ್ಕಾದರೂ ಪ್ರಶಾಲೆ ಯಿಂದ ಈಚೆಗೆ ಕಾಲೆತ್ತಿ ಮಡಗದಂತೆ ಜಾಗರೂಕಳಾಗಿ ಕಾದಿರುವುದೆಂದು ಹೇಳಿ, ತಾನು ಧರಿಸಿದ್ದ ಆಭರಣಗಳನ್ನೂ ಸೀರೆ ರವಕೆಗಳನ್ನೂ ಸಹ ಕೊಟ್ಟಿರು ವಳು ಎಂದು ಅವೆಲ್ಲವಂ ತೋರಿಸಲು, ಆ ವಿದೂಷಕನು ಆಭರಣ ವಸ್ತ್ರಗಳಂ ನೋಡಿ- ಎಲೆ ಸುಸಂಗತೆಯೇ, ಈ ರೀತಿಯಲ್ಲಿ ದೇವಿಯ ಚಿತ್ರದಲ್ಲಿ ಸಂಶಯವು ಬಲವಾಗಿ ಹಬ್ಬಿರುವಲ್ಲಿ ನಮ್ಮ ರಾಯನಿಗೆ ಆ ಸಾಗರಿಕೆಯ ಸಂಗವು ಹೇಗೆ ಉಂಟಾ ದೀತು ! ಇದಕ್ಕೆ ಬಲವಾಗಿ ಒಂದು ಉಪಾಯವನ್ನು ಕಲ್ಪಿಸಿದಲ್ಲದೆ ಕಾರೈಸಿದ್ದಿಯು ಕೈಗೂಡಲಾರದೆಂದು ನುಡಿಯಲು ; ದುಷ್ಟ ಳಾದ ಸುಸಂಗತೆಯು ಕ್ಷಣಮಾತ್ರವು ಯೋಚಿಸಿ, ಎಲೈ ವಿದೂ ಕನೇ, ದೇವಿಯು ಅಪ್ಪಣೆಯನ್ನಿತ್ತಿರುವುದು ಹಾಗಿರಲಿ. ನಮ್ಮ ಸ್ವಾಮಿಯಾದ ರಾಜೇಂದ್ರನಿಗೆ ಹಿತವನ್ನು ೦ಟುಮಾಡುವುದೇ ಎನಗೆ ಮುಖ್ಯ ವಾಗಿ ಇರುವುದು, ಈಗ ಒಂದು ಉಪಾಯವಂ ಯೋಚಿಸಿರುವೆನು ಕೇಳು. ದೇವಿ ಯು ಕೊಟ್ಟಿರುವ ಆಭರಣ ವಸ್ತ್ರಗಳಿಂದ ನಾಗರಿಕೆಗೆ ವಾಸವದತ್ತಾ ದೇವಿಯ ವೇಷ ವಂ ಧರಿಸಿ, ನಾನು ಕಾಂಚನಮಾಲೆಯ ವೇಷವಂ ಧರಿಸಿಕೊಂಡು ಸಂಧ್ಯಾಕಾಲವಾ ಗುತ್ತಲೇ ಈ ಚಿತ್ರಮಂಟಪದ ಸವಿಾಪಕ್ಕೆ ಸಾಗರಿಕೆಯಂ ಕರೆದುಕೊಂಡು ಬರುವೆನು. ನೀನು ಈ ಸ್ಥಳದಲ್ಲೇ ಕಾದಿರುವನಾಗು. ಈ ಮಕರಂದೋದ್ಯಾನದಲ್ಲಿರುವ ಮಾಧ ವೀ ಮಂಟಪದಲ್ಲಿ ಸಾಗರಿಕೆಗೂ ರಾಯನಿಗೂ ಸಂಗವನ್ನು ೦ಟು ಮಾಡಿಸಬಹುದು ? ಎಂದು ನುಡಿಯಲಾವಾಕ್ಯಕ್ಕೆ ವಿದೂಷಕನು ಅಧಿಕವಾದ ಸಂತೋಷದಿಂ ಯುಕ್ತ ನಾಗಿ, ಎಲೆ ಸುಸಂಗತೆಯೇ, ನಿನ್ನ ಬುದ್ದಿಯು ಬೃಹಸ್ಪತ್ಯಾಚಾರನ ಬುದ್ದಿಯನ್ನು ಧಿಕ್ಕರಿಸುತ್ತಿರುವುದು, ಆದರೆ ನೀನು ಈಗ ಹೇಳಿದಂತೆ ನಾಗರಿಕೆಯನ್ನು ಕರೆದು ಕೊಂಡುಬರುವಳಾದರೆ ನಾನು ರಾಯನನ್ನು ಮಾಧವೀಮಂಟಪದಲ್ಲಿ ಕುಳ್ಳಿರಿಸಿ ಸಂಧ್ಯಾ ಕಾಲಕ್ಕೆ ಸರಿಯಾಗಿ ಬಂದು ಇಲ್ಲಿ ಕಾದುಕೊಂಡಿರುವೆನೆಂದು ನುಡಿದನು ?” ಎನಲು ; ಮದನಿಕೆಯು 11 ಎಲೌ ಕಾಂಚನಮಾಲೆಯೇ, ವಿದೂಷಕನಂತೂ ರಾಯನ