ಪುಟ:ವತ್ಸರಾಜನ ಕಥೆ.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧6 - ಕರ್ಣಾಟಕ ಕಾವೈಕಲಾನಿಧಿ, - ಕಡೆಯವನೆಂಬುವುದು ಸಿದ್ದವಾಗಿಯೇ ಇದೆ. ಈ ಸುಸಂಗತೆಯು ಪಾಪದಲ್ಲಿ ಭೀತಿ ಯಿಲ್ಲದೆ ಪರಲೋಕದ ಸದ್ಧ ತಿಯೂ ಕೆಡುವುದೆಂಬ ಮತಿಯಂ ನಿಲಿಸದೆ ಅನ್ನ ವಸ್ತ್ರ ಗಳನ್ನಿತ್ತು ಪ್ರತ್ರಿಗಿಂತಲೂ ಹೆಚ್ಚಾದ ಪ್ರೇಮದಿಂದ ಸಾಕಿದ ಒಡತಿಯನ್ನು ವಂಚಿ ಸುವ ಬುದ್ದಿ ಯಂ ಮಾಡಿದಳಲ್ಲ. ಇಂಥ ಬುದ್ದಿಯು ಇವಳಿಗೆ ಹೇಗೆ ಬಂದುದು ! ೨) ಎಂದು ನುಡಿಯಲಾಕಾಂಚನಮಾಲೆಯು-- ಎಲೆ ಕಾಂತೆಯೇ, ಕೆಟ್ಟ ತನಕೆ ಒಡಂ ಬಟ್ಟಂಥ ಜನರಿಗೆ ಪಾಪದಲ್ಲಿ ಭೀತಿಯ ಸದ್ಧ ತಿಯಂ ಸಾಧಿಸುವ ಬುದ್ದಿಯ ಹೇಗೆ ಹುಟ್ಟಿತು ! ಆದರೆ ಈಗ ನೀನು ಎಲ್ಲಿಗೆ ಪೋಗಲಿಚ್ಛಿಸುತ್ತಿರುವೆ ? ೨” ಎನ ಲು ; ಅವಳು- ಎಲೌ ಕಾಂತೆಯೇ, ರಾಯನ ಶರೀರದಲ್ಲಿ ಆಯಾಸವುಂಟಾಗಿರು ವುದನ್ನು ವಿಚಾರಿಸಿಕೊಂಡು ಬರುವುದೆಂದು ಕಾಂಚನಮಾಲೆಯಂ ಕಳುಹಿಸಿದೆನು, ಅವಳೂ ಪೋಗಿ ಬಹಳ ಹೊತ್ತಾದುದು, ಏನು ನಿಮಿತ್ತ ಮೆಂದು ತಿಳಿದುಬರುವಂತೆ ದೇವಿಯು ಎನಗೆ ಅಪ್ಪಣೆಯನ್ನಿತ್ತುದರಿಂದ ನಿನ್ನನ್ನು ಅರಸಿಕೊಂಡು ಇಲ್ಲಿಗೆ ಬಂದೆ ನು?” ಎಂದು ನುಡಿಯಲು ; ಕಾಂಚನಮಾಲೆಯು ನಸುನಕ್ಕು, ' ಎಲೆ ಮುಗ್ಧಳಾದ ಮದನಿಕೆಯೇ, ಕೇಳು. ರಾಯನು ತನ್ನ ದೇಹಕ್ಕೆ ಆಯಾಸವೆಂಬ ನೆವದಿಂದ ಮನ್ನ ಥತಾಪವನ್ನು ಮರೆಗೆಯ್ಯುತ್ತ ದಂತದ ತೊಟ್ಟಿಯಲ್ಲಿ ಪವಡಿಸಿರುವನು, ನಮ್ಮ ದೇವಿ ಯು ಇಂಥ ವಂಚನವನ್ನು ತಿಳಿಯದೇ ಇದ್ದುದರಿಂದ ರಾಯನಿಗೆ ದೇಹಾಯಾಸವು ಯಥಾರ್ಥವಾಗಿ ಪ್ರಾಪ್ತವಾಗಿರುವುದೆಂದು ತಿಳಿದು ಎನ್ನನ್ನು ಕಳುಹಿಸಿಕೊಟ್ಟಳು. ಈಗ ನಡೆದಿರುವ ಸಂಗತಿಯನ್ನು ವಿಜ್ಞಪಿಸುವ, ನಡೆ ” ಎಂದು ಅವಳಿಂದೊಡ ಗೂಡಿ ಪೋಗಲು ; - ಇತ್ತಲು, ರಾಯನು ಸಾಗರಿಕೆಯಂ ಸ್ಮರಿಸಿ, ಉಕ್ಕಿಬರುವ ಮನ್ಮಥಸಂತಾಪ ವನ್ನು ಸಹಿಸಲಾರದೆ, ತನ್ನ ಮನವಂ ಕುರಿತು, ಎಲೆ ಮನವೇ, ಮನ್ಮಥನಿಂದುಂಟಾ ಗಿರುವ ಸಂತಾಪವನ್ನು ಈಗ ಸಹಿಸಲಾರದೆ ಏಕೆ ಕುದಿಯುತ್ತಲಿದ್ದೀಯೆ ? ಆ ಚಂಚಲಾಕ್ಷಿಯಾದ ಕಾಂತೆಯಂ ಹೊರತು ಇನ್ನೊಬ್ಬ ಭೂ ನಿನಗೆ ಪುಟ್ಟಿರುವ ಸಂತಾ ಪವಂ ಪರಿಹರಿಸಲಾರಳೋ ? ಆದರೂ ಎನ್ನ ಮೇಲೆ ದೋಷವನ್ನು ಕಲ್ಪಿಸಬೇಡ. ಯಾವ ನನ್ನಿ೦ದ ಆ ಕಾಂತೆಯು ಅತ್ಯಂತ ಪ್ರಯಾಸದಿಂದ ಪಿಡಿಯಲ್ಪಟ್ಟವಳಾಗಿ ಸಾಂ ದ್ರವಾದಂಥ ಶ್ರೀಗಂಧರಸದಂತೆ ತಂಪಾಗಿರುವ ಆ ಕಾಮಿನಿಯ ಕರಸ್ಪರ್ಶನವು ನಿನಗೆ ಉಂಟುಮಾಡಲ್ಪಡಲಿಲ್ಲವೋ ಏನು ? ಹೀಗಿರುವಲ್ಲಿ ನೀನು ತಾವವನ್ನು ಪೊಂದಬೇಡ ?” ಎಂದು ನುಡಿದು, ಮರಳಿ ಹೇರಳವಾಗಿ ನಿಟ್ಟುಸಿರುಗಳಂ ಬಿಟ್ಟು << ಆದರೆ ಮನಸ್ಸೆಂಬುವುದು ಅಣುರೂಪವಾಗಿ ಚಂಚಲವಾಗಿ ಕಣ್ಣಿಗೆ ಕಾಣತಕ್ಕು ದಲ್ಲವಾಗಿ ಗುರಿಗೆಯ್ಯುವುದಕ್ಕೆ ತರವಲ್ಲದೆ ಇರುವರಾದರೂ ಅಂಥ ಮನಸ್ಸನ್ನು ಮನ್ಮಥನು ಅರವಿಂದ ಅಶೋಕ ಚೂತ ಮಲ್ಲಿಗೆ ನೀಲೋತ್ಪಲಗಳೆಂಬ ಐದು ಬಾಣಗ ಳಿಂದಲೂ ಏಕಕಾಲದಲ್ಲಿ ಹೇಗೆ ಗುರಿಗೆಯ್ದು ಪೊಡದಿರುವನೋ ಎಂದು ಎನಗೆ ಅಧಿಕ