ಪುಟ:ವತ್ಸರಾಜನ ಕಥೆ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವತ್ಯರಾಜನ ಕಥೆ. - ಮಾನಕೆ ಅನುಗುಣವಾದ ಮತ್ಯಾದೆಗಳನ್ನು ೦ಟುಮಡುವನಾಗು ' ಎಂದು ಅಪ್ಪಣೆ ಯನಿತ್ತು, ಅಂತಃಪುರವ ಪೊಕ್ಕು ವಾಸವದತ್ತಾ ದೇವಿಯಿಂದೊಡಗೊಂಡು, ಮಜ್ಜನ ಭೋಜನಂಗಳಂ ಗೈದು, ಮಣಿ ಹಜಾರದಲ್ಲಿರುವ ರತ್ನ ಪೀಠದಲ್ಲಿ ಕುಳಿತು ಎಲೆ ವಾಸವದತ್ತೆ, ನಿನ್ನ ಊಳಿಗದ ಹೆಣ್ಣುಗಳು ಅಂಚೆಯ ಮರಿಗಳಿಗೆ ನಡೆಗಳನ್ನೂ, ಐದು ಬಣ್ಣದಿಂದಂಕಿಂಗಳಾದ ಗಿಳಿಮರಿಗಳಿಗೆ ಕಾಮಸೂತ್ರವನ್ನೂ , ನವಿಲುಮರಿ ಗಳಿಗೆ ಕವಲು ದೊರೆದಂತೆ ನಾವ್ಯಗಳನ್ನೂ ಸಹ ಕಲಿಸುವ ಚಮತ್ಕಾರವು ಬಹು ಚೆನ್ನಾ ದುದೆಂದು ಸರಸ ವಚನಗಳಂ ನುಡಿಯುತ್ತಿರಲು ಇತ್ತಲು ಮಂತ್ರಿ ಪ್ರನಾದ ಗಂಧರಾಯಣನು ರಾಯನು ಅಪ್ರಣೆ ಯನ್ನಿತ್ಯಂತೆ ಕಾರವಂ ನಡೆಯಿಸಿ, ತನ್ನ ಮನೆಯಂ ಕುರಿತು ಬರುತ್ತಿರಲು ; ಮಧ್ಯಮಾರ್ಗದಲ್ಲಿ ವಿಭೂತಿರುವಾ ಕ್ಷಿಗಳಿ೦ದಲೂ ರುದ್ರಾಕ್ಷಿಯ ಜಪಮಾಲೆ ಯಿಂದಲೂ ದರ್ಭೆಯ ವವಿತ್ರದಿಂದಲೂ ಅಲಂಕೃತನಾಗಿ, ಸೂರನಂತೆ ಅತ್ಯಂತ ತೇಜೋಮಯನಾಗಿ, ಹಸ್ತಗಳಲ್ಲಿ ಪ್ರಶಸ್ತವಾದ ಫಲಗಳಂ ಪಿಡಿದು ನಿಂತಿರುವ ವಿಕ್ರ ಮಬಾಹುರಾಯನ ಪುರೋಹಿತನು ಮಂತ್ರಿಯಂ ಕುರಿತು- ಎಲೈ, ಪೂಜ್ಯನಾದ ಮಂತ್ರಿಯೇ ! ದೇವಾಧಿಪತಿಯಾದ ಇ೦ದ್ರನು ಮಂತ್ರಿಯಾದ ಬೃಹಸ್ಪತಿಯಿಂದ ಹೇಗೆ ಸಂತೋಷವಂ ಪೊಂದಿ ಶತ್ರುಗಳಾದ ರಾಕ್ಷಸರಂ ಜಯಿಸಿ ಸುಖದಲ್ಲಿರು ವನೋ, ರಾಜಾಧಿರಾಜನಾದ ಈ ವತ್ಸ ರಾಜನೂ ನಿನ್ನಿ, ೦ದ ಅದೇರೀತಿಯಿಂದ ಸಂತೋಷಕ್ಕೆ ಪಾತ್ರನಾಗಿ ನೀತಿಮಾರ್ಗವನ್ನು ಅನುಸರಿಸಿ ಶತ್ರುಗಳಂ ಜಯಿಸಿ ಧರ್ಮದಿಂ ಪ್ರಜಾಪಾಲನೆಯಂ ಗೆಯ್ಯುವನೆಂಬ ವಾರ್ತೆಯನ್ನು ರಾಯನ ಕೀರ್ತಿ ಕಾಂತೆಯಿಂದ ಕೇಳಿ, ನ ತ್ಯಕ್ಷವಾಗಿ ನೋಡಲಿಕ್ಕೆಯಿಂದ ಇಲ್ಲಿಗೆ ಬಂದಿರುವೆ ೨೨ ನೆಂದು ನುಡಿಯಲು ; ಮಂತ್ರಿಯು ತೇಬೊನಿಧಿಯಾದ ಆ ಬ್ರಾಹ್ಮಣನಂ ನೋಡಿ ಒತ್ತಿನಲ್ಲಿ ಬರುವ ಮಾಧವನೆಂಬ ಚಾರನಂ ಕುರಿತು~ ( ಎಲೈ, ಮಾಧವನೇ, ಮುಂದುಗಡೆಯಲ್ಲಿ ನಿಂತಿರುವ ಈ ಬ್ರಾಹ್ಮಣನನ್ನು ನಮ್ಮ ಮನೆಗೆ ಕರೆದುಕೊಂಡು ಬರುವನಾಗು ” ಎಂದು ಹೇಳಿ ತನ್ನ ಮನೆಯಂ ಹೋ೦ದಿ, ಸ್ನಾ ನಭೋಜನವಂ. ಗೈದು, ಹಜಾರಕ್ಕೆ ಬಂದು ಕುಳಿತು, ಚಾರನು ಕರೆದುಕೊಂಡು ಬಂದ ಬ್ರಾಹ್ಮಣ ನಿಗೆ ವಂದನೆಯಂ ಗೈದು, ಅವನು ಆಶೀದ್ವಾದ೦ಗೈದು ಕೊಟ್ಟ ಫಲವನ್ನು ಭಕ್ತಿ ಯಿಂದ ಎರಡು ಹಸ್ಯಗಳಲ್ಲಿ ತೆಗೆದುಕೊಂಡು ಅವನಂ ಪೀಠದಲ್ಲಿ ಕುಳ್ಳಿರಿಸಿ ( ಎಲೈ, ಬ್ರಾಹ್ಮಣೋತ್ತಮನೇ ! ನೀನು ಯಾರು ? ಯಾವ ದೇಶದಿಂದ ಏನು ನಿಮಿತ್ತವಾಗಿ ಇಲ್ಲಿಗೆ ಬಂದಿರುವೆ ? ನಿನ್ನ ವೃತ್ತಾಂತವೆಲ್ಲವನು ಪೇಳುವನಾಗು ?” ಎ೦ದು ನುಡಿಯಲಾಬ್ರಾಹ್ಮಣನು ಮಂತ್ರಿಯ ಮೃದುನುಡಿಗಳಂ ಕೇಳಿ, ಸಂತೋ ನವಂ ತಾಳಿ-ಲೋಕದಲ್ಲಿ ಐಶ್ವರವುಳ್ಳಂಥ ಪುರುಷರಿಗೆ ಪೂಜ್ಯರಲ್ಲಿ ಭಕ್ತಿಯೂ, ವಿನಯವೂ ಸಹ ಪುಟ್ಟುವುದು ದುರ್ಲಭವಾಗಿರುವುದು ; ಇಷ್ಟು ಐಶ್ವಶ್ಯವಿದ್ದರೂ