ಪುಟ:ವತ್ಸರಾಜನ ಕಥೆ.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧ - ಕರ್ನಾಟಕ ಕಾವ್ಯಕಲಾನಿಧಿ, - ರಾಯನು ಶೀಘ್ರದಿಂದ ಹಾಸಿಗೆಯಲ್ಲಿದ್ದು ಕುಳಿತುಕೊಂಡು, ( ಎಲೈ ಮಿತ್ರನೇ, ಕೋಮಲಾಂಗಿಯ ಸಂದರ್ಶನವು ಎನಗೆ ಉಂಟಾಗುತ್ತಿರುವುದೋ ಪೇಳು ಎನಲು; ವಿದೂಷಕನು ಅಧಿಕವಾದ ಗರ್ವವಂ ತಾಳಿ, ( ಎಲೈ ರಾಯನೇ, ಬುದ್ಧಿಯಿಂದ ಸುರಗುರುವಾದ ಬೃಹಸ್ಪತಿಯನ್ನು ಜಯಿಸಿರುವೆನಾದುದರಿಂದ ನಾನು ಮಂತ್ರಿಯಾ ಗಿರುವೆನು. ಎನ್ನ ಮಾತಿನಲ್ಲಿ ನಿನಗೆ ನಿಶ್ಚಯಜ್ಞಾನವಿಲ್ಲವೆ ಹೇಳು ?” ಎನಲು ; ರಾಯನು ವಿನಯದಿಂದೊಡಗೂಡಿ ವಿದೂಷಕನು ಏನೋ ಒಂದು ಸಂವಿಧಾನವನ್ನು ರಚಿಸಿ ಆ ಕಾಂತೆಯನ್ನು ಕೈಗೆ ತೆಗೆದುಕೊಂಡಿರುವನಂತೆ ತೋರುವುದೆಂದು ಮನ ದಲ್ಲಿ ಯೋಚಿಸಿ, “ ಅಯ್ಯಾ ಮಿತ್ರನೇ, ನೀನು ಹೇಳುವ ವಾಕ್ಯದಲ್ಲಿ ಎನಗೆ ಸಂದೇ ಹವೇ ಇಲ್ಲ. ಆದರೂ ನೀನು ಮಾಡಿರುವ ಸಂವಿಧಾನವನ್ನು ಕೇಳಿ ಸಂತೋಷ ವನ್ನು ಹೊಂದಬೇಕಾಗಿರುವುದು. ಆದುದರಿಂದ ನೀನು ಮಾಡಿರುವ ಕಾರವನ್ನು ವಂಚಿಸದೆ ಪೇಳುವನಾಗು ?” ಎಂದು ಬೆಸಗೊಳಲು ; ವಿದೂಷಕನು ರಾಯನ ಕತ್ರ ನ್ನು ತಬ್ಬಿಕೊಂಡು, ತಾನೂ ಸುಸಂಗತೆಯ ಯೋಚಿಸಿರುವ ಸಂಧಾನವನ್ನು ಪೇಳ ಲು; ರಾಯನು ಪಾರವಿಲ್ಲದ ಸಂತೋಷವಂ ಪೊಂದಿ, ತನ್ನ ಹಸ್ತದಲ್ಲಿದ್ದ ನವರತ್ನ ಮಯವಾದ ಕಡಗಗಳಂ ತೆಗೆದು, ಎಲೈ ವಿದೂಷಕನೇ, ನಿನ್ನ ಜಾಣ್ಮಗೆ ಮೆಚ್ಚಿ ದೆನು. ನಿನ್ನಂಥ ಬುದ್ಧಿಶಾಲಿಯು ಮೂರುಲೋಕದಲ್ಲ ಇರಲಾರನು ” ಎಂದು ಕೊಡಲು ; ವಿದೂಷಕನು ರತ್ನ ಕಟಕಗಳನ್ನು ಹಸ್ತದಲ್ಲಿ ಧರಿಸಿ, ತನ್ನ ದೇಹವನ್ನು ತಾನೇ ನೋಡಿಕೊಂಡು, 7 ಎಲೈ ರಾಜೇಂದ್ರನೇ, ಅನೇಕರತ್ನ ಗಳಿ೦ದ ಮಂಡಿತ ವಾದ ಈ ಕಡಗಗಳಿಂದ ಅಲಂಕೃತವಾದ ಎನ್ನ ದೇಹವನ್ನು ಮನೆಗೆ ಹೋಗಿ ಎನ್ನ ಹೆಂಡತಿಗೆ ತೋರಿಸಿ ಬರುವೆನು ” ಎಂದು ಪೋಗುತ್ತಿರಲು; ಎಲೈ ಮೂರ್ಖನೇ, ಮನೆಗೆ ಪೋಗುವುದು ಯುಕ್ತವಲ್ಲ. ಈಗ ಪ್ರಾಪ್ತವಾಗಿರುವ ಕಾರವೆಂಥದು. ಈಗ ನೀನು ಪಿಡಿದಿರುವ ಕಾರವನ್ನು ಕೊನೆಮುಟ್ಟಿಸಿದ ಬಳಿಕ ಎಲ್ಲಿ ಬೇಕಾದರೂ ಪೋಗಬಹುದು, ಆದರೆ ಆ ಕಾಂತೆಯ ನಾಮಧೇಯವನ್ನು ನೀನು ತಿಳಿದಿರುವೆಯಾ? ಎಂದು ಹೇಳಿದ ರಾಯನಂ ಕುರಿತು ( ಅಯ್ಯಾ ರಾಜೇಂದ್ರನೇ, ಸುಸಂಗತೆಯು ಅವಳನ್ನು ಸಾಗರಿಕೆಯೆಂದು ಕರೆಯುತ್ತಲಿರುವಳಾದುದರಿಂದ ಅದೇ ನಾಮವಾಗಿರ ಬೇಕೆಂದು ಊಹಿಸಿದೆನು ” ಎನಲು ; ರಾಯನು – “ ಎಲೈ ಮಿತ್ರನೇ, ಸಾಯ೦ಕಾ ಲಕೆ ಇನ್ನು ಎಷ್ಟು ಗಳಿಗೆ ಉಳಿದಿರುವುದು ವಿಚಾರಿಸುವನಾಗು ? ೨” ಎಂದು ನುಡಿ ಯಲು ; ವಿದೂಷಕನು,- ( ಎಲೈ -ಸ್ವಾಮಿಯೇ, ನೀನು ನೋಡುವುದಿಲ್ಲವೋ ಏನು ? ಸಹಸ್ರರಶ್ಮಿಯಾದ ಸೂರನು ಅಧಿಕವಾದ ಅನುರಾಗದಿಂದೊಡಗೂಡಿ ಸಂಜೆ ಯೆಂಬ ಕಾಂತೆಯಿಂದ ಮಾಡಲ್ಪಟ್ಟ ಸಂಕೇತಸ್ಥಾನಕ್ಕೆ ಪೋಗುವನೋ ಎಂಬಂತೆ ಅಸ್ತಗಿರಿಯ ಸಮೀಪದ ಅರಣ್ಯ ಮಧ್ಯವನ್ನು ಹೊಂದುತ್ತಿರುವನು ?” ಎಂದು ನುಡಿ ಯಲು ; ರಾಯನು ಹಾಸಿಗೆಯಿಂದೆದ್ದು ಗವಾಕ್ಷದ್ವಾರದಿಂದ ಸೂರನನ್ನು ನೋಡಿ,