ಪುಟ:ವತ್ಸರಾಜನ ಕಥೆ.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವತ್ಸರಾಜನ ಕಥೆ. - ೧೧ « ಇನ್ನೇನು ಸಂಧ್ಯಾಕಾಲವಾದುದು, ಆದರೆ ಸೂರನು ಒಂದು ಗಾಲಿಯುಳ್ಳ ತನ್ನ ರಥವು ಅಧಿಕ ವಿಶಾಲವಾದಂಥ ಮಾರ್ಗವನ್ನು ಸುತ್ತಿ ಮರಳಿ ಪ್ರಾತಃಕಾಲವಾ ಗುತ್ತಲೇ ಸಮಸ್ತ ಲೋಕವನ್ನೂ ಸುತ್ತುವುದಕ್ಕೆ ಯೋಗ್ಯವಾಗುತ್ತಲಿದೆಯೋ ಇಲ್ಲವೋ ಎಂಬ ಚಿಂತೆಯಂ ತಾಳಿ, ಸಂಧ್ಯಾಂಗನೆಯಿಂದ ಪುಟ್ಟ ಉಳಿದಿರುವ ? ತನ್ನ ಹಸ್ತಗಳಿಂದ ರಥಚಕ್ರವನ್ನು ಸ್ಪರ್ಶನವಂ ಗೆಯ್ಯುತ್ತ ಅಸ್ತಗಿರಿಯ ದಿಗ್ಯಾಗವನ್ನು ಪೊಂದಿರುವನು, ಮತ್ತು 1 ಎಲೆ ಕಮಲಲತೆಯೇ, ಈಗ ಸಮಯವಲ್ಲದುದರಿಂದ. ಪೋಗಿ ಮರಳಿ ಬಂದು ಮಲಗಿರುವ ನಿನ್ನ ನ್ನು ಎಬ್ಬಿಸುತ್ತಿರುವೆನು, ನೀನು ಯಾವು ದಕೂ ಯೋಚಿಸಬೇಡ ” ಎಂದು ತನ್ನ ಹಸ್ತ೦ಗಳಿ೦ದ ತಲೆಯಂ ಮುಟ್ಟಿ ಭಾಷೆ ಯಂ ಗೆಯ್ಯುವನೋ ಎಂಬಂತೆ ಅಸ್ತಗಿರಿಯ ಮಸ್ತಕದಲ್ಲಿ ಇರಿಸಲ್ಪಟ್ಟ ಪ್ರಶಸ್ತ ವಾದ ಹಸ್ತಗಳುಳ್ಳವನಾಗಿ ಅಸ್ತನಾಗುತ್ತಿರುವನು. ಆದುದರಿಂದ ನಾವಿರ್ವರೂ ಜಾಗರೂಕರಾಗಿ ಪರಿಮಳಭರಭರಿತವಾದ ಮಕರಂದೋದ್ಯಾನದ ಮಾಧವೀ ಮಂ ಟಪವಂ ಪೊಂದಿ ಪ್ರಾಣಕಾಂತೆಯು ಬರುವ ಸಮಯವನ್ನು ಕಾದಿರುವ ” ಎಂದು ನುಡಿಯುತ್ತಿದ್ದನು. ಎಂಬಲ್ಲಿಗೆ ಶ್ರೀ ಕೃಷ್ಯರಾಜ ಕಂಠೀರವರಿಂ ಲೋಕೋಪಕಾರಾರ್ಥವಾಗಿ ನವರಸಭರಿತವಾಗಿ ಕರ್ಣಾಟಕಭಾಷೆಯಿಂದ ವಿರಚಿಸಲ್ಪಟ್ಟ ಶ್ರೀ ಕೃಷ್ಯರಾಜ ಸೂಕ್ತಿ ಮುಕ್ತಾವಳಿಯೆಂಬ ಗ್ರಂಥದೊಳಿ ವತ್ಸರಾಜನ ಕಥೆಯಲ್ಲಿ ತ್ರಯೋದಕ ಗುಚ್ಛಂ ಸಂಪೂರ್ಣ ಸು. ಸ ಹದಿನಾಲ್ಕನೆಯ ಗುಚ್ಛಂ. ಅನಂತರದಲ್ಲಿ ಆ ವತ್ಸ ರಾಜನು ಅಧಿಕಸಂತೋಷದಿಂದ ಭರಿತನಾಗಿ, ವಿದೂ ಷಕನಿಂದೊಡಗೂಡಿ, ತಾನಿದ್ದ ಸ್ಥಳವಂ ಬಿಟ್ಟು ಮಕರಂದೋದ್ಯಾನವಂ ಪ್ರವೇಶಿ ಸಲು ; ವಿದೂಷಕನು ಎತ್ತಲೂ ಮೊತ್ತವಾಗಿ ಒತ್ತಿ ಬರುವ ಕತ್ತಲೆಯಂ ನೋಡಿ ರಾಯನಂ ಕುರಿತು- ಎಲೈ ರಾಜೇಂದ್ರನೇ, ಪ್ರಬಲವಾಗಿ ಮುಚ್ಚುತ್ತಿರುವ ವನ 15