ಪುಟ:ವತ್ಸರಾಜನ ಕಥೆ.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧8 - ಕರ್ಣಾಟಕ ಕಾವೈಕಲಾನಿಧಿ, - ರಾಜಿಯುಳ್ಳಂಥ ಮಹತ್ತರವಾದ ಕೆಸರಿನಿಂದ ಬಲಿತಿರುವ ಕಾಡಾನೆ ಕೊಣ ಹಂದಿ ಗಳ ಹಿಂಡಿನಂತೆ ಕದೋರಿ ಏರಿ ಪೂರ್ವದಿಕ್ಕನ್ನು ಮುಚ್ಚುತ್ತಿರುವ ಕತ್ತಲೆಯ ಮೊತ್ತವಂ ನೋಡ ವನಾಗು. ೨) ಎಂದು ನುಡಿಯಲು ; ರಾಯನು-- ಎಲೈ ಮಿ ತ್ರನೇ, ಚೆನ್ನಾಗಿ ಹೇಳಿರುವೆ. ಪರಮೇಶ್ವರನ ಕತ್ತಿನ ಕಾಂತಿಯನ್ನ ಪಹರಿಸುತ್ತಲಿ ರುವ ಈ ಕತ್ತಲೆಯ ಮೊತ್ತವು ನೀನು ಹೇಳಿದಂತೆ ಮೊದಲು ಪೂರ್ವ ದಿಕ್ಕನ್ನು ಮುಚ್ಚಿ, ಆ ಬಳಿಕ ಸಮಸ್ತ ದೆಸೆಗಳನ್ನೂ ವ್ಯಾಪಿಸಿ, ಕ್ರಮವಾಗಿ ಹಬ್ಬಿ ಅಧಿಕತ್ವವಂ ಪೊಂದಿ, ಸಮಸ್ಯೆ ಪ್ರಾಣಿಗಳ ನೇತ್ರಗಳನ್ನು ಕಾಣದಂತೆ ಮಾಡುತ್ತ, ತಾನಾಗಿ ವ್ಯಾ ಪಿಸುವದು ?” ಎಂದು ನುಡಿಯಲು ; ವಿದೂಷಕನು-- ಎಲೈ ಸ್ವಾಮಿಯೇ, ಮೊದ ಲೇ ಈ ವನಗಳು ವೃಕ್ಷಗಳ ಗುಂಪಿನಿಂದ ಯಾವಾಗಲೂ ಕತ್ತಲೆಯಂ ಸಲಹುತ್ತಿರು ವುದು, ಈಗಲಾದರೋ ಅಧಿಕವಾದ ಅಂಧಕಾರದಿಂ ವ್ಯಾಪ್ತವಾಗಿ ಇದು ಇಂಥ ಸ್ಥಳವೆಂಬ ಗೊತ್ತನ್ನು ತೋರಿಸದೆ ಇರುವುದು 12 ಎಂದು ನುಡಿಯಲು ; ರಾಯ ನು- ಎಲೈ ವಿದೂಷಕನೇ, ಕೇಳು. ನೀನು ಹೇಳಿದಂತೆ ಮುಂದೆ ಪೋಗುವು ದಕೆ ಮಾರ್ಗವೂ ಸಹ ಸ್ವಲ್ಪವಾದರೂ ಕಾಣಬರುವುದಿಲ್ಲವಾದರೂ ಮಂದಮಾರು ತವು ತೆಗೆದುಕೊಂಡು ಬರುವ ನರಿಮಳದಿಂದ ಇದು ಶ್ರೀಗಂಧದ ಸಾಲುಗಳೆಂತ ಲೂ, ಇದು ಸಂಪಗೆಯ ಗುಂಪುಗಳೆಂತಲೂ, ಇದು ಪಾದರಿಯ ಪಟ್ಟಿಗಳೆಂತಲೂ, ಇದು ತಂಡವಾಗಿರುವ ದುಂಡುಮಲ್ಲಿಗೆಯ ಸಾಲುಗಳೆಂತಲೂ ಲೇಸಾಗಿ ತಿಳಿಯಬ ಹುದು ?” ಎಂದು ನುಡಿಯಲು; ವಿದೂಷಕನು--( ಅಯ್ಯಾ ರಾಜೇಂದ್ರನೇ, ಗುಂಪು ಗೂಡಿ ತುಂಬಿ ಬರುವ ತು೦ಬಿಗಳಿ೦ದ ಇ೦ಬಾಗಿರುವ ಪುಷ್ಪಗಳ ಪರಿಮಳಗಳಿಂದ ಹತ್ತು ದಿಕ್ಕುಗಳನ್ನೂ ಮುಚ್ಚಿ ಹೆಚ್ಚಾದ ಸಂತೋಷಕೆ ತವರುಮನೆಯಾಗಿ ಇರುವ ಮಾಧವೀಮಂಟಪದ ಸವಿಾಪವಂ ಸೇರಿದೆವು. ನೀನು ವ್ಯಥೆಯನ್ನು ಹೊಂದದೆ ಧೈರವಂ ಪಡೆದು ಈ ಮಾಧವೀಮಂಟಪದಲ್ಲಿ ಇರುವನಾಗು. ನಾನು ಶೀಘ್ರದಿಂ ದ ಪೋಗಿ ವಾಸವದತ್ತಾ ದೇವಿಯ ವೇಷವಂ ಧರಿಸಿಕೊಂಡಿರುವ ಸಾಗರಿಕೆಯನ್ನು ಕರೆದುಕೊಂಡು ಬರುವೆನು” ಎಂದು ನುಡಿದು, ಅಲ್ಲಿಂದ ಪೊರಮಟ್ಟು, ಚಿತ್ರಶಾಲೆ ಯಂ ಕುರಿತು ಬರುತ್ತಿರಲು ; ಇತ್ತಲು, ರಾಯನೊಬ್ಬನೇ ಆ ಮಾಧವೀಮಂಟಪದ ಮಧ್ಯದಲ್ಲಿ ಹೃದ್ಯ ವಾಗಿರುವ ಪಚ್ಚೆಯ ಹಾಸರೆಗಲ್ಲಿನಲ್ಲಿ ಕುಳಿತು, ( ಎನಗೆ ಆಪ್ತನಾಗಿ ಹಿತವನ್ನೇ ಬಯಸುತ್ತಿರುವ ವಿದೂಷಕನು ಯಾವಾಗ ಬರುವನೋ ? ಅವನು ಬರುವವ ರೆಗೂ ತಾರುಮಾರಾಗಿ ಹೇರಳವಾದ ಈ ಮಾರಬಾಧೆಯನ್ನು ಎಂತು ಸಹಿಸಲಿ ? ಈಗ ವಿದೂಷಕನು ಮಾಡಿರುವ ಭೇದೋಪಾಯವ ದೇವಿಯು- ತಿಳಿದಳಾದರೆ ಎನ್ನ ಪ್ರಾಣಕಾಂತೆಗೆ ವಿದೂಷಕನಿಗೆ ಸಹ ಪ್ರಾಣಸಂದೇಹವನ್ನು ಉಂಟುಮಾಡದೆ ಬಿಡ ಳು, ಆದರೆ ಧರಪತಿಯಾಗ ವಾಸವದತ್ತೆಯೇ ಮನಕೆ ವಿಷಾದವನ್ನುಂಟುಮಾಡು