ಪುಟ:ವತ್ಸರಾಜನ ಕಥೆ.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೬ - ಕರ್ಣಾಟಕ ಕಾವ್ಯಕಲಾನಿಧಿ, - ನನ್ನಿಂದ ವೃದ್ದಿಯಂ ಪೊಂದಿ ಈಗಲೂ ಎನ್ನ ಕಟಾಕ್ಷಕೆ ಪಾತ್ರಳಾಗಿದ್ದು ಎನಗೆ ಇಂಥ ಮೋಸವಂ ಗೆಯುವಳೆಂಬುವ ವಾಕ್ಯದಲ್ಲಿ ಎನಗೆ ಇನ್ನೂ ಸಂದೇಹವೇ ತೋರುವುದು. ಆದರೂ ಪ್ರತ್ಯಕ್ಷವಾದರೂ ಪ್ರಮಾಣಿಸಿ ನೋಡಬೇಕೆಂಬ ಲೋಕ ಗಾದೆಯನ್ನು ಅನುಸರಿಸುವೆನು ಎಂದು ಆ ಚಿತ್ರಶಾಲೆಯ ಸವಿಾಪವಂ ಸೇರಲು ; ವಿದೂಷಕನು ಕಪ್ಪಸಕಲಾತಿಯ ಟೊಪ್ಪಿಗೆಯಂ ಹೊದ್ದು ಕೊಂಡು, ಮೇ ಲಾಗಿ ಬಂದು, ಸಾಗರಿಕೆಯು ಯಾವಾಗ ಬರುವಳೋ ಎಂದು ಕಾದಿದ್ದು, ವಾಸವ ದತ್ತಾ ಕಾಂಚನಮಾಲೆಯರ ಪಾದಗಳ ಸದ್ದುಗಳಂ ಕೇಳಿ- ಇದೋ ! ಈ ಚಿತ್ರ ಶಾಲೆಯ ಸವಿಾಪದಲ್ಲಿ ಪಾದಶಬ್ದವು ಕೇಳಿಬರುತ್ತಿರುವುದು, ಸಾಗರಿಕೆಯು ಬಂದ ಳು ” ಎಂದು ಊಹಿಸುತ್ತ, ದಿಕ್ಕು ದಿಕ್ಕುಗಳಂ ನೋಡುತ್ತ ಬರುತ್ತಿರಲು ; ಕಾಂಚನಮಾಲೆಯು-. ಎಲೌ ತಾಯೇ, ಇದೇ ಚಿತ್ರಶಾಲೆಯ ಬಾಗಿಲು !? ಎಂದು ನುಡಿದು, ಕರಡಿಯಂತೆ ಕಪ್ಪುಬಣ್ಣವ ತಾಳಿ ಕುಕ್ಕುಟಾಸನದಲ್ಲಿ ಕುಳಿತಿರುವ ವಿದೂಷಕನಂ ಕಂಡು,-. ಇದೋ ! ಒಡತಿಯೇ, ಇತ್ತ ನೋಡಿ, ಎಲ್ಲರಿಗೆ ಮೊದಲಾಗಿಯೇ ಬಂದು ಇಲ್ಲಿ ಕುಳಿತುಕೊಂಡು ಇಲಿಯಂ ಪಿಡಿಯುವುದಕೆ ಹೊಂ ಚುಗೊಂಡು ಕುಳಿತಿರುವ ಕೊತ್ತಿಯಂತೆ ಕಪ್ಪಸಕಲಾತಿಯಂ ಮುಸುಕನ್ನಿಟ್ಟು ಕುಳಿತಿರುವ ವಿದೂಷಕನನ್ನು ನೋಡಿ ” ಎಂದು ತೋರಿಸಲು ; ದೇವಿಯು ವಿದ ಷಕನಂ ಕಂಡು ನಸುನಕ್ಕು- ಎಲೆ ಕಾಂತೆಯೇ, ನೀನು ಕೈಸನ್ನೆ ಯಿಂದ ಆ ವಿದೂ ಷಕನಂ ಕರೆಯುವಳಾಗು ” ಎಂದು ನುಡಿಯಲು ; ಕಾಂಚನಮಾಲೆಯು ಚಿಟಿಕೆ ಯಂ ಹಾಕಿ ಕೈ ಬೀಸಿ ವಿದೂಷಕನಂ ಕರೆಯುವಳಾಗಲು ; ವಿದೂಷಕನು ಕುಳಿ ತಿದ್ದ ಸ್ಥಳವಂ ಬಿಟ್ಟು ಎದ್ದು ಸವಿಾಪವಂ ಸೇರಿ, ಕಾಂಚನಮಾಲೆಯನ್ನು ವೇಷಧಾ ರಿಯಾದ ಸುಸಂಗತೆಯೆಂದು ತಿಳಿದು, ( ಎಲೆ ಸುಸಂಗತೆಯೇ, ನೀನು ಧರಿಸಿರುವ ವೇಷದಿಂದ ಕಾಂಚನಮಾಲೆಗೂ ನಿನಗೂ ಸ್ವಲ್ಪವಾದರೂ ಭೇದ ಕಾಣುವುದಿಲ್ಲ. ಆದರೂ ನಾಗರಿಕೆಯು ಎಲ್ಲಿ ? ೨ಎಂದು ಕೇಳಲು; ಕಾಂಚನವ, ಲೆಯು ಮಾತ ನಾಡಿದರೆ ದನಿಯಂ ತಿಳಿದುಕೊಳ್ಳುವನೆಂದು, ಇವಳೇ ಸಾಗರಿಕೆಯೆಂದು ವಾಸ್ತವ ದಯಂ ಬೆರಳಿ೦ ತೋರಿಸಲು ; ವಿದೂಷಕನು ವಾಸವದತ್ತೆಯಂ ನೋಡಿ, ಆಶ್ಚ ರದಿಂದೊಡಗೂಡಿ, ( ಇವಳೇ ಸಾಕ್ಷಾತ ವಾಸವದತ್ತಾದೇವಿಯೇ ಬಂದಿರ್ಪಳು 2, ಎಂದು ನುಡಿಯಲು ; ದೇವಿಯು ಕಳವಳವಂಗೊಂಡು,.( ಈ ಬ್ರಾಹ್ಮಣ ಪುತ್ರನಾದ ವಿದೂಷಕನು ನನ್ನನ್ನು ಹೇಗೆ ತಿಳಿದನೋ ? ಇನ್ನೇನು ಪ್ರತ್ಯುತ್ತರವಂ ನುಡಿ ಯಲಿ ?” ಎಂದು ತನ್ನ ಮನದಲ್ಲಿ ಯೋಚಿಸುತ್ತಿರಲು ; ಅಷ್ಟರಲ್ಲೇ ವಿದೂಷಕನು ಚಿಟಿಕೆಯಂ ಹಾಕುತ್ತ, 11 ಎಲೆ ಸಾಗರಿಕಯೇ, ಶೀಘ್ರದಿಂದ ರಾಯನಿರುವ ಮಾಧವೀಮಂಟಪವಂ ಸೇರುವಳಾಗು ೨” ಎನಲು ; ದೇವಿಯು- ಎನ್ನನ್ನು ನಿಜವಾಗಿ ತಿಳಿದವನಲ್ಲ. ವೇಷವಂ ಧರಿಸಿ ಎನ್ನಂತೆ ಸಾಗ