ಪುಟ:ವತ್ಸರಾಜನ ಕಥೆ.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 'ವತ್ಸರಾಜನ ಕಥೆ, - ೧೧t ಯದೊಡನೆ ಮುನಿಸಿಕೊಂಡಿರುವ ಕಾಂತೆಯ ಕಪೋಲದಂತೆ ಕೆಂಪುಬಣ್ಣವ ತಾಳಿ ಎಲ್ಲಾ ದಿಕ್ಕುಗಳನ್ನೂ ಉಲ್ಲಾಸವಂ ಗೆಯ್ಯುತ್ತ ಒತ್ತಿ ಬರುವ ಕತ್ತಲೆಯ ಮೊತ್ತವಂ ಕತ್ತರಿಸುತ್ತ ತಲೆದೋರುವ ಚಂದ್ರನಂ ನೋಡು ” ಎಂದು ನುಡಿಯಲು ; ರಾಯ ನು ಮೂಡಣ ದಿಕ್ಕಿನಲ್ಲಿ ಬಡಬಾಗ್ನಿ ಜ್ವಾಲೆಗಳಿಂದ ಸುತ್ತುವರಿಯಲ್ಪಟ್ಟವನಂತೆ ರಕ್ತ ವರ್ಣವಾಗಿ ರಾಜಿಸುವ ರಾಜೀವವೈರಿಯ ನೋಡಿ ಬಳಿಕ ಎಲೌ ಪ್ರಾಣಪ್ರಿಯ ಳಾದ ಸಾಗರಿಕೆಯೇ, ಉದಯಗಿರಿಯ ಶಿಖರದಲ್ಲಿರುವ ಬೇಡರುಗಳು ಉ೦ಡೆಗೆಯು ಮಡಗಿದ ಮಾಂಸಪಿಂಡದಂತೆ ತಲೆದೋರುವ ಕಲಾಧಿಪತಿಯಾದ ಚಂದ್ರನ ಚೆಂದ ವನ್ನು ಚೆನ್ನಾಗಿ ನೋಡುವಳಾಗು. ಈ ಚಂದ್ರನು ಸುಂದರವಾದ ನಿನ್ನ ಮುಖ ದಿಂದ ನಿಂದಿಸಲ್ಪಟ್ಟ ವನಾಗಿ ಈಗ ನಿನ್ನ ೦ ಬೇಡಿಕೊಳ್ಳುವಂತೆ ತನ್ನ ಕಿರಣಗಳೆ೦ಬ ಹಸ್ತಗಳಂ ಮೇಲಕ್ಕೆ ವಿಸ್ತರಿಸಿ, ಏರಿ ಬರುತ್ತಿರುವನು ?” ಎಂದು ನುಡಿದು, ಮರಳಿ ಆ ವಾಸವದತ್ತೆಯ ಮುಖಕಮಲವನ್ನು ಎತ್ತಿ ಎತ್ತಿ ಪೂರ್ಣೇ೦ದುವಕ್ಕೆಯಾದ ಸಾಗರಿಕೆಯೇ, ಕೇಳು, ನಿನ್ನ ಮುಖಚಂದ್ರನು ಕಮಲಗಳ ಕಾಂತಿಯನಪಹರಿಸು ವುದಿಲ್ಲವೋ, ಜನಗಳ ನೇತ್ರಗಳಿಗೆ ಆನಂದವನ್ನು ೦ಟುಮಾಡುವದಿಲ್ಲವೋ, ಮನ್ಮಥ ನಿಗೆ ಅಭಿವೃದ್ಧಿಯಂ ಪುಟ್ಟಿಸುವುದಿಲ್ಲವೋ ಹೇಳು. ಈರೀತಿಯಿಂದ ಚಂದ್ರನು ಮಾ ಡುವ ಕಾರಗಳನ್ನು ನಿನ್ನ ಮುಖಚಂದ್ರನೇ ಮಾಡುತ್ತಿರುವಲ್ಲಿ ಈ ಚಂದ್ರನು ಕಾರ್ ವಿಲ್ಲದೆ ಏಕೆ ಉದಯಿಸುತ್ತಿರುವನು ? ತನ್ನಲ್ಲಿ ಅಮೃತವಿದೆಯೆಂಬ ಗರ್ವದಿಂದ ಲಜ್ಜೆ ಯಿಲ್ಲದೆ ಉದಯಿಸುತ್ತಾನೆ ಎಂದರೆ, ಅವನಲ್ಲಿ ಇರುವುದಕ್ಕಿಂತಲೂ ರುಚಿಕರವಾದ ಅಮೃತವು ತೊಂಡೆಯ ಹಣ್ಣಿನಂತಿರುವ ನಿನ್ನ ತುಟಿಯಲ್ಲೇ ಇರುವುದು ” ಎಂದು ನುಡಿದು, ಮನಸೋತು, ಕಾಮಾತುರನಾಗಿ, ಆಲಿಂಗನಕೆ ಮೆಯ್ಯಯದೆ ಹಿಂದು ಸಾರುತ್ತಿರುವ ವಾಸವದತ್ತೆಯ ಸವಿಾಪವಂ ಸೇರಿ, ಲಲ್ಲೆ ಮಾತುಗಳಿಂದ ಉಲ್ಲಾ ಸವಂ ಪಟ್ಟು, ಹಂಬಲಿಸುತ್ತ, ಹಂಬಲಿಸಿ ಬಿಂಬಾಧರನಂ ಚುಂಬಿಸುವೆನೆಂದು ಮರಳಿ ಮುಖವನ್ನು ಎತ್ತಿ ನೋಡಿ, ಚಂದ್ರನ ಕಿರಣಗಳ ಕಾ೦ತಿಯಿಂದ ವಾಸವದತ್ತೆಯೆಂ ಬುದಂ ತಿಳಿದು, ( ಭಾಗ್ಯಹೀನನು ಮಾಡಿದ ಕಾರಗಳೆಲ್ಲವೂ ವ್ಯರ್ಥವು, ಅಮ್ಮ ತವು ವಿಷವಾಗುವಂತೆ ಎನ್ನ ಪ್ರಯತ್ನ ಗಳೆಲ್ಲವೂ ದುಃಖಕ್ಕೆ ಕಾರಣಗಳಾದುವಲ್ಲದೆ ಸುಖವನ್ನುಂಟುಮಾಡಲಿಲ್ಲವು! ” ಎಂದು ಯೋಚಿಸುತ್ತ, ಭಯವನ್ನೂ ವ್ಯಥೆಯ ನ್ಯೂ ಸಹ ಹೊಂದಿ, ಏಕಾಂತವಾಗಿ ವಿದೂಷಕನಂ ಕುರಿತು,– ಮೂಢನೇ, ನೀನು ಮಾಡಿದ ಕಾಠ್ಯವನ್ನು ನಾನು ಏನೆಂದು ಪೇಳಲಿ ? ವಾಸವದತ್ತೆಯನ್ನು ನಾಗರಿಕೆಯೆಂ ದು ಕರೆದುಕೊಂಡು ಬಂದು, ಅನರ್ಥಕಾರವನ್ನು ೦ಟುಮಾಡಿರುವೆ ??” ಎನಲು; ವಿದೂ ಷಕನು ಚೆನ್ನಾಗಿ ನೋಡಿ, “ ನಿಶ್ಚಯವಾಗಿ ವಾಸವದತ್ತೆಯೇ ನಿಜವು, ಸುಸಂಗ. ತೆಯ ವಾಕ್ಯವನ್ನು ನಂಬಿ ನಾನು ಕೆಟ್ಟೆನು. ಇನ್ನು ಮೇಲೆ ಎನ್ನ ಪ್ರಾಣಗಳು ನಿಲ್ಲುವ ಸಂಗತಿಯನ್ನು ಕಾಣೆನು. ಆದರೂ ಇಂಥ ವಿಪತ್ಕಾಲದಲ್ಲಿ ಧೈರವಂ ಗೆಯ್ಯಬೇಕ