ಪುಟ:ವತ್ಸರಾಜನ ಕಥೆ.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇwಲಿ - ಕರ್ನಾಟಕ ಕಾವ್ಯಕಲಾನಿಧಿ, - ಲ್ಲದೆ ಸುಮ್ಮನಿರಬಾರದು. ದೇವಿಯಂ ಕುರಿತು ಕೆಲವು ವಾಕ್ಯವನ್ನು ಪೇಳುವೆನು ?” ಎಂದು ತನ್ನೊಳು ತಾನು ಆಲೋಚಿಸುತ್ತಿರಲು ; ರಾಯನು ಕೈ ಮುಗಿದುಕೊಂಡು, ( ಎಲೆ ಪ್ರಾಣಕಾಂತೆಯೇ, ೨” ಎಂದು ಸವಿಾಪಕ್ಕೆ ಪೋಗಲು; ದೇವಿಯು ಅತ್ಯಂತ ಕೋಪವಂ ತಾಳಿ, ರಾಯನ ಮುಖವನ್ನು ನೋಡಬಾರದೆಂದು ತನ್ನ ಕೈಯನ್ನು ಅಡ್ಡಲಾಗಿ ಪಿಡಿದು, ಕಣ್ಣೀರುಗಳಂ ತುಂಬಿ, ( ಆ‌ ಪುತ್ರನಾದ ಮಹಾರಾಜೇಂ ದ್ರನೇ ಕೇಳು' ಇಂಥ ಮಾತುಗಳು ಹೇಳುವುದು ನ್ಯಾಯವಲ್ಲವು, ನಿಮ್ಮ ಹೃದ ಯವು ಅನ್ಯಸ್ತ್ರೀಯಲ್ಲಿ ಆಸಕ್ತವಾಗಿರುವಲ್ಲಿ ಶುಷೋಪಚಾರದ ವಾಕ್ಯದಿಂದ ಪ್ರ ಯೋಜನವಂ ಕಾಣೆನು. ಬಂಧನಕ್ಕೆ ಸಿಕ್ಕುವೆನೆಂಬ ಜ್ಞಾನವಿಲ್ಲದೆ ನಾಗಸ್ವರದ ಸ್ವರಕೆ ಮರುಳಾಗಿ ಬರುವ ಸರ್ಪದಂತೆ ಬಹಿರಂಗಕ್ಕೆ ಸವಿಯಾಗಿರುವ ನಿಮ್ಮ ವಚ ನಕ್ಕೆ ಒಳಗಾಗಿರುವ ಪಾಪಿಯಾದ ಎನ್ನೊಡನೆ ಪೂಜ್ಯರಾದ ನಿಮಗೆ ಸಲ್ಲಾಪವು ಯೋಗ್ಯವಲ್ಲವು ” ಎಂದು ಮುಖವನ್ನು ಹಿಂದಿರುಗಿಸಿ ನಿಲ್ಲಲು; ವಿದೂಷಕನು ಕ್ಲ ಧದಿಂದ ಪೊರಮಡುವ ದೇವಿಯ ವಾಕ್ಯವಂ ಕೇಳಿ, ಭಯದಿಂದ ನಡುಗುತ್ತ, “ ಈಗ ದೇವಿಗೆ ಏನು ಪ್ರತ್ಯುತ್ತರವಂ ಪೇಳಲಿ ? ಹೇಗಾದರೂ ಬಲವತ್ತರವಾದ ದ್ವೇಷ ಕೆ ಕಾರಣನಾದೆನು. ಆದರೂ ಕೆಲವು ವಾಕ್ಯವಂ ಪೇಳದೆ ಇರಬಾರದು ?” ಎಂದು ತನ್ನ ಹೃದಯದಲ್ಲಿ ಆಲೋಚಿಸಿ, ಎಲೌ ಪೂಜ್ಯಳಾದ ದೇವಿಯೇ, ನೀನು ಕರು ಕಣಾಶಾಲಿಯು ಮಹಾನುಭಾವೆಯು ಎಂಬುವುದು ಲೋಕದಲ್ಲಿ ಪ್ರಸಿದ್ದವಾಗಿರು ವುದು. ಆ ಪ್ರಸಿದ್ಧಿಗೆ ಕೊರತೆಯಂ ತಾರದೆ ರಾಯನ ಅಪರಾಧವನ್ನು ಕ್ಷಮಿಸತ ಕುದು ೨) ಎಂದು ನುಡಿಯಲು ; ದೇವಿಯು ರಕ್ತದಲ್ಲಿ ನೆನೆದ ವಿಾನುಗಳಂತೆ ಕೆಂಪು ಗೂಡಿರುವ ನೇತ್ರಗಳಿ೦ ನೋಡಿ,-" ಎಲ ವಿದೂಷಕನೇ, ನೀನು ಮಾಡಿದ ಸಂವಿ ಧಾನದಿಂದ ಉಂಟಾಗುತ್ತಿದ್ದ ಸಾಗರಿಕೆಯ ಪ್ರಥಮಸಂಗಮಕೆ ವಿಘ್ನ ವನ್ನುಂಟು ಮಾಡಿ ನಾನು ಅಪರಾಧವುಳ್ಳವಳಾದೆನಲ್ಲದೆ ನಿನ್ನಿ೦ದಲೂ ಸ್ವಲ್ಪವಾದರೂ ಅಪರಾ ಧವು ಮಾಡಲ್ಪಡಲಿಲ್ಲವು, ಆದರೆ ಪೇಳುವೆನು ಕೇಳು. ಅಂತರಂಗದ ರಾಜ್ಯ ಸ್ವರೂಪ ವಾದ ಅಂತಃಪುರದ ವಿಚಾರಣೆಗೆ ನೀನು ಸೇರಿದಂತೆ ಬಹಿರಂಗದ ರಾಜ್ಯಭಾರದ ವಿಚಾರಣೆಗೆ ನಿನ್ನಂಥ ಕುಮಂತ್ರಿಯು ಸೇರಿ ಇದ್ದಲ್ಲಿ ಸಮಸ್ತವಾದ ದೇಶಕೋಶ ಗಳ ನಿರ್ನಾಮವಾಗುತ್ತ ಇದ್ದುವು, ದುಷ್ಟ ಮಂತ್ರಿಯಿಂದ ದೊರೆಯು ಕೆಡು ವನು ಎಂದು ನೀತಿವಂತರು ಹೇಳಿರುವ ವಾಕ್ಯವು ಎಂದಿಗೂ ವ್ಯರ್ಥವಾಗಲಾರದು. ಈ ಯುಕ್ತಿಯೂ, ಈ ಸಂವಿಧಾನವೂ ರಾಜ್ಯ ವಿಚಾರಣೆಯಲ್ಲಿ ಇದ್ದಲ್ಲಿ ಇನ್ನಿಷ್ಟು ರಾಜ್ಯಲಾಭವೂ ಪ್ರಜಾಪರಿಪಾಲನೆಯೂ ಅಧಿಕವಾದ ಕೀರ್ತಿಯ ಸಹ ದೊರ ಕುತ್ತಲಿರುವುದರಲ್ಲಿ ಸಂದೇಹವೇ ತೋರಲಾರದು. ಕಾಂತೆಯರ ಲೀಲೆಗಳಲ್ಲಿ ತಗೆ ಲಿರುವ ಚಿತ್ತವೃತ್ತಿಯುಳ್ಳ ದೊರೆಗೆ ಸಮಸ್ಯೆ ಕಾಕ್ಯವೂ ಕೆಡುವುದೆಂಬ ಶಾಸ್ತ್ರವಾ ಕ್ಯವು ನಿಮ್ಮಂಥವರಿಂದ ನಿದರ್ಶನಕ್ಕೆ ಬರಬಹುದು, ಯೋಗಿಗಳಾದರೂ ದುಷ್ಟರ