ಪುಟ:ವತ್ಸರಾಜನ ಕಥೆ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವತ್ಸರಾಜನ ಕಥೆ, - ೧೦೧ ಸಹವಾಸದಿಂದ ಕೆಟ್ಟು ಹೋಗುವರೆಂಬ ವಾಕ್ಯವು ನಿಶ್ಚಯವಾದುದು, ಎಷ್ಟು ಹಾಲಿ ದ್ದರೂ ಒಂದು ಬಿಂದು ಹುಳಿ ಬಿದ್ದಲ್ಲಿ ಆ ಕ್ಷೀರವು ಪ್ರಯೋಜನಕ್ಕೆ ಬಾರದೆ ವ್ಯರ್ಥ ವಾಗುವಂತೆ ನೀಚಾತ್ಮನಾದ ನಿನ್ನಿಂದ ನಮ್ಮ ರಾಯನಲ್ಲಿದ್ದ ಸಮಸ್ತ ಸದ್ದು ಇಂಗ ಭೂ ಪ್ರಯೋಜನಕ್ಕೆ ಬಾರದೆ ಪೋದುವು. ಇನ್ನು ಬಲುಮಾತುಗಳನ್ನಾಡಿ ಪ್ರಯೋ ಜನವನ್ನು ಕಾಣೆನು ?” ಎಂದು ಮುಂದಕ್ಕೆ ಹೋಗುತ್ತಿರಲು ; ರಾಯನು ಅಡ್ಡಲಾಗಿ ಬಂದು ನಿಂತು, ಎಲೆ ಕಲ್ಯಾಣಿಯೇ, ಪ್ರತ್ಯಕ್ಷವಾಗಿ ನೋಡಲ್ಪಟ್ಟ ಅಪರಾಧ ವುಳ್ಳ ನಾನು ನಿನಗೆ ಪ್ರತ್ಯುತ್ತರವನ್ನು ಏನು ಹೇಳಲಿ ? ಆದರೆ ಕಮಲದಂತೆ ಮನೆ ಹರವಾದ ಈ ನಿನ್ನ ಪಾದಗಳಲ್ಲಿ ಲಾಕ್ಷಾರಸದಿಂದುಂಟಾಗಿರುವ ಕೆಂಪನ್ನು ಎನ್ನ ಮಸ್ತಕವು ಪೋಗಲಾಡಿಸುವುದರಲ್ಲಿ ಸಮರ್ಥವಾದೀತು, ಚಂದ್ರನಿಗೆ ಚಾತುಯ್ಯ ವಂ ಬೋಧಿಸುತ್ತಿರುವ ಮುಖದಲ್ಲಿ ಕೋಪದಿಂ ಪುಟ್ಟಿರುವ ಕೆ೦ಪನ್ನು ಎನ್ನಲ್ಲಿ ಪುಟ್ಟಿ ದ ನಿನ್ನ ಕಾರುಣ್ಯವೇ ಪೋಗಲಾಡಿಸಬೇಕಲ್ಲದೆ ಎನ್ನಿ೦ದ ಆಗಲಾರದು ?” ಎಂದು ಪಾದಕ್ಕೆ ನಮಸ್ಕಾರವಂ ಗೆಯ್ಯಲು ; ವಾಸವದತ್ತೆಯು-ಶಿವಶಿವ ! ಇ೦ಥ ಪಾ ಪಕ್ಕೆ ಗುರಿಯಾಗಬೇಕೇ ” ಎಂದು ತನ್ನ ಕಾಲುಗಳು ಹಿಂದೆಗೆದು, ಎಲೆ ಕಾಂಚ ನಮಾಲೆಯೆ, ಈರೀತಿಯಿಂದ ನಾಚಿಕೆಗೆಟ್ಟ ಪುರುಷರಂ ಕಾಣೆನು. ತಾವು ಮಾ ಡಿದ ಅಪರಾಧವನ್ನು ತಿಳಿಯದೆ ಇ೦ತು ಕಾರವಂ ಗೆಯ್ಯುವುದಕ್ಕೆ ಹೇಗೆ ಮನಸ್ಸು ಬಂದುದೋ ? ಆದರೆ ಹೃದಯದಲ್ಲಿದ್ದ ರಾಯನ ವಿಶ್ವಾಸವನ್ನು ಚೆನ್ನಾಗಿ ಪರೀಕ್ಷೆ ಯಂ ಗೆಯ್ದಂತಾದುದು, ಇನ್ನು ಇಲ್ಲಿ ನಿಲ್ಲಬಾರದು ” ಎಂದು ಪೋಗುತ್ತಿರಲು; ಕಾಂಚನಮಾಲೆಯು-- ಎಲೌ ಕರುಣಾಶಾಲಿಯಾದ ಕಲ್ಯಾಣಿಯೇ, ದೀನನಾಗಿ ನಮಸ್ಕರಿಸುವ ರಾಜೇಂದ್ರನನ್ನು ಒಡಂಬಡಿಸಿ ಪೋಗುವಳಾಗು. ಇಲ್ಲದೆ ಇದ್ದಲ್ಲಿ ಬಲವಾಗಿ ರಾಯನಿಗೆ ಪಶ್ಚಾತ್ತಾಪವ ತೋರುವುದು ” ಎನಲು; ದೇವಿಯು-1ಎಲೌ ಮರುಳಾಗಿರುವ ತರಳ್ಳಾಯೇ, ಕೇಳು. ಈ ರಾಯನಲ್ಲಿ ಕಟಾಕ್ಷವಂ ಗೆಯುವು ದಕ್ಕೆ ಕಾಲವು ಬೇರೆ ಇರುವುದು, ಈಗ ಬಾಯಿ ಮುಚ್ಚಿಕೊಂಡು ನಡೆಯುವ ಳಾಗು ” ಎಂದು ನುಡಿದು, ಅಲ್ಲಿ ನಿಲ್ಲದೆ ಪೋಗಲು ; ನಿನ್ನ ಅಚ್ಛೆಯು ಹೇಗೆ ಆಗುವುದೊ ಆರೀತಿಯಿಂದ ನಡೆದುಕೊಳ್ಳುವೆನು ?” ಎಂದು ದೇವಿಯನ್ನು ಅನುಸ ರಿಸಿ ಪೋಗಲು ; ರಾಯನು ಅಡ್ಡ ಬಿದ್ದು ಕೊಂಡು ( ಎಲೆ ದೇವಿಯೇ, ಎನ್ನಲ್ಲಿ ಪ್ರಸ. ನಳಾಗಿ ಇದೊಂದು ಎನ್ನ ಅಪರಾಧವನ್ನು ಕ್ಷಮಿಸುವಳಾಗು ' ಎಂದು ನುಡಿಯು ತಿರಲು ; ವಿದೂಷಕನು, ರಾಯನು ನಮಸ್ಕಾರವಂ ಗೆಯ್ದರೂ, ತಾನು ಪಿಡಿದ ಕೋ ಪವಂ ಬಿಡದೆ ದೇವಿಯು ಪೋದಳೆಂದು ದುಃಖವಂ ತಾಳಿ, ರಾಯನಂ ಕುರಿತು ( ಎಲೆ ರಾಯನೇ, ಬರಿದೆ ಏತಕ್ಕೆ ಅರಣ್ಯರೋದನವಂ ಗೆಯ್ಯುತ್ತಿರುವೆ ? ಗಂಡಸ ರಲ್ಲಿ ನಿನ್ನಂಥ ನಾಚಿಕೆಯಿಲ್ಲದೆ ಇರುವ ಪುರುಷರನ್ನು ಒಬ್ಬರನ್ನೂ ಕಾಣೆನು. ಏಳು 16