ಪುಟ:ವತ್ಸರಾಜನ ಕಥೆ.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ - ಕರ್ಣಾಟಕ ಕಾವ್ಯಕಲಾನಿಧಿ, - ಏಳು ?” ಎಂದು ಧಿಕ್ಕರಿಸಿ ನುಡಿಯಲು ; ರಾಯನು ಮುಖವಂ ಎತ್ತಿ ನೋಡಿ • ಎಲ್ಲೆ ವಿದೂಷಕನೇ, ನಾನು ಎಷ್ಟು ಪ್ರಕಾರವಾಗಿ ನಮಸ್ಕಾರವಂ ಗೆಯ್ದ ರೂ ದೇವಿಯು ಎನ್ನಲ್ಲಿ ಪ್ರನಾದವಂ ಗೆಯ್ಯದೆ ಪೋದಳಲ್ಲಾ ! ಎಂದು ಎನ್ನ ಮನದಲ್ಲಿ ಬಲವಾದ ವಿವಾದವು ತೋರುತ್ತಿರುವುದು ?” ಎನಲು; ಅವನು-- ಎಲೈ ಮುಗ್ಧ ನಾದ ರಾಯನೇ, ಕೇಳು. ಲೋಕದಲ್ಲಿ ಜನರುಗಳು ಯಾವ ದೊರೆಯ ಕೋಪ ಕಟಾಕ್ಷಗಳಿಗೆ ತಕ್ಕ ಕಾರಗಳು ಪುಟ್ಟದೆ ಇದೆಯೋ, ಸ್ತ್ರೀಯರುಗಳು ನಪುಂಸಕ ರಾದ ಪುರುಷರನ್ನು ತಿರಸ್ಕರಿಸುವಂತೆ ಆ ರಾಯನನ್ನು ತಿರಸ್ಕರಿಸುತ್ತಲಿರುವರು, ಆದರೆ ಅವಳ ಪೆಟ್ಟಿನಿಂದ ನಿನ್ನ ಶರೀರದಲ್ಲಿ ಗಾಯಗಳು ಪುಟ್ಟಲಿಲ್ಲವಾದುದರಿಂದ ಅದೇ ನಿನ್ನಲ್ಲಿ ಬಲವಾದ ಕಟಾಕ್ಷವಂ ಗೆಯ್ದವಳಾದಳೆಂದು ತಿಳಿಯುವನಾಗು, ಭಿಕ್ಷಾ ಪಾತ್ರೆಗೆ ಯೋಗ್ಯರಾದಂಥ ನಮ್ಮಂಧ ಜನರು ನಿನ್ನಂತೆ ಲಜ್ಜೆಗೆಟ್ಟು ಹೆಂಡತಿಗೆ ನಮ ನ್ಯಾರವಂ ಗೆಯ್ಯಲಾರರು .' ಎಂದು ನುಡಿಯಲು ; ರಾಯನು~ ಮೂರ್ಖ ನೇ, ಎನ್ನ ನ್ನು ಏಕೆ ಹಾಸ್ಯದ ನುಡಿಗಳಿಂದ ನಿಂದಿಸುತ್ತಿರುವೆ ? ಇದೆಲ್ಲವೂ ನೀನು ಮಾಡಿದ ಅನರ್ಥವಾದ ಕಾರವಾದುದರಿಂದ ಈ ರೀತಿಯಾಗಿ ದೇವಿಯೊಡನೆ ವಿರೋ ಧವು ಪ್ರಾಪ್ತವಾದುದು. ಬಹುದಿವಸದಿಂದ ಹಬ್ಬಿದ ಸ್ನೇಹದಿಂದಲೇ ದೇವಿಗೆ ಎನ್ನಲ್ಲಿ ನಂಬುಗೆಯ ಬಲವಾದ ಅನುರಾಗವೂ ಸಹ ಇದ್ದುದಾಯಿತು. ಯಾವಾ ಗಲೂ ಮಾಡದೆ ಈಗ ನಾನು ಮಾಡಿದ ಅಕಾರದಿಂದ ದೇವಿಯು ತನ್ನ ಪ್ರಾಣಗ ಳಲ್ಲಿ ಆಸೆಯಿಲ್ಲದೆ ನಾನು ಮಾಡಿದ ನಮಸ್ಕಾರವಂ ವಿಾರಿ ಪೋದಳು. ಲೋಕದಲ್ಲಿ ಬಲವಾಗಿ ಬಳೆದ ಮಿತ್ರತ್ವದಲ್ಲಿ ಇಂಥ ವಂಚನೆಗಳು ಪುಟ್ಟ ದಲ್ಲಿ ಅದು ಸಹಿಸುವುದ ಕ್ಯಾಗದೆ ಪ್ರಾಣಸಂಕಟವನ್ನು ೦ಟುಮಾಡುತ್ತಿರುವುದು, ಇನ್ನು ಮೇಲೆ ದೇವಿಯು ಯಾವ ಕಾರದಲ್ಲಿಯೂ ನಂಬುಗೆ ತಪ್ಪಿ ಇರುವಳು. ಇನ್ನು ಮಾಡತಕ್ಕ ಕಾರ್ ವೇನು ? ” ಎಂದು ನುಡಿಯಲಾವಿದೂಷಕನು- ಅಯ್ಯಾ ರಾಜೇಂದ್ರನೇ, ದೇವಿಯು ಇನ್ನು ಮೇಲೆ ಸಾಗರಿಕೆಗೆ ಏನು ಸಂಕಟವನ್ನುಂಟುಮಾಡುತ್ತಿರುವಳೊ ? ಕೋಮಲಾಂಗಿಯಾದ ಆ ಸಾಗರಿಕೆಯು ಪ್ರಾಣಗಳನ್ನು ಹೇಗೆ ಧರಿಸುವಳೋ ? ಎಂದು ಎನ್ನ ಮನವು ಬಲವಾದ ಕಳವಳವಂ ಪೊಂದುತ್ತಿರುವುದು ” ಎಂದು ನುಡಿಯಲು; ಅತ್ತ ವಾಸವದತ್ತೆಯು ಕಾಂಚನಮಾಲೆಯ ಕೈಲಾಗವಂ ಪಿಡಿದು ಬರುತ್ತ( ಎಲೆ ಬಾಲೆ, ನಾನು ಸುಸಂಗತೆಯನ್ನು ಸಾಕಿದ್ದು ಹಾವಿಗೆ ಹಾಲನೆರೆದಂತಾದು ದು, ಇಷ್ಟ ಸಂವಿಧಾನಕ್ಕೂ ಮೂಲಕಾರಣಳಾದಂಥ ಆ ಬಾಲೆಗೆ ಬಲವಾಗಿ ಬಾ ಧೈಯಂ ಪುಟ್ಟ ಸಲ್ಲದೆ ಎನ್ನಲ್ಲಿ ಭೀತಿಯು ಸ೦ಜನಿಸಲಾರದು ?” ಎಂದು ಮುಂದುಗಡೆ ಯಲ್ಲಿ ಎಚ್ಚರಿಕೆ ಪರಾಕು ಪಾದಾವಧಾನವೆಂದು ಪೊಗಳುತ್ತಲಿರುವ ಮದನಿಕೆಯಂ ಕರೆದು ಎಲೆ ಕಾಂತೆಯೇ, ನೀನು ಶೀಘ್ರವಾಗಿ ಚಿತ್ರಮಂಟಪ ಮೊದಲಾದ