ಪುಟ:ವತ್ಸರಾಜನ ಕಥೆ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ನಕ್ಷರಾಜನ ಕಥೆ, - ೧೦೬ ಯಾವ ಸ್ಥಳದಲ್ಲಿದ್ದರೂ ಸುಸಂಗತೆಯಂ ಪಿಡಿದು ಯಾವ ವೇಷದಲ್ಲಿ ಇದ್ದಾಳೆಯೋ ಅದೇ ವೇಷದಲ್ಲಿ ಇರಿಸಿಕೊಂಡು ಒಬ್ಬರೊಡನೆಯೂ ಬೆಲ್ಲಾ ಪವಂ ಗೆಯ್ಯದಂತೆ ಕಾ ದಿರುವುದು ?” ಎಂದು ಅಪ್ಪಣೆಯನ್ಶಿಯಲು; ಆ ಮದನಿಕೆಯು ಚಿತ್ರಶಾಲೆಗಾಗಿ ಬರುತ್ತ ಸಾಗರಿಕೆಗೆ ವಾಸವದತ್ತಾ ದೇವಿಯ ವೇಷವನ್ನು ಅಳವಡಿಸಿ ಕಾದುಕೊಂ ಡಿದ್ದು ಬೇಸಾರಿ ವಿದೂಷಕನನ್ನು ನೋಡುವೆನೆಂದು ಉಪವನದ ಮಾರ್ಗವನ್ನು ಅನುಸರಿಸಿ ಬರುತ್ತಲಿದ್ದ ಸುಸಂಗತೆಯಂ ಕಂಡು ಸೆರಗಂ ಪಿಡಿದು, ಈ ಎಲೆ ಬಾಲೆ ಯೇ, ನೀನು ಮಾಡಿದ ಕಾಠ್ಯಕ್ಕೆ ತಕ್ಕ ಫಲವಂ ಅನುಭವಿಸುವಳಾಗು ಎಂದು ದೇ ವಿಯ ಆಜ್ಞೆಯಾಗಿರುವಲ್ಲಿ ಎಲ್ಲಿಗೆ ಪೋಗುತ್ತಿರುವೆ, ನಡೆ ೨” ಎಂದು ಎಳೆದುಕೊಂಡು ಪೋಗುತ್ತಿರಲು ; ಸುಸಂಗತೆಯು ಕೆಟ್ಟೆನೆಂದು ನಾಲಗೆ ಒಣಗಿ, ತೊಡೆ ನಡುಗಿ; ದಿಕ್ಕುಗಳಿಗೆ ಬಾಯಿಬಿಡುತ್ತ, ಇನ್ನೇನು ಗತಿ ಎಂದು ಯೋಚಿಸಿ, ಸಾಗರಿಕೆಯು ಜೀ ವವನ್ನು ಹೇಗೆ ಧರಿಸುವಳೆ೦ದು ಬರುತ್ತ, ಚಿತ್ರಮಂಟಪದಲ್ಲಿ ಕಟ್ಟಿರುವ ಗಿಳಿಯಂ ಕುರಿತು ಸಾಗರಿಕೆಯು ಕೇಳುವಂತೆ- ಎಲೆ ಗಿಳಿಯೇ, ನಾನು ಮೃತ್ಯುವಿನ ಕೈಗೆ. ಸಿಕ್ಕಿದಂತೆ ಈ ಮದನಿಕೆಯು ಮಾಡುವ ಬಂಧನಕ್ಕೆ ಒಳಗಾದೆನು, ಮುಂದೆ ನೀನು ಬದುಕುವ ರೀತಿಯನ್ನು ಸಾಧಿಸುವುದು 2) ಎಂದು ಗಟ್ಟಿಯಾಗಿ ಕೂಗಿ ನುಡಿದು ರೋದ ನವಂ ಗೆಯ್ಯುತ್ತ ಪೋಗಲು; ನಾಗರಿಕೆಯು ಸುಸಂಗತೆಯ ಸೆರಗಂ ಪಿಡಿದು ಎಳೆದು ಕೊಂಡು ಪೋಗುವ ಮದನಿಕೆಯಂ ಕಂಡು ಸುಸಂಗತೆಯು ಶುಕವಂ ನೆವಗೆಯು ಪೇಳಿದ ವಾಕ್ಯವಂ ಕೇಳಿ ನೀರಿನಲ್ಲಿ ಕಣ್ಣು ಬಿಟ್ಟಂತೆ ದಿಗ್ಗಾ೦ತಿಯಂ ಪೊಂದಿ, (( ಇಂದಿನ ದಿನಕ್ಕೆ ಎನಗೆ ನೂರು ವರ್ಷವು ತುಂಬಿತು. ಭೂಋಣಾನುಬಂಧವು ಮುಗಿದುದು, ಆಸೆಯೆಂಬ ಲತೆಯ ಬೇರು ಒಣಗಿದುದು, ವತ್ಸ ರಾಜನಂ ಪೊಂದಿ ಸುಪುತ್ರನಂ ಪದೆ ಎಂದು ಎನ್ನ ತಾಯಿತಂದೆಗಳು ಹರಸಿದ ಹರಕೆಯು ನಿರರ್ಥಕವಾ ದುದು, ಇನ್ನು ಮೇಲೆ ಇದ್ದೆನಾದರೆ 'ದೇವಿಯೆಂಬ ಮೃತ್ಯುವಿನ ಕೈಗೆ ಸಿಕ್ಕದೆ ಇರೆ ನು, ಅವಳು ಮಾಡುವ ಚಿತ್ರಹಿಂಸೆಯನ್ನು ಅನುಭವಿಸಿ ಪ್ರಾಣಗಳಂ ಬಿಡುವುದ ಕ್ಕಿಂತಲೂ • ಆಪತ್ಕಾಲೇ ನಾಸ್ತಿ ಮತ್ಯಾದಾ ” ಎಂಬ ನ್ಯಾಯವಿರುವುದರಿಂದ ನಾನು ಆತ್ಮದೋಷವನ್ನು ಗಣಿಸದೆ ಪ್ರಾಣವಂ ಬಿಡುವೆನು ?” ಎಂದು ನಿಶ್ಚಿಸಿ ಅಲ್ಲಿಂದ ಎದ್ದು ಮಕರಂದೋದ್ಯಾನವನ್ನು ಪ್ರವೇಶಿಸಿ, ಮಲ್ಲಿಗೆಯ ಹಂಬನ್ನು ಪಾಶವಂ ಗೆಯ್ದು ಅಶೋಕವೃಕ್ಷದ ಸವಿಾಪವ ಸೇರಿದಳು. ಎಂಬಲ್ಲಿಗೆ 3 ಕೃತ್ಯರಾಜ ಕಂಠೀರವರಿಂ ಲೋಕೋಪಕಾರಾರ್ಥವಾಗಿ ನವರಸಭರಿತವಾಗಿ ಕರ್ಣಾಟಕಭಾಪೆಯಿಂದ ವಿರಚಿಸಲ್ಪಟ್ಟ ಶಿ ಕೃಷ್ಟರಾಜ ಸಮುಕ್ಯಾವಳಿಯೆಂಬ ಗ ಂಥದೊಳೆ

  • ವತ್ರರಾಜನ ಕಥೆಯಲ್ಲಿ

ಚತುರ್ದಸಗಚ್ಛಂ ಸಂಪೂರ್ಣವಿ.