ಪುಟ:ವತ್ಸರಾಜನ ಕಥೆ.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

→ ವತ್ಸರಾಜನ ಕಥೆ, - >dು ಅಷ್ಟರಲ್ಲೇ ವಿದೂಷಕನು--( ಎಲೆ ಸಾಗರಿಕೆಯೇ, ಲಜ್ಜಿಯಂ ಬಿಟ್ಟು ಧೈಯ್ಯ ವಂ ಪಡೆದು ರಾಯನ ಸಂಗಡ ಸರಸಸಲ್ಲಾಪವಂ ಗೆಯ್ಯುತ್ತ ಮನಕ್ಕೆ ಸುಖವಂ ಪುಟ್ಟಿಸುವಳಾಗು ” ಎಂದು ನುಡಿಯಲು ; ದೇವಿಯು ವಿದೂಷಕನಾಡಿದ ವಾಕ್ಯವಂ ಕೇಳಿ, ಬಲವಾಗಿ ಕೌಧವಂ ತಾಳಿ-• ಎಲೆ ಕಾಂಚನಮಾಲೆಯೇ, ವಿದೂಷಕನು ಸಾಗರಿಕೆಯ ಪೆಸರಂ ಪೇಳು ತಿರುವನು. ಆದುದರಿಂದ ಅವಳು ಮೊದಲು ನೀನು ಹೇಳಿದಂತೆ ಇಲ್ಲಿಗೆ ಬಂದಿದ್ದರೂ ಬಂದಿರಬಹುದು. ಆದುದರಿಂದ ಈ ಬಳ್ಳಿಗಳ ಪೊದರನ್ನು ಮರೆಗೊಂಡು ಇವರಾ ಡುವ ಮಾತುಗಳನ್ನು ಕೇಳುವ ” ಎಂದು, ಅದೇ ರೀತಿಯಿಂದ ನಿಂತಿರಲು ; ರಾಯನು ಸಾಗರಿಕೆಯಂ ಕುರಿತು ಎಲೆ ಮನೋಹರಾಂಗಿಯಾಗಿ, ಕಿವಿ ಗಳಂ ದಬ್ಬುತ್ತಿರುವ ಲೋಚನಂಗಳಿಂ ಕೂಡಿ, ಚಂದ್ರನಂತೆ ಸುಂದರವಾಗಿರುವ ಮುಖದಿಂ ಪೊಳೆಯುತ್ತ, ಬಣ್ಣವೇರಿ ಒರುವ ಹವಳದ೦ತೆ ಹದವಾದ ತುಟಿಯುಳ್ಳ, ಸಾಗರಿಕೆಯೇ ! ಕೆಟ್ಟ ಮನ್ಮಥನ ತಾಪದಿಂ ಬಾಡಿರುವ ಎನ್ನ ಕಾಯವನ್ನು ಸಂಪ ಗೆಯ ಹೂವಿನಂತೆ ಸೊ೦ಪುದೋರುವ ನಿನ್ನ ಅಂಗಗಳಿಂದ ಆಲಿಂಗನವಂ ಗೆಯ್ದು ಸಂತಾಪವಂ ಪರಿಹರಿಸಿ, ನೂತನವಾಗಿ ಅಮೃತಕ್ಕಿಂತಲೂ ರುಚಿಕರವಾಗಿರುವ ನಿನ್ನ ಮಾತುಗಳಿಂದ ಮನಕೆ ಸಂತೋ ತವಂ ತುಂಬಿದ ಕಲಶಗಳಂತೆ ಕಾಂತಿಯಂ ಬೀರುವ ಬಟ್ಟ ಮೊಲೆಗಳಿಂದ ಗಟ್ಟಿಸಿ ಆನಂದವಂ ಪಡಿಸಿ, ವಿರಹಾಗ್ನಿ ಜ್ವಾಲೆಯಿಂದ ಬಾಯಾರಿರುವ ಎನಗೆ ನಿನ್ನ ಅಧರಾ ಮೃತವನ್ನಿತ್ತು ದಾಹಶಾಂತಿಯನ್ನು ಹೊಂದಿಸಬಾರದೇ ? ಏಕೆ ಮೌನದಿಂದ ಲಜ್ಜೆ ಯಂ ತಾಳಿ ಕುಳಿತಿರುವೆ ? ?” ಎಂದು ನುಡಿಯಲು ; ಸಾಗರಿಕೆಯು - ಎಲೈ ರಾಜೇಂ ದ್ರನೇ, ಏತಕೆ ಎನ್ನಲ್ಲಿ ಅಪದ್ದವಾದ ವಾಕ್ಯವನ್ನೇ ಹೇಳುತ್ತಿರುವೆ, ನೀನು ದಕ್ಷಿಣ ನಾಯಕನೆಂಬುದು ಅನೃತವಾಗಿ ತೋರುವುದು, ಪ್ರಾಣಿಗಳಿಗಿಂತಲೂ ಪ್ರಿಯಕರ ಳಾದ ವಾಸವದತ್ತಾ ದೇವಿಯಲ್ಲಿ ವ್ಯರ್ಥವಾಗಿ ಅಪರಾಧವುಳ್ಳವನಾಗುವುದು ನ್ಯಾಯ ವಲ್ಲವು ” ಎಂದು ನುಡಿಯಲು ; ರಾಯನು--(( ಎಲೆ ಕಾಂತೆಯೇ, ನೀನು ಅ ಪದ್ಯ ಗಳಂ ಪೇಳುವಳಾಗುತ್ತಿರುವೆ. ಏಕಂದರೆ- ವಾಸವದತ್ತಾ ದೇವಿಯು ಮಹಾಕೊ ಪವುಳ್ಳವಳಾದುದರಿಂದ ಅವಳ ಮನಸ್ಸಿನ ಸಂತೋಷ ಕೋಸುಗವಾಗಿ ಮೃದುವಾದ ವಚಸ್ಸುಗಳನ್ನಾಡುತ್ತ ಸಮಯದಲ್ಲಿ ನಮಾರಾಡ್ಯುಪಚಾರಂಗಳಂ ಗೆಯ್ಯುತ್ತಲಿರು ವೆನಲ್ಲದೆ ಯಥಾರ್ಥವಾದ ವಿಶ್ವಾಸದಿಂದ ಅವಳೊಡನೆ ಕೂಡಿ ಇರತಕ್ಕವನಲ್ಲ. ಪ್ರಾಣಕ್ಕಿಂತಲೂ ಪ್ರೀತಿಕರವಾದ ಯಾವ ಅನುರಾಗವಿರುವುದೋ ಅ೦ಥ ಅನುರಾಗ ವನ್ನು ನಿನ್ನಲ್ಲಿ ಇರಿಸಿರುವೆನಲ್ಲದೆ ವಾಸವದತ್ತೆಯಲ್ಲಿ ಮಾಡತಕ್ಕ ಉಪಚಾರಗಳೆಲ್ಲಾ ಕೃತ್ರಿಮವೆಂದು ತಿಳಿಯುವಳಾಗು ” ಎನಲು; ವಿದೂಷಕನು-- (ಎಲೆ ಸಾಗರಿಕೆ ಯೇ, ಕೇಳು, ರೂಪಿನಲ್ಲ ಗುಣದಲ್ಲ ಸವಿಯಾದ ಮಾತುಗಳಲ್ಲಿಯೂ ಆ ವಾಸನ m