ಪುಟ:ವತ್ಸರಾಜನ ಕಥೆ.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವೆಕ್ಟರಾಜನ ಕಥ, - ೧HF

ಅಜ್ಜಿಯಾದಂತೆ ಪಕ್ಷಿಶಾಲೆಯಲ್ಲಿರದೆ ಕೊಬ್ಬಿ ಬಂದು ಹುಲಿಯಾಗುವೆನೆಂದು ನರಿಯು ಬರೆಗಳಂ ಹಾಕಿಕೊಂಡಂತೆ ದೇವಿಯಾಗುವೆನೆಂದು ಧರಿಸಿದ ವೇಷಕೆ ತಕ್ಕ ಪ್ರಾಯ ಸ್ಥಿತವಾದುದು ಎಂದು ಒತ್ತಿನಲ್ಲಿ ಮಲ್ಲಿಗೆಯ ಬಳ್ಳಿಯನ್ನು ಕಿತ್ತು, ಸಂಪಗೆಯ ದ೦ ಡೆಗಳಂತೆ ಸೊ೦ವುದೋರುತ್ತ ಬಾಹುಪುರಿಗೆ ಯೋಗ್ಯವಾದ ಬಾಹುಗಳನ್ನು ಬಿಗಿ ಯಾಗಿ ಬಿಗಿದು, ಮುಂದೆ ನಡೆ ” ಎಂದು ದಬ್ಬುತ ಇರಲು ; ಸಾಗರಿಕೆಯು ಮುತ್ತುಗಳಂತೆ ಕಣ್ಣೀರುಗಳ೦ ಬಿಡುತ್ತ, ಬೇಡನ ಕೈಗೆ ಸಿಕ್ಕಿದ ಹುಲ್ಲೆಯ ಮರಿ ಯಂತೆ ತಲ್ಲಣಿಸುತ್ತ, ಬೆಕ್ಕಿನ ಕೈಗೆ ಸಿಕ್ಕಿದ ಗಿಳಿಯಂತೆ ಕೊರಗುತ್ತ, “ ಎಲೆ ಕೆಟ್ಟ ದೈವವೆ ! ನಾನು ಮಹತ್ತರವಾದ ಸಂಪತ್ತನ್ನು ಪಡೆಯದೆ ಮರಣವನ್ನು ಪೊ೦ದುವೆ ನೆಂದು ಬಂದರೂ ಈ ದುರ್ದಶೆಯನ್ನು ಂಟುಮಾಡಿದೆಯಾ ? ?” ಎಂದು ನಿಟ್ಟುಸಿರು ಗಳಂ ಬಿಡುತ್ತಿರಲು; ವಿದೂಷಕನು- ಅಯಾ ರಾಜೇಂದ್ರನೇ, ಬಹುದಿನದಿಂದ ಲೂ ನಿನ್ನ ಪಾದಾರವಿಂದಗಳನ್ನು ನಂಬಿದ ಎನ್ನ ನ್ನು ಮರೆಯದಿರು ನಾನಾದರೋ ಈ ದೇವಿಯು ಕಟ್ಟಿಸಿರುವ ಕಟ್ಟಿ ನಿ೦ದಲೆ ಪ್ರಾಣಗಳ೦ ಬಿಟ್ಟು ಪರಲೋಕವಂ ಪೊಂ ದುವೆನು. ” ಎಂದು ಮುಸಿಕೆ ವಸ್ತ್ರವಂ ಮುಚ್ಚಿ ರೋದನವಂ ಗೆಯ್ಯು, ಕಾಂಚನ ಮಾಲೆಯೊಡನೆ ಪೋಗಲು : ದೇವಿಯು ರಾಯನ ಮುಖವ ನೋಡದೆ ವ್ಯಸನದಿಂ ಪೋಗಲು ; - ರಾಯನು ಬಾಡಿದ ಮನಸ್ಸುಳ್ಳವನಾಗಿ, ( ಈಗ ಬಹಳವಾದ ಕಮ್ಮವ ಕೈ ಡಿತು. ಈಗ ನಾನು ರೋಷದಿಂದ ಭಯಂಕರವಾದ ದೇವಿಯ ಮುಖವಂ ನೋಡಿ ವ್ಯಸನವಂ ಪೊಂದಲೆ ? ದೇವಿಯು ಬೆದರಿಸುವುದರಿಂದ ದಿಕ್ಕುದಿಕ್ಕುಗಳಿಗೆ ಬಾಯಿಬಿಡುತ್ತ ದೀನಳಾದ ಸಾಗರಿಕೆಯಂ ಸ್ಮರಿಸಿ ರೋದನವಂ ಗೆಯ್ಯಲೆ ? ಬಲ ವಾದ ಬಂಧನಕ್ಕೆ ಒಳಗಾಗಿ ಕಳವಳಂಗೊಳ್ಳುತ್ತ ಪೋದ ಎದೂಷಕನಂ ನೆನೆನೆನೆದು ವ್ಯಸನವಂ ಪೊಂದಲೇ ? ಈಗ ಯಾರನ್ನು ಕುರಿತು ವ್ಯಸನದಂ ಪೊಂದಲ ? ಯಾರು ಎನಗೆ ನಂಬುಗೆಯಂ ಪೇಳುವರು ? ಸರ್ವ ಪ್ರಕಾರದಲ್ಲಿಯೂ ವ್ಯಸನವಂ ಮುಕ್ತಿ ಕೊಂಡು ಒಂದು ಕ್ಷಣವಾದರೂ ಸುಖವಂ ಪೊಂದುವುದಕ್ಕೆ ಇಲ್ಲವಾದುದು. ಈಗ ಇಲ್ಲಿ ನಾನೊಬ್ಬನೇ ಇದ್ದು ಪ್ರಯೋಜನವೇನು ? ನನ್ನ ಶಯನ ಗೃಹವಂ ಪೋಂದು ವೆನು ' ಎಂದು ಅಲ್ಲಿಂದ ಪೊರಮಟ್ಟು ಬರುತ್ತ, ಈಗ ವಸಂತಕ ಸುಸಂಗತೆ ಸಾಗ ರಿಕೆ ಈ ಮೂರು ಜನಕ್ಕೂ ಒಲವತ್ತರವಾದ ಶಿಕ್ಷೆಯನ್ನುಂಟುಮಾಡಿರುವುದರಿಂದ ಅವರು ಪ್ರಾಣಗಳಂ ಬಿಡುವುದರಲ್ಲಿ ಸಂದೇಹವೇ ತೋರಲಾರದು. ಈ ದೇಯಂ ನಿಗ್ರಹಿಸಿ ಎನ್ನ ಪ್ರಭುತ್ವ ಶಕ್ತಿಯಿಂದ ಮೂರು ಜನಗಳನ್ನು ಬಿಡಿಸಿ ಸೌಖ್ಯವನ್ನು ೦ಟು ಮಾಡುವೆನೆಂದರೆ ವಾಸವದತ್ತೆಯು ಮಹಾಕೋವಾಲು ಯಾಗಿರುವದರಿಂದ ತನ್ನ ಪ್ರಾಣಗಳಂ ಬಿಟ್ಟು ಲೋಕದಲ್ಲಿ ಎನಗೆ ಬಲವಾದ ಅಪಕೀರ್ತಿಯನ್ನುಂಟುಮಾಡದೆ ಬಿಡಳು. ಆದುದರಿಂದ ದೇವಿಯ ಸವಿಾಪದಂ ಸೇರಿ, ಉಪಚಾರೋಕ್ತಿಗಳಂ ಪೇಳಿ, 17