ಪುಟ:ವತ್ಸರಾಜನ ಕಥೆ.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೦ - ಕರ್ಣಾಟಕ ಕಾವ್ಯಕಲಾನಿಧಿ, - ಅವರುಗಳಂ ಬಿಡಿಸುವೆನು ” ಎಂದು ತನ್ನ ಮನದಲ್ಲಿ ನಿಶ್ಚಯಿಸಿ ಬರುತ್ತಿರಲು ; ವಾಸವದತ್ತೆಯು ಮುತ್ತಿನ ಹಜಾರಕ್ಕೆ ಬಂದು ಕುಳಿತು, ಕಾಂಚನಮಾಲೆಯಂ ಕರೆದು- ಎಲೆ ಬಾಲೆಯೇ, ಸುಸಂಗತೆಯ ನಾಗರಿಕೆಯೂ ವಿದೂಷಕನೂ ಈ ಮೂರು ಜನಗಳೂ ಮಾಡಿದ ಕೃತ್ರಿಮಸಂಧಾನವನ್ನು ಸ್ಮರಿಸಿ ಎನ್ನ ಮನದಲ್ಲಿ ಬಲ ವರವಾದ ಆಕೃತ್ಯವು ತೋರುತ್ತಿರುವುದು, ಈ ಮೂರು ಜನಕ್ಕೂ ಏನು ಶಿಕ್ಷೆಯಂ ಗೆಯ್ಯಬೇಕು ? ಎಲ್ಲಿ ರಾಯನು ಕಾಣದಂತೆ ಇರಿಸತಕ್ಕುದು ? ಈಗ ಅವರನ್ನು ಎಲ್ಲಿ ಇರಿಸಿದ್ದೀಯೆ?' ಎಂದು ನುಡಿಯಲು ; ಆ ಕಾಂಚನಮಾಲೆಯು ಇದೇ ಸಮಯ ದಲ್ಲಿ ನಾಗರಿಕೆಗೆ ತಕ್ಕ ಶಿಕ್ಷೆಯನ್ನು ೦ಟುಮಾಡಿ ಎಂದೆಂದಿಗೂ ತಲೆಯನೆತ್ತದಂತೆ ಮಾಡಿಸುವೆನೆಂದು ಮನದಲ್ಲಿ ನಿಶ್ಚಯಿಸಿ ದೇವಿಯಂ ಕುರಿತು-. ಎಲೆ, ತಾಯೇ, ವಸಂತಕನನ್ನು ಶಕುಂತಶಾಲೆಯ ಬಾಗಿಲಲ್ಲಿ, ಸುಸಂಗತಿಯನ್ನು ಮುತ್ತಿನ ಹಚಾರದ ಮೊಗಸಾಲೆಯಲ್ಲಿ, ಸಾಗರಿಕೆಯನ್ನು ಹವಳದ ಹಜಾರದ ಜಗಲಿಯಲ್ಲಿ ಬೇರೆ ಬೇರೆ ಒಬ್ಬರೊಬ್ಬರು ಮಾತನಾಡದಂತೆ ಇರಿಸಿರುವೆನು. ಆದರೆ ಬೇಲದ ಬೀಜವಂ ಬಿತ್ತಿ ಕಾಲಿಗೆ ಮುಳ್ಳು ಮಾಡಿಕೊಳ್ಳು ವುದು ಯುಕ್ತವಲ್ಲವೆಂತಲೂ, ಎಂದಿದ್ದರೂ ನಾಗರಿ ಕೆಯು ವೂಜ್ಯಳಾದ ನಿನಗೆ ಪ್ರತಿಕಕ್ಷಿಯಾಗಿ ನಿಲ್ಲದೆ ಬಿಡಳು, ತನಗೆ ಹಾನಿಯನ್ನು c ಟುಮಾಡುವ ಪದಾರ್ಥವನ್ನು ಆ ಕ್ಷಣದಲ್ಲೇ ಬಿಟ್ಟು ಕಳೆಯಬೇಕೆಂತಲೂ, ಇನ್ನೂ , ನಾನಾಪ್ರಕಾರವಾದ ಮಾತುಗಳನ್ನು ವಿಜ್ಞಾಸನೆಯಂ ಗೆಯ್ದಾಗ್ಯೂ ನನ್ನ ಬಿನ್ನ ಪವು ಆಗ ಆಕೆ ಹಿತವಾಗಿ ತೋರಲಿಲ್ಲ. ಈಗಲಾದರೂ ಸೇವಕಳಾದ ನಾನು ಅರಿಕೆ ಗೆಯ್ಯುವ ವಾಕ್ಯವನ್ನು ವಿಹಿತವೆಂದು ಚಿತ್ರಕೆ ತರುವುದಾದಲ್ಲಿ ಬಿನ್ನಿಸುವೆನು ?? ಎಂದು ನುಡಿಯಲು ; ದೇವಿಯು – ಎಲೆ ಕಾಂತೆಯೇ, ನೀನು ಹೇಳಿದ ವಾಕ್ಯವೆ ಅವು ಈಗ ನಿದರ್ಶನಕ್ಕೆ ಬಂದುದು, ಯುಕ್ತಿಯಿಂದ ಯುಕ್ತವಾಗಿ ವಿಹಿತವಾದ ವಾಕ್ಯವನ್ನು ಬಾಲರು ಹೇಳಿದರೂ ಗಿಳಿಗಳು ಹೇಳಿದರೂ ಅಗತ್ಯವಾಗಿ ಗ್ರಹಿಸಬೇ ಕೆ೦ದು ಲೋಕದಲ್ಲಿ ಪ್ರಸಿದ್ದಿ ಇರುವುದರಿಂದ, ನೀನು ಎನಗೆ ಹಿತಕರಳಾದ ಸೇವಕ ಳಾದುದರಿಂದ ಹೇಗೆ ಬಿನ್ನಿಸುತ್ತಿರುವಿಯೋ ಆ ಮೇರೆ ಕಾರವನ್ನು ನಡೆಯಿಸುವೆನು , ಎಂದು ಅಪ್ಪಣೆಯನ್ಶಿಯಲು ; ಕಾಂಚನಮಾಲೆಯು ನಾಗರಿಕೆಯಲ್ಲಿ ಯಾವಾಗಲೂ ಅಸೂಯೆಯುಳ್ಳವಳಾದುದರಿಂದ ಮೊದಲು ಸಾಗರಿಕೆಗೆ ಬಲವಾಗಿ ಬಂಧನವನ್ನು ೦ ಟುಮಾಡಿಸಿ, ಈ ಅಂತಃಪುರದಿಂದ ಹೊರಡಿಸುವ ರೀತಿಯ೦ ಮಾಡಬೇಕೆಂದು ಯೋಚಿಸಿ, (• ಎಲೌ ತಾಯೇ, ಕೇಳು, ಈ ನಾಗರಿಕೆಯನ್ನು ಯಾವ ವರೆಗೆ ಅಂತಃಪುರದಲ್ಲಿ ಇರಿಸಿಕೊಂಡಿರುವೆಯೋ ಆವರೆಗೂ ನಿನಗೂ ವ್ಯಸನವು ತಪ್ಪದು. ನಮ್ಮಲ್ಲಿರುವ ಸ್ತ್ರೀಯರುಗಳು ವಂಚನೆಗೆ ಅಭಿಮಾನದೇವತೆಗಳಂತೆ ಇರುವರು. ಈಗ ಸುಸಂಗತೆಯನ್ನು ಶಿಕ್ಷಿಸಿದಾಗ್ಯೂ ಇನ್ನಾ ವಳಾದರೂ ಸಾಗರಿಕೆಗೆ ಒಳಗಾಗಿ ರಾಯನಲ್ಲಿ ಮದ್ಯವನ್ನು ನಡೆಸದೆ ಬಿಡಳು. ಈಗ ತಿನ್ನಿಸಿ ಹೊರಕ್ಕೆ ಕಳುಹಿಸಿ