ಪುಟ:ವತ್ಸರಾಜನ ಕಥೆ.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೦ - ಕರ್ಣಾಟಕ ಕಾವ್ಯಕಲಾನಿಧಿ, ನಿರಲಾರದೆ ಮನದಲ್ಲಿ ಕೊಬ್ಬು ಹೆಚ್ಚಿ ತೀಟೆಯಿಂದ ಮಾಡಿದ ಆಟಗಳಿಗೆ ತಕ್ಕ ಫಲ ವನ್ನನುಭವಿಸುವಳಾಗು ” ಎಂದು ನುಡಿದು, ಸಂಕಲೆಯಂ ತೊಡಿಸಿ, ನಾಲ್ಕು ಜನ ಸಖಿಯರುಗಳನ್ನು ಕರೆದು, ಇವಳನ್ನು ಎತ್ತಿಕೊಂಡು ಪೋಗುವುದಕ್ಕೆ ಸಜ್ಜುಗೊ ಳಿಸಿ, ದೇವಿಗಾಚ್ಛಾಪಿಸುವುದಕ್ಕೆ ಹೋಗಲು ; ಸಾಗರಿಕೆಯು ದೀನಳಾಗಿ ದಿಕ್ಕುಗೆಟ್ಟು ತನಗೆ ಉಂಟಾದ ವಿಪತ್ತನ್ನು ನೋಡಿ, ದೈವಸಂಕಲ್ಪವೇ ದೊಡ್ಡದಲ್ಲದೆ ಮನುಷ್ಯತ್ನ ವು ಎಷ್ಟು ಮಾತ್ರಕ್ಕೂ ನಡೆಯಲಾ ರದು, ಇದಕ್ಕೆ ವ್ಯಸನವಂ ಪೊಂದಿ ಪ್ರಯೋಜನವಿಲ್ಲವೆಂದು ಮಹಾರಾಜಪುತ್ರಿಯಾ ದುದರಿಂದ ಧೈರವಂ ಪಿಡಿದು, ಮುಖವಂ ಮುಚ್ಚಿ, ತಲೆಯಂ ತಗ್ಗಿಸಿ, ಕುಳಿತಿರಲು; ಕಾಂಚನಮಾಲೆಯು ( ಎಲೌ ದೇವಿಯೇ, ನಿನ್ನ ಅಪ್ಪಣೆಯಾದಂತೆ ಉಜ್ಜಿ ಯಿನೀ ಪಟ್ಟಣಕ್ಕೆ ಕಳುಹಿಸುವೆನು ?” ಎನಲು ; ದೇವಿಯು ಅವಳನ್ನು ಕಳುಹಿಸಿ ಕೊಡುವುದಕ್ಕೆ ಮನದಲ್ಲಿ ಸಮ್ಮತಿಯಂ ಪಡೆಯದೆ, ಎಲೆ ಕಾಂಚನಮಾಲೆ, ಈ ನಾಗರಿಕೆಯಂ ಉಜ್ಜಯಿನೀ ಪಟ್ಟಣಕ್ಕೆ ಕಳುಹಿಸಿದಲ್ಲಿ ಇಂಥ ರೂಪು ಗುಣ ವಿದ್ಯೆ ಮೊದಲಾದ ಸದ್ದು ಇಶಾಲಿಯಾದ ಕಾಂತೆಯು ನಮ್ಮ ಅಂತಃಪುರದಲ್ಲಿರುವಳೇ ಪೇಳು. ಬ್ರಹ್ಮಸೃಷ್ಟಿಯಲ್ಲಿ ಇವಳಂಥ ಸ್ತ್ರೀಯು ಹುಟ್ಟುವುದು ದುರ್ಲಭವಾದುದ ರಿಂದ ಇವಳನ್ನು ಗೋ ಸ್ಯವಾದಂಧ ಸ್ಥಾನದಲ್ಲಿಟ್ಟು ಉಜ್ಜಯಿನೀ ಪಟ್ಟಣಕ್ಕೆ ಕಳು ಹಿಸಿದಳೆಂಬ ವಾರ್ತೆಯನ್ನು ಭಟ್ಟಿಸುತ್ತಿರುವುದು ಯುಕ್ತವಾಗಿ ತೋರುವದು. ? ಎ೦ದು ವೇಳೆ ಕಾಂಕನ ಪತಿಯು ಎಷ್ಟು ಅಪರಾಭವಂ ಗೆಯ್ದರೂ ಸಾಗ ಏಕೆಯಲ್ಲಿ ದೇವಿಗೆ ಇನ್ನೂ ಅಭಿಮಾನವು ಬಿಡಲಿಲ್ಲ, ಯಾವ ತೆರದಲ್ಲಾದರೂ ಉಜ್ಜಯಿನೀ ಪಟ್ಟಣಕ್ಕೆ ಸಾಗಿಸಬೇಕೆಂಬದಾಗಿ ಯೋಚಿಸಿ, ಎಲೌ ದೇವಿಯ ಚಿನ್ನದ ಕತ್ತಿಯೆಂದು ಕತ್ತು ಕೊಯ್ದು ಕೊಳ್ಳುವುದು ಯುಕ್ತವೇ ? ಹುಲಿಯ ಮ ರಿಯು ಚೆಲುವಾಗಿ ಇದೆ ಎಂದು ಸಲಿಗೆಯಿಂದ ನಾಕಬಹುದೇ ? ಹಾವಿನ ಮರಿಯು ಹಸನಾಗಿ ಇದೆ ಎಂದು ತಾಲಂ ಪೊಯ್ದು ವೃದ್ಧಿಯಂ ಹೊಂದಿಸಬಹುದೇ ಹೇಳು. ವಜ್ರದ ಸಲಾಕಿಯು ವೈನವಾಗಿ ಇದೆ ಎಂದು ಕಣ್ಣುಗಳಂ ಚುಚ್ಚಿ ಕೊಳ್ಳ ಬಹುದೆ ? ಶತ್ರುವಾದ ಈ ನಾಗರಿಕೆ ವಿದ್ಯಾ ಬುದ್ಧಿಯುಳ್ಳವಳೆಂದು ಇವಳಲ್ಲಿ ಗುಣಗಳಂ ಎಣಿಸುತ್ತ ರೂಪಿಗೆ ಮರುಳಾಗಿ, ಮಾಡಿದ ಅಪರಾಧಗಳಂ ಮರೆತು, ಮುಂದೆ ನಿನಗೆ ಹಾನಿ ಬರುವುದು ತಿಳಿದು, ರಾತ್ರಿಯಲ್ಲಿ ಕಂಡ ಬಾವಿಗೆ ಹಗಲು ಬುದ್ಧಿ ಪೂರ್ವಕ ವಾಗಿ ಬೀಳಲಿಸುವ ನಿನಗೆ ಇನ್ನು ಹೆಚ್ಚಾಗಿ ವಿಜ್ಞಾಪನೆಯಂ ಗೆಯುವುದಕ್ಕೆ ಶಕ್ತಳಾಗಲಾರೆನು ಈಗ ಉಗುರಲ್ಲಿ ಪೋಗುವ ಶತ್ರುವಾದ ಪದಾರ್ಥವು ಮುಂದೆ ಕೊಡಲಿಯಿಂದ ಕಡಿದಾಗ್ಯೂ ಸಮೆಯದಂತಾಗಿ ಬಹಳವಾದ ವಿಪತ್ತನ್ನುಂಟುಮಾ ಡುವುದು, ಇದರಮೇಲೆ ನಿನ್ನ ಚಿತ್ರಕ್ಕೆ ಬಂದಂತೆ ಮಾಡಬಹುದು, ಬಂಧುತ್ವವಂ ಬಳೆ ಸಿಯಾದರೂ ಅನೇಕ ದ್ರವ್ಯ ವಂ ವ್ರಯವಂ ಗೆಯಾದರೂ ಮಿತ್ರತ್ವವಂ ಸಂಪಾದಿಸಿ