ಪುಟ:ವತ್ಸರಾಜನ ಕಥೆ.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವತ್ಸರಾಜನ ಕಥೆ, ೧ಳಿ ಯಾದರೂ ವಿಷಚೂರ್ಣ ಮೊದಲಾದ ಮಾರಿಗಳಾದ ಯಂತ್ರ ಮಂತ್ರ ತಂತ್ರ ಪ್ರಯೋಗಗಳಿಂದಾದರೂ ಶತ್ರುವಂ ಶೀಘ್ರವಾಗಿ ಜಯಿಸಬೇಕೆಂದು ಕಳಿಂಗ ಬೃಹ ಸ್ಪತಿ ಮುಂತಾದ ನೀತಿಯಂ ಬಲ್ಲವರು ಹೇಳುತ್ತಿರುವರು. ಹೀಗಿರುವಲ್ಲಿ ಶತ್ರು ವೆಂದು ತಿಳಿದು ಮಾಡಿದ ವಿರೋಧಕಾರಗಳಂ ಸಹ ಕಂಡು ಸಾಗರಿಕೆಯಲ್ಲಿ ದಯೆಯಂ ಗೆಯುವುದಕ್ಕೆ ಇನ್ನೇನು ಸಂಬಂಧ ವಿರುವುದೋ ತಿಳಿಯದು ” ಎಂದು ನುಡಿಯಲಾ ದೇವಿಯು- ಇವಳಿಗೆ ಸಾಗರಿಕೆಯಲ್ಲಿ ಬಲವಾದ ದ್ವೇಷವಿರುವುದು. ಈಗ ಇವಳು ಪೇಳುವ ವಾಕ್ಯವು ನ್ಯಾಯವಾಗಿರುವುದು. ಆದರೂ ಅಂತಃಪು ರವಂ ಬಿಡಿಸಿ ಕಳುಹಿಸುವುದು ನ್ಯಾಯವಲ್ಲ ” ಎಂದು ಯೋಚಿಸಿ, ಕಾಂಚನಮಾ ಲೆಯಂ ಕರೆದು- ಎಲೆ ಬಾಲೆಯೇ, ನೀನು ಹೇಳುವ ವಾಕ್ಯವು ಯುಕ್ತವಾಗಿರು ವುದು; ಎನಗೆ ಹಿತಕರವಾಗಿಯ ಯುಕ್ತಿಯಾಗಿಯೂ ನೀತಿಮಾರ್ಗಕೆ ನ್ಯಾಯವಾ ಗಿಯೂ ಇರುವುದು, ಒಂದುವೇಳೆ ನಮ್ಮ ರಾಯನು ಇಲ್ಲಿಗೆ ಬಂದರೂ ಬರಬ ಹುದು, ಅದಕ್ಕೆ ಮುಂಚಿತವಾಗಿ ಯಾರೂ ಕಾಣದಂತೆ ಒಂದು ಸ್ಥಳದಲ್ಲಿ ಇವಳನ್ನು ಇರಿಸುವಳಾಗು. ನಾನು ನಮ್ಮ ತಂದೆಯ ಹೆಸರಿಗೆ ಒಂದು ಪತ್ರಿಕೆಯ೦ ಬರೆದು ಕೊಡುವೆನು ” ಎಂಬುವಷ್ಟರಲ್ಲೇ ಬಾಗಿಲ ಕಾವಲಗಾತಿಯಾದ ಮದನಿಕೆಯು ಓಡಿ ಬಂದು- ಎಲೌ ತಾಯೇ, ರಾಯನು ಇಲ್ಲಿಗೆ ಬಿಜಯಂ ಗೆಯ್ಯು ವನು ” ಎಂದು ಬಿನ್ನಿಸಲು; ಕಾಂಚನಮಾಲೆಯು ತ್ವರಿತದಿಂದ ಆ ಸಾಗರಿಕೆಯನ್ನು ಸಾಗಿಸಿಕೊಂಡು ಪೋಗಲು ; ವಿದೂಷಕನು ದೇವಿಯ ಸವಿಾಪವ ಕುರಿತು ಬರುವ ರಾಯನಂ ಕಂಡು ಕುಳಿತಿದ್ದ ಸ್ಥಳವಂ ಬಿಟ್ಟಿದ್ದು, ಅಯ್ಯಾ ರಾಯನೇ, ನಮ್ಮ ಪ್ರಾಣಗಳು ನಿನ್ನ ಕೈಯಲ್ಲಿರುವುವ ” ಎ೦ದು ಕೂಗಲು ; ರಾಯನ ಬಂಧನಕೆ ಸಿಕ್ಕಿದ ಕಪಿ ಯಂತೆ ಇರುವ ವಿದೂಷಕನಂ ಕಂಡು ಮನದಲ್ಲಿ ಮರುಗುತ್ತ ದೇವಿಯು ಇರುವ ಹಜಾರಕ್ಕೆ ಬಂದು ಸೇರಿ, ನಿದ್ರೆಯಂ ಗೆಯ್ಯುವಂತೆ ಕಪಟದಿಂ ಮಲಗಿರುವ ದೇ ವಿಯ ಸವಿಾಪವಂ ಸೇರಿ ಕುಳಿತಿರಲು ; ದೇವಿಯು ನಾಲ್ಕು ಗಳಿಗೆಯ ಮೇಲೆ ಕಣೆ ರೆದು ನೋಡಿ, ಆಗತಾನೆ ಕಂಡವಳ೦ತೆ ಏನೋ ಒಂದು ಸರಿಯಾಗಿ ಎದ್ದು ನಮ್ಮ ನಾರವಂ ಗೆಯ್ದು, ಮುಖವಂ ತಿರುಗಿಸಿ, ತೆರೆಯ ಮರೆಯಂ ಸೇರಿ, ಊಳಿಗದ ಹೆಣ್ಣುಗಳಲ್ಲಿ ತಪ್ಪಿಲ್ಲದೆ ಇದ್ದರೂ ಕಡುನುಡಿಯಂ ನುಡಿದು, ಕೋಪಿಸಿಕೊಳ್ಳುತ್ತ, ಎಲೈ ದೇವಿಯೇ ಎಂದು ನುಡಿಯುವ ರಾಯನ ವಾಕ್ಯವಂ ಕಿವಿಗೊಳಿಸದೆ ಇರಲು; ರಾಯನು ಸವಿಾಪವಂ ಸಾರಿ, ಅವಳ ಕೈಗಳಂ ಪಿಡಿದು--(( ಎಲೆ ಕಾಂತೆಯೇ, ಇದೊಂದು ಬಾರಿ ಎನ್ನ ಅಪರಾಧವಂ ಕ್ಷಮಿಸಿ, ಎನಗೋಸುಗವಾಗಿ ಬಂಧನಕೆ ಒಳಗಾಗಿರುವ ಸಾಗರಿಕೆ ಸುಸಂಗತ ವಸಂತಕ ಈ ಮೂರು ಜನವನ್ನೂ ಬಿಟ್ಟು ಕಳುಹಿಸುವಳಾಗು ” ಎಂದು ಬೇಡಿಕೊಂಡಾಗೂ ಪ್ರತ್ಯುತ್ತರವಂ ಪೇಳದೆ, ಸ್ಥಾನಕ್ಕೆ ಪೊತ್ತು ಪೋದುದೆಂದು ಅಲ್ಲಿ ನಿಲ್ಲದೆ ಎದ್ದು ಹೋಗಲು ; ರಾಯನು ಭಗ್ನ ಮನೋರಥ