ಪುಟ:ವತ್ಸರಾಜನ ಕಥೆ.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಿಡಿ. - ಕರ್ಣಾಟಕ ಕಾವ್ಯಕಲಾನಿಧಿ, - ವುಳ್ಳವನಾಗಿ, “ ನಾನು ಬಂದ ಮಾರ್ಗದಲ್ಲಿ ವಿದೂಷಕನಿರುವನು, ನಾನು ದೇವಿಯ ಸವಿಾಪಕೆ ಬಂದುದರಿಂದ ಎಲ್ಲರಿಗೂ ಕ್ಷೇಮವುಂಟಾಗುತ್ತದೆ ಎಂದು ತಿಳಿದಿರುವನು. ಈಗ ಅವನಿಗೆ ಮುಖವಂ ಹೇಗೆ ತೋರಿಸಲಿ ? " ಎಂದು ಆ ಮಾರ್ಗವನ್ನೇ ಬಿಟ್ಟು ಶಯನಗೃಹನಂ ಕುರಿತು ಪೋಗಲು ; ದೇವಿಯು ಸಖಿಯರುಗಳಿ೦ದ ರಾಯನು ಪೋದ ವೃತ್ತಾಂತವಂ ತಿಳಿದು ಎಂದಿನಂತೆ ತಾನಿದ್ದ ಹಜಾರಕ್ಕೆ ಬಂದು ಕುಳಿತಳು. ಎಂಬಲ್ಲಿಗೆ ಶ್ರೀಕೃಷ್ಣರಾಜ ಕಂಠೀರವರಿಂ ಲೋಕೋಪಕಾರಾರವಾಗಿ ನವರಸಭರಿತವಾಗಿ ಕರ್ಣಾಟಕಭಾಷೆಯಿಂದ ವಿರಚಿಸಲ್ಪಟ್ಟ ಶ್ರೀಕೃಷ್ಣರಾಜ ಸೂಕ್ತಿ ಮುಕ್ತಾವ: ಯೆಂಬ ಗ್ರಂಥದೊಳೆ ವತ್ಸರಾಜನ ಕಥೆಯಲ್ಲಿ ಹದಿನೈದನೆಯ ಗುಚ್ಛಂ ಸಂಪೂರ್ಣವಿ. - ಜಿ. 14, ಹದಿನಾರನೆಯ ಗುಚ್ಛ ಅನಂತರದಲ್ಲಿ ವಾಸವದತ್ತಾ ದೇವಿಯು-' ಇನ್ನು ಬಲವತ್ತರವಾದ ಮೂ ರ್ಖತ್ವವನ್ನು ಮಾಡಿದಲ್ಲಿ ರಾಯನ ಚಿತ್ರದಲ್ಲಿ ಬಲವಾದ ವಿರೋಧವು ತೋರುತ್ತ ಲಿರುವುದು. ಆದುದರಿಂದ, ಇವರಿಗೆ ಮಾಡತಕ್ಕ ಶಿಕ್ಷೆಯನ್ನು ಮಾಡಿದ್ದಾಯಿತು. ಇನ್ನು ಮೇಲೆ ಸಾಗರಿಕೆ ಮುಂತಾದ ಮೂರು ಜನರನ್ನೂ ಬಿಟ್ಟು ಕಳುಹಿಸುವೆನು ” ಎಂದು ಮನದಲ್ಲಿ ನಿಸ್ವಯಂ ಗೆಯ್ಯಲು ; ಕಾಂಚನಮಾಲೆಯು, ರಾಯನು ಬಂದು ಸಾಗರಿಕೆ ಮುಂತಾದ ಮೂರು 'ಏನ ನನ್ನ ಬಿಟ್ಟು ಬಿಡಬೇಕೆಂದು ಹೇಳಿಕೊಂಡ ಸಂಗತಿಯನ್ನು ತಿಳಿದು, ಇಲ್ಲವಾದ ಕಾರಗಳಂ ಕಲ್ಪಿಸಿಯಾದರೂ ಸಾಗರಿಕ ಮುಂತಾದವರ ಸಂಕಲೆಯಂ ತೆಗೆಯಿಸಬಾರದೆಂದು ಯೋಚಿಸಿ, ದೇವಿಯ ಸವಿಾ ಸನಂ ಪೊಂದಿ, ಎಲೆ ದೇವಿಯೇ, ನಿನ್ನ ಅಪ್ಪಣೆಯಮೇರೆ ಸಾಗರಿಕೆಯನ್ನು ಅಂತಃ ಪುರದಲ್ಲಿರುವ ಸೆರೆಯ ಮನೆಗೆ ಕರೆದುಕೊಂಡು ಪೋಗುತ್ತಿರಲು, ಅವಳು- ಎಲೆ ನೀಚಳಾದ ಕಾಂಚನಮಾಲೆಯೇ, ನಾನು ಜೀವದಲ್ಲಿ ಉಳಿದುಕೊ೦ಡವಳಾದರೆ ನಿನಗೂ ವಾಸವದತ್ತೆಗೂ ಸಹ ಇದೇ ಶಿಕ್ಷೆಯನ್ನು ಮಾಡಿಸದೆ ಇದ್ದಲ್ಲಿ ಈ ನನ್ನ ಮೊಲೆಗಳು ಎಕ್ಕದ ಕಾಯಿಗಳಲ್ಲವೆ ' ಎಂದು ಎದೆಯನ್ನು ತನ್ನ ಕೈಗಳಿಂದ ಬಡಿದು