ಪುಟ:ವತ್ಸರಾಜನ ಕಥೆ.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

*** - ವತ್ಸರಾಜನ ಕಥೆ, - ೧೩. ಆಡಿದ ಇನ್ನು ಕೆಲವು ಮಾತುಗಳು ಈ ನಿನ್ನ ಸನ್ನಿ ಧಿಯಲ್ಲಿ ವಿಜ್ಞಾಪಿಸುವುದಕ್ಕೆ ಯೋಗ್ಯಗಳಲ್ಲವೆಂದು ಸುಮ್ಮನಿರುವೆನು, ನಿನ್ನಲ್ಲಿ ಅವಳಿಗೆ ಉಂಟಾಗಿರುವ ವಿರೋ ಧವನ್ನು ನೋಡಿದಲ್ಲಿ ಯಾವಾಗ ಏನು ಮೋಸವಾದ ಕಾರವಂ ಗೆಯ್ಯುವ ಎಂದು ಭಯವು ಎನ್ನ ಮನಕೆ ಬಲವಾಗಿ ತೋರುವುದು ” ಎಂದು ಬಿನ್ನಿಸಲು ; ದೊರೆಗಳಿಗೆ ಕಿವಿಗಳೇ ಕಣ್ಣು ಗಳಾದುದರಿಂದ ದೇವಿಯು ಕಾಂಚನಮಾಲೆಯ ವಾಕ್ಯವನ್ನು ಯಥಾರ್ಥವಾಗಿ ತಿಳಿದು, (' ಎಲೆ ಬಾಲೆಯೇ, ಅವಳನ್ನು ನಾಳೆ ನಾಡಿ ಧ್ವರಲ್ಲೇ ಉಜ್ಜಯಿನೀ ಪಟ್ಟಣಕ್ಕೆ ಕಳುಹಿಸಿಕೊಡುವೆನು, ಈಗ ರಾಜೇಂದ್ರನು ಬಂದು ಹೇಳಿಕೊಂಡುದಕ್ಕೆ ವಿದೂಷಕನನ್ನೂ ಸುಸಂಗತೆಯನ್ನೂ ಬಂಧನದಿಂದ ಬಿಟ್ಟು ಕಳುಹಿಸುವುದು ಯುಕ್ತವಾಗಿ ಇದೆ ಎಂದು ವಿದೂಷಕನನ್ನು ಕರೆಯಿಸಿ ಅನೇಕ ಉಪಚಾರೋಕ್ತಿಗಳಂ ಪೇಳಿ ಬಿಟ್ಟು ಕಳುಹಿಸು. ಸುಸಂಗತೆಯನ್ನು ಕರೆ ಯಿಸಿ~ಎಲೆ ಬಾಲೆಯೇ, ನೀನು ಬಾಲ್ಯದಿಂದಲೂ ಎನ್ನಿ೦ದ ಪಾಲಿತಳಾದುದಕೆ ಎನಗೆ ಹಿತವಾದ ಕಾವ್ಯವನ್ನು ಗೆಯ್ದವಳಾದೆ. ಇನ್ನು ಮೇಲೆ ಬುದ್ಧಿಗೆಟ್ಟು ನಡೆ ದಲ್ಲಿ ಇದಕ್ಕಿಂತಲೂ ನೂರು ಮಡಿಯಾದ ಶಿಕ್ಷೆಯುಂಟಾಗುವುದರಲ್ಲಿ ಸಂದೇಹವೇ ಇಲ್ಲವ ” ಎಂದು ನುಡಿದು, ಬಿಡಿಸಿ ಕಳುಹಿಸಲು ; ಸುಸಂಗತೆಯು ಮೃತ್ಯುವಿನಿಂದ ಬಿಡಿಸಿಕೊಂಡು ಬಂದವಳಂತೆ ಬಹುಸಂತೋ ಷದಿಂದ ಯುಕ್ತಳಾಗಿ ಬರುತ್ತ, ( ನಮ್ಮ ಸಾಗರಿಕೆಯ ವೃತ್ತಾಂತವೇ ತಿಳಿಯಲಿಲ್ಲ, ವಿದೂಷಕನು ಏನಾದನೋ, ಮೇಧಾವಿನಿಯೆಂಬ ಶಾರಿಕೆಯು ಬಂದು ಪತ್ನಿಶಾ ಲೆಯಂ ಸೇರಿತೋ ಇಲ್ಲವೋ ತಿಳಿಯುವೆನು ” ಎಂದು ಸುತ್ತಲೂ ನೋಡುತ್ತ, ಶಕುಂತಶಾಲೆಯಂ ಕುರಿತು ಬರುತ್ತಿರಲು ; ಸಾಗರಿಕೆಯು ದೈವಯೋಗದಿಂದ ಈ ಮಾರ್ಗವಾಗಿ ಸುಸಂಗತೆಯಾಗಲೀ ವಿದೂಷಕನಾಗಲೀ ಬಂದಲ್ಲಿ ಅಮೋಘವಾದ ಈ ರತ್ನ ಮಾಲೆಯನ್ನು ಅವರ ಹಸ್ತಕೆ ಒಪ್ಪಿಸಿ ಸ್ಪಷ್ಟವಾಗಿ ಪ್ರಾಣಗಳಂ ಬಿಡಬಹುದೆಂದು ಯೋಚಿಸುತ್ತ ಹಿಂದು ಗಡೆಯಲ್ಲಿರುವ ಗವಾಕ್ಷಮಾರ್ಗದಿಂದ ನೋಡಿ, ಸುಸಂಗತೆಯ ಕಂಡು, ಕೈ ಬೀಸಿ ಕರೆಯಲು ; ಸುಸಂಗತೆಯು ಸಾಗರಿಕೆಯಂ ಕಂಡು ಮನದಲ್ಲಿ ಸಂಕಟವಂ ಪೊಂದಿ, CC ಈ ಸಾಗರಿಕೆಗೆ ಸೆರೆಮನೆಯು ಪ್ರಾಪ್ತಿಯಾದುದು ? ಇನ್ನೇನು ಗತಿ ? ) ಎಂದು ಹತ್ತಿರಕ್ಕೆ ಸೇರಲು ; ಸಾಗರಿಕೆಯು ಕಣ್ಣೀರುಗಳಂ ಬಿಡುತ್ತಾ “ ಎಲೆ ಪ್ರಾಣಪ್ರಿಯಳೇ, ನಿನ್ನ ಮುಖವಂ ಕಂಡು ಸಂತುಷ್ಟಳಾದೆನು, ಈ ರತ್ನ ಮಾಲೆಯ ನ್ನು ಯೋಗ್ಯನಾದ ಬ್ರಾಹ್ಮಣನಿಗೆ ಕೊಡುವಳಾಗು. ಈ ಸಂಕಲೆಯ ಸಂಕಟದಲ್ಲೇ ಪ್ರಾಣಗಳಂ ಬಿಡುವೆನು ” ಎಂದು ನುಡಿದು, ಆ ರತ್ನ ಮಾಲೆಯನ್ನು ಅವಳ ಹಸ್ತಕೆ ಕೊಟ್ಟು, ( ಇನ್ನು ಹೆಚ್ಚಾಗಿ ಮಾತನಾಡುವಳಾಗಬೇಡ ?” ಎಂದು ನುಡಿಯಲು ;