ಪುಟ:ವತ್ಸರಾಜನ ಕಥೆ.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ಕರ್ಣಾಟಕ ಕಾವೃಕಲಾನಿಧಿ, - ಸುಸಂಗತೆಯು ಆ ರತ್ನ ಮಾಲೆಯನ್ನು ಕೈಯಿಂದ ಮುಚ್ಚಿ ಪಿಡಿದು, ಶಕುಂತೆ. ಶಾಲೆಗೆ ಬಂದು, ಅಲ್ಲಿರುವ ಊಳಿಗದ ಹೆಣ್ಣು ಗಳ೦ ಕುರಿತು- " ಎಲೆ ಬಾಲೆಯರುಗ ಳಿರಾ, ಮೇಧಾವಿನಿಯೆಂಬ ಶಾರಿಕೆಯು ಬಂದು ತನ್ನ ಗೂಡನ್ನು ಸೇರಿದುದೇ ? ೨೨ ಎಂದು ಬೆಸಗೊಳಲು ; ಆ ಬಾಲೆಯರು, ಇವಳು ದೇವಿಯು ಮಾಡಿದ ಬಂಧನಕೆ ಒಳಗಾಗಿದ್ದಳೆಂಬ ವಾರ್ತೆಯನ್ನು ಕೇಳಿದೆವು. ಇವಳು ಮಾತ್ರವೇ ಈ ಪ್ರಶ್ನಿಶಾ ಲೆಗೆ ಬಂದಿರುವಳು. ಸಾಗರಿಕೆಯ ವಾರ್ತೆಯನ್ನು ತಿಳಿಯವು ೨” ಎಂದು ಮನದಲ್ಲಿ ಯೋಚಿಸಿ, 1 ಎಲೌ ಪೂಜ್ಯಳಾದ ಸುಸಂಗತೆಗೆ, ನೀನು ನಮಗೆ ಆಜ್ಞೆಯನ್ನಿತ್ತು ಪೊದಾಗಲೇ ಮಕರಂದೋದ್ಯಾನದಿಂದ ಹಾರಿ ಬಂದುದರಿಂದ ಆ ಮೇಧಾವಿನಿ ಯನ್ನು ಹಿಡಿದು ಪಂಜರದಲ್ಲಿ ಕೂಡಿದವ ' ಎಂದು ಆ ಪಂಜರವನ್ನು ತಂದು ತೋರಿ ಸಲು ; ಸುಸಂಗತೆಯು ಅಲ್ಲಿಂ ಪೊರಮಟ್ಟು, ಪಾದರಸದಂತೆ ಚಂಚಲವಾದ ಮನೆ ವೃತ್ತಿಯುಳ್ಳವಳಾಗಿ ಬರುತ್ಯ, ಸಗರಿಕೆಯ೦ ಸ್ಮರಿಸಿ- ಎತಿ ಪ್ರಿಯಸಖ ! ಎಲೆ ಸಿರಾಲಂಬಾರ ಬಾತಿ : ಎಲೆ ಲಬಾ ವತಿಯಾಗಿ ಲಾವಣ್ಯಸಮುದ್ರಳಾದ ಕಾಂತೆಂ ! ನೀನು ಸೆರೆಮನೆಯಲ್ಲಿ ಯಾರೊಡನೆ ಮಾತನಾಡುವೆ ? ಯಾರೊಡನೆ ಮಿತ್ರತ್ವಂ ಬಸನೆ ? ಯಾರಿಂದ ಸೇವೆಯ೦ ತೆಗೆದುಕೊಳ್ಳುವೆ ? ಯಾರು ನಿನ್ನ೦ ಸಲದವರು ? ಬಾಗೆಯ ಹೂವಿಗಿ೦ತಲೂ ಮೃದುವಾದ ನಿನ್ನ ಶರೀರಕ್ಕೆ ಸ್ಥಾನ ಮುಂತಾದೆ ನಿನ್ನ ಉಪಚಾರವಂ ಗೆಯು ಅರಿಸಿನವಂ ಪರಿಮಳ ಗಂಧವಂ ಯಾರು ಅನುಲೇಪನದ ಪಿಯುವರು ? ಇಲ್ಲಿಂದ ಉಜ್ಜಯಿನೀ ಪಟ್ಟಣಕೆ ಪೋದಮೇಲೆ ಹೇಗೆ ಪ್ರಾಣಧಾರಣವಂ ಗೆಯುವ ? ಶರತ್ಕಾಲದ ಚಂದ್ರನಂತೆ ಕಂಗಳಿಗೆ ಮಂಗ ೪ಾಕಾರವಾದ ನಿನ್ನ ಮುಖವಂ ಇನ್ನು ಒಂದುಬಾರಿ ಹೇಗೆ ಕಾಣುವೆನು ? " ಎ೦ದು ತನ್ನ ಮುಖಕ್ಕೆ ಸೀರೆಯ ಸೆರಗನ್ನು ಮುಚ್ಚಿ ಯಾರೂ ಕಾಣದಂತೆ ರೋದನವಂ ಗೆಯ್ದು ನಿಟ್ಟುಸಿರುಗಳ೦ ಬಿಟ್ಟು ದಿಕ್ಕುಗಳ೦ ನೋಡುತ್ತ, ' ಎಲೈ ದುಷ್ಟ ದೈವವೇ ! ರಕ್ಷಕರಿಲ್ಲದೆ ಸೆರೆಮನೆಗೆ ಸೇರಿದ ಈ ಸಾಗರಿಕೆಯಲ್ಲಿ ಉತ್ತಮವಾದ ರೂಪವನ್ನೂ ದೋಷರಹಿತವಾದ ವಿದ್ಯೆಯನ್ನೂ ಆಶ್ಚರ್ಯಕರವಾದ ಬುದ್ಧಿಯನ್ನೂ ಸಹ ಪಿಕೆ ನಿರ್ಮಾಣವಂ ಗೆದ್ದಿರುವೆ ? ಆಥವಾ ನಿರ್ಮಾಣವಂ ಗೆಯ್ದರೂ ನೀಚವಾದ ಸೆರೆ ಮನೆಯನ್ನು ಸೇರಿಸಬಹುದೆ ? ಅಥವಾ ಸೇರಿಸಿದರೂ ಕಮಲಗಳಿಗೆ ಕಾಂತಿಯನ್ನಿ ಯುವ ಅವಳ ಕಾಲುಗಳಿಗೆ ಸಂಕಲೆಯು ಪ್ರಾಪ್ತವಾಗುವಂತೆ ಮಾಡಬಹುದೇ ಪೇಳು ? ಗುಣವಂತರಿಗೆ ಕಷ್ಟವನ್ನು ದುಷ್ಟರಿಗೆ ಸಕಲೈಶ್ವರವನ್ನು ೦ಟುಮಾಡುವ ನಿನ್ನ ಕೂರಚರೈಗಳಂ ಹೇರಳವಾಗಿ ನಿಂದಿಸಿ ಫಲವಿಲ್ಲ. ಯಾರಿಗಾದರೂ ಒಬ್ಬ ಬ್ರಾಹ್ಮಣನಿಗೆ ಕೊಡುವಂತೆ ಎನ್ನ ಹಸ್ತಕೆ ಕೊಟ್ಟಿರುವ ರತ್ನ ಮಾಲೆಯನ್ನು ಯಾವ ಭಾಹ್ಮಣನಿಗೆ ಕೊಡಲಿ ? " ಎಂದು ಕೆಲವುದೂರ ಬಂದು, ಇದಿರುನೋಡಿ, ಬರುವ