ಪುಟ:ವತ್ಸರಾಜನ ಕಥೆ.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವತ್ಸರಾಜನ ಕಥೆ, - ೧44 ವಿದೂಷಕನಂ ಕಂಡು, ಇದೋ ನಮಗೆ ಆಪ್ತನಾದ ವಿದೂಷಕನು ಸಂತೋಷ ದಿಂದ ಯುಕನಾಗಿ ಬರುವನಂತೆ ತೋರುವುದು, ಈ ರತ್ನ ಮಾಲೆಯನ್ನು ಇವನಿಗೆ ಕೊಡುವೆನು ” ಎಂದು ನಿಶ್ಚಯಿಸಿ ಬರುತ್ತಿರಲು ; ಅಷ್ಟರಲ್ಲೇ ವಿದೂಷಕನು ಅತಿಸಂತೋಷದಿಂದ ಯುಕ್ತನಾಗಿ, ( ಈಗ ನಮ್ಮ ರಾಜೇಂದ್ರನು ಬಂದುದರಿಂದ ಕೋಪವಂ ಬಿಟ್ಟು ಪ್ರಸನ್ನಳಾದ ವಾಸವದ ತಾದೇವಿಯು ಬಂಧನದಿಂದ ಎನ್ನ೦ ಬಿಡಿಸಿ ತನ್ನ ಹಸ್ತದಿಂದ ಕೊಟ್ಟ ಹೂರಣ ಗಡುಬುಗಳಿಂದ ತುಂಬುವುದಕ್ಕೆ ಆಗದೆ ಇದ್ದ ಎನ್ನ ಹೊಟ್ಟೆಯಂ ತುಂಬಿದೆನು. ಮತ್ತು ಪಟ್ಟಿಯ ಮಡಿಗಳನ್ನೂ ರತ್ನ ಗಳಿ೦ದ ಕೆತ್ತಲ್ಪಟ್ಟ ಕರ್ಣಾಭರಣ ಮೊದಲಾದ ಆಭರಣಗಳನ್ನೂ ಸಹ ತೆಗೆದುಕೊಂಡು ಅಲಂಕೃತನಾಗಿರುವ ಎನ್ನ ಶರೀರವಂ ತೋರಿಸಲೋಸುಗ ರಾಜೇಂದ್ರನಾದ ವತ್ಸ ರಾಜನ ಸವಿಾಪವಂ ಕುರಿತು ಪೋಗು ವೆನು ” ಎಂದು ನುಡಿಯುತ್ತ ಬರಲು ; ಸುಸಂಗತೆಯು ರೋದನವಂ ಗೆಯ್ಯುತ್ತ ಪೋಗಿ ವಿದೂಷಕನನ್ನು ತಬ್ಬಿಕೊ೦ ಡು, - (ಎಲೈ ವಿದೂಷಕನೇ, ಒಂದು ಕ್ಷಣಮಾತ್ರವು ಎನ್ನ ದುಃಖವಂ ಕೇಳಿ ಆ ಬಳಿಕ ಮುಂದಕೆ ಪೋಗುವನಾಗು ' ಎಂದು ನುಡಿಯಲು; ವಿದೂಷಕನು- ಎಲೆ ಸುಸಂಗತೆಯೇ ಏತಕೆ ಅಳುತ್ತ ಇದ್ದೀಯ ? ದೇವಿಯು ಎನಗೂ ನಿನಗೂ ಸಹ ಬಂಧನವಂ ಗೆದ್ದು ಬಿಟ್ಟಳು. ಇದಕೆ ವ್ಯಸನವಂ ಗೆಯ್ದು ಪ್ರಯೋಜನವಿಲ್ಲ. ಅದರೆ ಸಾಗರಿಕೆಗೆ ಏನಾದರೂ ಬಲವಾದ ವಿಪತ್ತು ಪ್ರಾಪ್ತವಾಯಿತೆ? ಈಗ ಅವಳು ಎಲ್ಲಿರುವಳು ? ೨) ಎಂದು ಬೆಸಗೊಳಲು ; ಅವಳು-ಅಯ್ಯಾ ವಿದೂಷಕನೇ, ಕೇಳು, ದೀನಳಾದ ಆ ಸಾಗರಿಕೆಗೆ ಸಂಕಲೆಯಂ ತೊಡಿಸಿ ಉಜ್ಜಯಿನೀ ಪಟ್ಟ ಣಕೆ ಕಳುಹಿಸಿದೆವೆಂಬ ವಾರ್ತೆಯಂ ಪುಟ್ಟಸಿ, ಈಗ ಅಂತಃಪುರದಲ್ಲಿರುವ ಸೆರೆಮನೆ ಯಲ್ಲಿ ಇರಿಸಿರುವಳು. ಇನ್ನು ಮೇಲೆ ಏನು ಅವಸ್ಸಯಂ ಪೋಂದಿಸುವಳೊ ತಿಳಿಯೆ ನು ” ಎಂದು ನುಡಿಯಲು ; ವಿದೂಷಕನು ಬಹಳವಾದ ವ್ಯಸನವಂ ಪೊಂದಿ • ಎಲೆ ಸುಸಂಗತೆಯೇ, ದೇವಿಯು ದಯಾಶೂನ್ಯಳಾಗಿ ಅಧಿಕವಾದ ನಿಷ್ಟು ರಕಾರ ಗಳನ್ನು ಮಾಡಿರುವಳು. ಇ೦ಥ ಬಂಧನಕೆ ಆ ಸಾಗರಿಕೆಯು ಯೋಗ್ಯಳಲ್ಲವಾ ದರೂ ಲೋಕದಲ್ಲಿ ಸವತಿಯ ಮತ್ಸರವೆಂಬುದು ದೊಡ್ಡದು. ಎಂದು ನುಡಿಯಲು ; ಸುಸಂಗತೆಯು-- ಎಲೈ ಪೂಜ್ಯನೇ, ಕೇಳು, ತನ್ನ ಪ್ರಾಣಗಳಲ್ಲಿ ತೃಣಮಾತ್ರವೂ ಆಸೆಯಿಲ್ಲದೆ ಇರುವ ಸಾಗರಿಕೆಯು, ಎನಗೆ ಆಪ್ತನಾದ ವಸಂತಕನಿಗೆ ಕೊಡುವು ದೆಂದು ತನ್ನ ಕತ್ತಿನಲ್ಲಿ ಧರಿಸಿದ್ದ ರತ್ನ ಮಾಲೆಯನ್ನು ಕೊಟ್ಟಿರುವಳು. ಈ ಮಾಲಿ ಕೆಯಂ ತಗೆದುಕೊಂಡು ಅವಳಿಗೆ ಸಂಪೂರ್ಣವಾಗಿ ಆಶೀರ್ವಾದವಂ ಗೆಯ್ಯುವ ನಾಗು ” ಎಂದು ಆ ರತ್ನ ಮಾಲೆಯಂ ಕೊಡುವುದಕ್ಕೆ ಪೋಗಲು ; ಅವನು ಕಣ್ಣೀ ರುಗಳಂ ಬಿಡುತ್ತ- ಎಲೆ ಕಾಂತೆಯೇ, ಇಂಥ ಅವಸ್ಥೆಯು ಆ ಸಾಗರಿಕೆಗೆ ಪ್ರಾ 18