ಪುಟ:ವತ್ಸರಾಜನ ಕಥೆ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-- ಕರ್ಣಾಟಕ ಕಾವೈಕಲಾನಿಧಿ - ಬಯಸಿದ ಪಾಲಿನನ್ನ ನ್ನು ವೈದ್ಯನೂ ಹೇಳಿದಂತೆ, ಮೊದಲೇ ಆ ರತ್ನಾ ವಳಿಯನ್ನು ನಮ್ಮ ರಾಯನಿಗೆ ಮದುವೆಯಂ ಗೆಯ್ಯಬೇಕೆಂದಿರುವ ಎನಗೆ ಈ ಬ್ರಾಹ್ಮಣನ ಹಿತ ಕರವಾದ ವಾಕ್ಯದಿಂದ ಅಧಿಕ ಸಂತೋಷವುಂಟಾದುದೆಂದು ಆಲೋಚಿಸಿ, ಏಕಾಂತ ಸ್ಥಾನವಾದ ತನ್ನ ಶಯ್ಯಾಗೃಹಕ್ಕೆ ಆ ಬ್ರಾಹ್ಮಣನಂ ಕರೆದುಕೊಂಡು ಪೋಗಿ(• ಎಲೈ, ಬ್ರಾಹ್ಮಣೋ ತಮನಾದ ದೇವಶರ್ಮನೇ, ಕೇಳು. ಈ ನಮ್ಮ ರಾಜೇಂ ದ್ರನೇ ವಾಸವದತ್ತಾ ದೇವಿಗೆ ಪತಿಯಾದ ವತ್ವ ರಾಜನೆನಿಸುವನು. ಆದರೂ ಈಗ ನನ್ನ ಹೆಸರಿನಿಂದ ಒಂದು ಪತ್ರಿಕೆಯನ್ನೂ ಒಬ್ಬ ಚಾರನನ್ನೂ ನಿಮ್ಮ ರಾಯನ ಬಳಿಗೆ ನಿನ್ನೊಡನೆ ಕಳುಹಿಸಿಕೊಡುವೆನು, ಈ ನಮ್ಮ ರಾಜೇ೦ದ್ರನ ವೃತ್ತಾಂತವನ್ನು ತಿಳಿಯ ದವನಂತೆ ಇದ್ದು ಕೊಂಡು ನಾನು ಬರೆದಿರುವ ಪತ್ರಿಕೆಯನ್ನು ನಿಮ್ಮರಾಯನಿಗೆ ಮು ಟ್ಟಿಸಿ, ಈ ನಮ್ಮ ವತ್ಸ ರಾಜನಿಗೂ ಆ ರತ್ನಾ ವಳಿಗೂ ಸಂಬಂಧವುಂಟಾಗುವಂತೆ ಸಂವಿ ಧಾನವನ್ನು ಗೆಯ್ದೆಯಾದರೆ ನಮ್ಮ ರಾಜ್ಯದಲ್ಲಿ ಅನೇಕ ವಾದ ಭೂಮಿಯ೦ ರತ್ನ ರಾಶಿ ಯನ್ನು ಸಹ ನಿನಗೆ ಕೊಡಿಸುವುದರಲ್ಲಿ ಸಂದೇಹವಿಲ್ಲ' ಎಂದು ನುಡಿದು, ಬ್ರಾಹ್ಮ ಣನ ಮನ ದಣಿಯುವಂತೆ ರತ್ನಾಭರಣಪೀತಾಂಬರಗಳನ್ನೂ, ಗಣನೆಯಿಲ್ಲದ ದ್ರವ್ಯ ವನ್ನೂ ಸಹ ಕೊಟ್ಟು, ಸಂತೋಷವನ್ನುಂಟುಮಾಡಿ, ತನ್ನ ಹೆಸರಿನ ಪ್ರತಿ ಕೆಯಂ ಬರೆದು, ಮಾಧವನೆಂಬ ಚಾರನ ಕೆಯ್ಯಲ್ಲಿ ಕೊಟ್ಟು, ಆಬಾ ಹ್ಮಣನೊಡನೆ ಕಳುಹಿಸಿ ಕೊಡಲು-- ಆ ದೇವಶರ್ಮನು ಮಂತ್ರಿಯು ಮಾಡಿದ ಮನ್ನಣೆಗೆ ಮನದಲ್ಲಿ ಬಲವಾದ ಸಂತೋಷವಂ ತಾಳಿ, ಯಾವ ವಿಧದಿಂದಲಾದರೂ ಆ ರತಾ ವಳಿಯನ್ನು ರಾಜೋತ್ರ ಮನಾದ ಈ ವತ್ಸ ರಾಜನಿಗೆ ವಿವಾಹವಂ ಮಾಡಿಸಬೇಕೆಂದು ಮನದಲ್ಲಿ ಆಲೋಚಿಸು ತ್ರ, ಮಾಧವನೆಂಬ ಚಾರನಿಂದೊಡಗೊಂಡು, ಮಂತ್ರಿಯಿಂದ ಅಪ್ಪಣೆಯಂ ಪಡೆದು ಸಿಂಹಳದೇಶಕ್ಕೆ ಅಭಿಮುಖನಾಗಿ ಬಂದು, ಹಡಗನ್ನೇರಿ ಸಮುದ್ರವಂ ದಾಂತಿ, ತನ್ನ ದೇಶವಂ ಪೊಂದಿ, ಮಾಧವತಾರನಂ ಕುರಿತು - ಎಲೈ ಚಾರನೇ, ನೀನು ನಮ್ಮ ರಾಯನ ಅರಮನೆಯ ಬಾಗಿಲಲ್ಲಿ ಕಾದಿರುವನಾಗು. ನಾನು ನಮ್ಮ ರಾಯನ ಸಂದರ್ಶನವಂ ಗೈದ ಬಳಿಕ ನಿನ್ನ ನ್ಯೂ ರಾಜಸನ್ನಿ ಧಿಗೆ ಕರೆಯಿಸುತ್ತಲಿದ್ದೇನೆ.' ಎಂದು ನುಡಿದು, ದೇಶಾಂತರದಿಂದ ತಂದ ಅಮೂಲ್ಯ ವಸ್ತುಗಳನ್ನೂ, ದೇವತಾರ ಸ ಸಾದ ಮುಂತಾದ ದ ವ್ಯಗಳನ್ನೂ, ಅನೇಕವಾದ ಫಲಗಳಿಂದ ಪೂರಿತ ವಾದ ತಟ್ಟೆ ಗಳನ್ನೂ ಸಹ ತೆಗೆಯಿಸಿಕೊಂಡು, ವಿಕ್ರಮಬಾಹುರಾಯನ ಸಭೆಯಂ ಪ್ರವೇಶಿಸಲು ; ಆ ರಾಯನು ತನ್ನ ಆಜ್ಞೆಯಂ ಪಡೆದು ತೀಲ್ಡಯಾತ್ರೆಗೆ ಪೋಗಿ ಬಂದಪುರೋ ಹಿತನಂ ಕ೦ಡು, ಸಂತೋಷವಂ ತಾಳಿ, ಅವನು ತಂದ ತೀರ ಪ್ರನಾದದ್ರವ್ಯಗಳನ್ನು ಭಕ್ತಿಯಿಂದೆದ್ದು ಎರಡು ಕೈಗಳಿಂದಲೂ ತೆಗೆದುಕೊಂಡು, ತನ್ನ ಮಸ್ತಕದಲ್ಲಿ ಇರಿಸಿ, ಧ