ಪುಟ:ವತ್ಸರಾಜನ ಕಥೆ.djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವತ್ಸರಾಜನ ಕಥೆ, - ೧೪೩ ಎನಲಾದ್ವಾರಪಾಲಕಿಯು ಹೇಗೆ ಆಜ್ಞೆಯಾಗುತ್ತಲಿರುವುದೋ ಆ ರೀತಿಯಿಂದ ನಡೆದುಕೊಳ್ಳುವೆನು ” ಎಂದು ಪೋಗಲು; - ಇತ್ತಲು ವಾಸವದತ್ತಾ ದೇವಿಯು ಇರುವ ಅಂತಃಪುರಕ್ಕೆ ಮಂತ್ರಿಯಾದ ಯೌಗಂಧರಾಯಣನು ಬಂದು, ನಮಸ್ಕಾರವಂ ಗೆಯ್ಯು, ಎಲ್‌ ಪೂಜ್ಯಳಾದ ದೇವಿಯೇ, ನಿಮ್ಮ ತೌರುಮನೆಯಾದ ಉಜ್ಜಯಿನೀ ಪಟ್ಟಣದಿಂದ ಬಬ್ಬಾನೊಬ್ಬ ಇಂದ್ರಜಾಲವಿದ್ಯೆಯಲ್ಲಿ ಬುದ್ಧಿವಂತನಾದ ಪುರುಷನು ಬಂದು ತಾನು ಕಲಿತಿರುವ ವಿದ್ಯಾಕೌಶಲವಂ ತೋರಿಸಿ ಬಹುಮಾನವನ್ನು ಪಡೆಯಬೇಕೆಂದು ಇಚ್ಛೆಸುತ್ತಿರು ವನು ?” ಎಂದು ವಿಜ್ಞಾಪಿಸಲಾದೇವಿಯು ಸಂತುಷ್ಟ ಫಾಗಿ ಮಂತ್ರಿಗೆ ಹೂವಿನ ಹಾರ ವನ್ನೂ ಸುತ್ತುವೀಳ್ಯವನ್ನೂ ಕಲಬಗೆಗಳಾದ ಫಲಗಳನ್ನೂ ಸಹ ತರಿಸಿಕೊಟ್ಟು ಸತ್ಯ ರಿಸಿ ಕಳುಹಿಸಿ, ಕಾಂಚನಮಾಲೆಯಂ ಕುರಿತು ಎಲೆ ಬಾಲೆಯೇ, ಈಗ ನಮ್ಮ ಉಜ್ಜಯಿನೀ ಪಟ್ಟಣದಿಂದ ಬಂದಿರುವ ಐಂದ್ರಬಾಲಿಕ ವಿದ್ಯಾಪರೀಕ್ಷೆಯನ್ನು ನಾನು ಕುಳಿತು ನೋಡುವುದು ಯುಕ್ತವಲ್ಲ. ಯಾವ ಪರಿ೦ದಲಾದರೂ ನಮ್ಮ ರಾಜೇಂ ದ್ರನಂ ಇಲ್ಲಿಗೆ ಕರೆದುಕೊಂಡು ಬರುವಳಾದರೆ ಸ್ಕ ಮನಕ್ಕೆ ಬಹಳ ಸಂತೋಷವು ಪುಟ್ಟುತ್ತಲಿರುವುದು ಎಂದು ನುಡಿಯಲಾಕಾಂಚನಮಾಲೆಯು-- ನಾವು ಮಾಡಿದ ನಿಷ್ಠುರವಾದ ಕಾಗ್ಯವನ್ನು ಸ್ಮರಿಸಿದಲ್ಲಿ ನಮ್ಮ ಮುಖವನ್ನು ನಮ್ಮ ರಾಬೇ೦ದ್ರನು ಕಣ್ಣೆತ್ತಿ ನೋಡಿ ಮಾತನಾಡಲಾರನು. ಆದರ ನಿನ್ನ ೧೭೯ಗೆಯಾಗಂತೆ ನಡೆದು ಕೊಳ್ಳು ವೆನು ?” ಎಂದು ಅಲ್ಲಿಂದ ಪೊರಮಟ್ಟ, ಸರಿಗೆಯ ಸೀರೆಯ ಪರಿಯನ್ನು ಒ೦ದು ಸರಿಯಾಗಿ ಎಡಗೆಯಿಂದ ಮುರಿದು ಸಿಡಿದೆತ್ತಿ, ಕಾಲುಂಗರ ಕಾಲುಸರ ಗಗ್ಗರ ಗಳ ಸದ್ದುಗಳು ನಿದ್ದೆಗೆಯುತ್ತಿರುವ ಮನ್ಮಧನನ್ನು ಎಬ್ಬಿಸುತ್ತಿರುವವೋ ಎಂಬಂತೆ ದಿಕ್ಕುಗಳನ್ನು ತುಂಬುತ್ತಿರಲು, ಊಳಿಗದ ಹೆಣ್ಣುಗಳೆಲ್ಲವನ್ನೂ ಅಲ್ಲೇ ನಿಲ್ಲಿಸಿ ಹಲ್ಲೆ ಯ ಮರಿಯಂತೆ ಚಂಚಲವಾದ ದೃಷ್ಟಿಯನ್ನು ತಾಳಿ ಬರುತ್ತಿರಲು ; ದ್ವಾರಪಾಲಕಿಯು ಶೀಘ' ದಿಂ ಬಂದು, ಎಲೈ ರಾಜೇಂದ್ರನೇ, ನೀನಿರುವ ಸ್ಥಾನವಂ ಕುರಿತು ಕಾಂಚನಮಾಲೆಯು ಬರುತ್ತಿರುವಳು ಎಂದು ಬಿನ್ಲೈಸಲು ; ಅಲ್ಲಿದ್ದ ವಿಜಯವರ್ಮನು ಎದ್ದು ರಾಯನಿಗೆ ವಂದನೆಯಂ ಗೆಯು ಪೋಗಲು; ವಿದೂಷಕನು- ಎಲೈ ರಾಜೇಂದ್ರನೇ, ಈಗ ಕಾಂಚನಮಾಲೆಯು ಇನ್ನೇನು ದುಷ ಕಾರವಂ ಗೆಯುವುದಕೆ ಬರುವಳೋ ಎ೦ದು ಎನ್ನ ಮನವು ಡಂಡಲವಾಗು ತಿರುವುದು ?” ಎಂದು ನುಡಿಯುತ್ತಿರಲು ; ಅಷ್ಟರಲ್ಲೇ ಕಾಂಚನಮಾಲೆಯು ನಿ೦೦ಕಿನ ಬಳ್ಳಿಯಂತೆ ಕಾಂತನವದಿಂದ ಭೂಷಿತಳಾಗಿ ರಾಯನ ಸಮಿಾಪಕ್ಕೆ ಭಯದಿಂದೊಡಗೂಡಿ ಬಂದು ನಮಸ್ಕಾರವಂ ಗೆಯ್ದು ನಿಂದಿರಲು ; ರಾಯನು ಅವಳ ಮುಖವನ್ನು ನೋಡದೆ, ಒತ್ತಿನಲ್ಲಿದ್ದ ವಿದ