ಪುಟ:ವತ್ಸರಾಜನ ಕಥೆ.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಳು - ಕರ್ನಾಟಕ ಕಾವ್ಯಕಲಾನಿಧಿ, - ಷಕನಿಗೆ ಕಣ್ಣು ಸನ್ನೆ ಯಂ ಗೆಯ್ಯಲು ; ಅವನು- 1 ಎಲೆ ಕಾಂಚನಮಾಲೆಯೇ, ನಮ್ಮ ರಾಜೇಂದ್ರನ ಸವಿಾಪಕ್ಕೆ ಈಗ ನೀನು ಬಂದುದು ಅತ್ಯಂತಾಶ್ಚರ್ಯವಾಗಿ ರುವುದು. ಬಂದ ವೃತ್ತಾಂತವನ್ನು ಮರೆಗೆಯ್ಯದೆ ಪೇಳುವಳಾಗು ” ಎಂದು ನುಡಿ ಯಲು ; ಅವಳು ರಾಯನಂ ಕುರಿತು,- ಎಲೈ ಮಹಾರಾಜನೇ, ಈಗ ಉಜ್ಜಯಿ ನೀಪಟ್ಟಣದಿಂದ ಒಬ್ಬ ಇಂದ್ರಜಾಲವಿದ್ಯೆಯಲ್ಲಿ ಬುದ್ಧಿವಂತನಾದ ಪುರುಷನು ಬಂದಿ ರುವನು. ಅವನ ವಿದ್ಯಾಪರೀಕ್ಷೆಯಂ ತೆಗೆದುಕೊಂಡು ಅವನಿಗೆ ಬಹುಮಾನವನ್ನು ೦ ಟುಮಾಡಿಕೊಡಬೇಕೆಂದು ವಾಸವದತ್ತಾ ದೇವಿಯವರು ಬಿನ್ನಿಸುವಂತೆ ಅಪ್ಪಣೆಯ ನಿತ್ತು ಕಳುಹಿಸಿದರು ?” ಎಂದು ಬೆನ್ನೆಸಲು ; ರಾಯನು ಎಲೆ ಕಾಂಚನಮಾ ಲೆಯೇ, ಆ ಇಂದ್ರಜಾಲವಿದ್ಯವುಳ್ಳವನನ್ನು ಇಲ್ಲಿಗೆ ಕರೆದುಕೊಂಡು ಬರುವಳಾದರೆ ಅವನ ವೃತ್ತಾಂತವಂ ತಿಳಿದು ವಿದ್ಯಾಪರೀಕ್ಷೆಯಂ ಗೆಯ್ಯಬಹುದು ?” ಎಂದು ನುಡಿ ಯಲು; ಕಾಂಚನಮಾಲೆಯು- ಆಜ್ಞೆಯಾದಂತೆ ನಡೆದುಕೊಳ್ಳುವೆನು ?” ಎಂದು ಅಲ್ಲಿ ನಿಲ್ಲದೆ ಪೋಗಿ, ಆ ವಾರ್ತೆಯನ್ನು ವಾಸವದತ್ತಾ ದೇವಿಗೆ ಶ್ರುತಪಡಿಸಿ, ಅವಳ ಆಜ್ಞೆಯಿಂದ ಮಂತ್ರಿಯ ಸವಿಾಪದಲ್ಲಿದ್ದ ಆ ಇಂದ್ರಜಾಲದವನಂ ಕರೆದುಕೊಂಡು ರಾಯನ ಸವಿಾಪವಂ ಪೊಂದಿ ರಾಯನಂ ಕುರಿತು- ಎಲೈ ರಾಜೇಂದ್ರನೇ, ಇವನೇ ?” ಎಂದು ನವಿಲುಗರಿಯುಳ್ಳ ಕರದಿಂ ವಿರಾಜಿತನಾಗಿರುವ ಇಂದ್ರಜಾಲಿಕ ನನ್ನು ತೋರಿಸಲು ; ಅವನು ರಾಯನಿಗೆ ನಮಸ್ಕಾರವಂ ಗೆಯ್ದು - ಈ ಎನ್ನ ವಿದ್ಯಕೆ ಇಂದ್ರನೇ ಅಧಿದೈ ವನಾದುದರಿಂದ ಇಂದ್ರನ ಚರಣಗಳಿಗೆ ವಂದನೆಯಂಗೆಯ್ಯು, ಮಾಯಾ ವಿದ್ಯಾ ವಿಚಾರಗಳಿಗೆಲ್ಲಾ ಗುರುವಾದ ಶಂಬರಾಸುರನಿಗೆ ವಂದನೆಯಂಗೆಯ್ಯುವೆನು ? ಎಂದು ನುಡಿದು, ಬಳಿಕ, ಎಲೈ ಮಹಾರಾಜೇಂದ್ರನೇ ಜಯವುಳ್ಳವನಾಗು. ಈಗ ನಾನು ಭೂಮಿಯಲ್ಲಿ ಚಂದ್ರನನ್ನು, ಆಕಾಶದಲ್ಲಿ ಸರ್ವತಂಗಳನ್ನು ಜಲದಲ್ಲಿ ದಳ್ಳುರಿಯನ್ನೂ ಅರ್ಧ ರಾತ್ರಿಯಲ್ಲಿ ಹಗಲನ್ನೂ ಸಹ ತೋರಿಸುವೆನು. ಎಲೆ ರಾಜೇಂದ್ರನೇ, ಎನ್ನ ವಿದ್ಯಾಚಾತುಯ್ಯ ನಿಮಿತ್ತ ಮಂತ್ರ ಪ್ರಭಾವದಿಂದ ಯಾವ್ಯ ಯಾವುದು ಅಸಾಧ್ಯವಾಗಿ ತೋರುತ್ತಲಿರುವುದೋ ಅವುಗಳನ್ನು ಸುಲಭವಾಗಿ ಸಾಧ್ಯವಾಗಿ ತೋರಿಸುವೆನು ?” ಎಂದು ಪ್ರತಿಜ್ಞೆಯನ್ನು ವಿರಚಿಸುತ್ತಿರಲು ; ವಿದೂಷಕನು,- ಎಲೈ ರಾಜೇ೦ದ್ರನೇ, ನಿನ್ನ ಸವಿಾಪದಲ್ಲಿ ಇವನು ಬಹುವಾಗಿ ಕೊಬ್ಬಿನಿಂದ ನುಡಿಯುತ್ತಿರುವನಾದುದರಿಂದ ಇವನಲ್ಲಿ ಪೇಳುವ ಗುಣ ಗಳೆಲ್ಲವೂ ನಿಜವಾಗಿರುವುದಾಗಿ ತೋರುತ್ತಿರುವುದು ' ಎಂದು ನುಡಿಯಲು ; ರಾಯನು ಕಾಂಚನಮಾಲೆಯಂ ಕುರಿತು ಎಲೆ ಕಾಂತೆಯೇ, ಈ ಐಂದ್ರ ಜಾಲಿಕನು ನಿನ್ನ ತೌರುಮನೆಯಾದ ಉಜ್ಜಯಿನೀ ಪಟ್ಟಣದವನಾಗಿರುವುದರಿಂದಲೂ, ಇಲ್ಲಿಗೆ ನೀನು ಬಂದಲ್ಲಿ ಈ ಸ್ಥಳವು ವಿಶೇಷವಾದ ಜನಗಳಿಂದ ಶೂನ್ಯವಾಗಿರುವುದರಿಂ