ಪುಟ:ವತ್ಸರಾಜನ ಕಥೆ.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ -- ಕರ್ಣಾಟಕ ಕಾವ್ಯಕಲಾನಿಧಿ, - ಣದಿಂದ ಬಂದಿರುವನಾದುದರಿಂದ ಅವನಲ್ಲಿ ಎನಗೆ ಬಲವತ್ತರವಾದ ಅಭಿಮಾನವು ಉಂಟಾಗಿರುವುದು ?” ಎಂದು ನುಡಿಯಲು ; ಅವಳು- ಎಲೈ ದೇವಿಯೇ, ಸಮಸ್ಯ ಸ್ತ್ರೀಯರಿಗೂ ತೌರುಮನೆಯಲ್ಲಿ, ಅಭಿಮಾನವಿರುವುದು ಯುಕ್ತವಾಗಿರುವುದು ? ಎಂದು ನುಡಿಯಲು ; ದೇವಿಯು ರಾಯನಿರುವ ಸ್ಥಾನವಂ ಕುರಿತು ಬಂದು, “ ಎಿ ರಾಜೇಂದ್ರನೇ, ಜಯವುಳ್ಳವನಾಗು ?” ಎಂದು ನುಡಿದು ನಮಸ್ಕಾರವಂ ಗೆಯ್ದು ನಿಂದಿರಲು; ರಾಯನು ಸಾಗರಿಕೆಗೆ ಮಾಡಿದ ಹಿಂಸೆಯನ್ನು ಸ್ಮರಿಸಿ, ಒಂದು ಕ್ಷಣಮಾತ್ರ ವಾಸವದತ್ತೆಯ ವದನವಂ ನೋಡದೆ, ಏನೋ ಒಂದು ವಸ್ತುವಂ ನೋಡುವನಂತೆ ಮುಖವನ್ನು ತಿರುಗಿಸಿರಲು ; ವಿದೂಷಕನು ರಾಯನ ಅಭಿಪ್ರಾಯವು ತಿಳಿದು, (* ಎಲೈ ರಾಜೇಂದ್ರನೇ, ನೀನಾಗಿ ವಾಸವದತ್ತೆಯಂ ಕರೆಸಿ ಅವಳ ಯೋಗಕ್ಷೇ ಮವಂ ಕೇಳರೆ, ಅಸಮಾನವಂ ಗೆಯ್ಯುವುದು ನ್ಯಾಯವಲ್ಲ. ಮನಸ್ಸಿನಲ್ಲಿ ಎಷ್ಟು ವಿರೋಧವಿದ್ದಾಗ್ಯೂ, ಮನಕೆ ಕೊರತೆಯಂ ವಿರಚಿಸಬಾರದು !” ಎಂದು ನುಡಿ ಯಲು ; ರಾಯನು ಅವನ ವಚನಕ್ಕೆ ಒಡಂಬಟ್ಟು, ಮುಖವಂ ತಿರುಹಿ 1 ಎಲೆ ವಾಸವದತ್ತೆಯೇ, ನಿನಗೆ ಕ್ಷೇಮವೆ ? ” ಎಂದು ನುಡಿದು, ( ಈ ಐಂದ್ರಜಾಲಕನು ಬಹುವಾಗ ವಿದ್ಯೆಗಳು ತನ್ನಲ್ಲಿ ಇರುವುವೆಂದು ಗರ್ವಿಸಿ ನುಡಿಯುತ್ತಿರುವನು. ಇವ ನನ್ನು ಪರೀಕ್ಷಿಸಬೇಕಾಗಿರುವುದು. ಆದುದರಿಂದ ಇಲ್ಲಿ ಬಂದು ಕುಳ್ಳಿರುವುದು ೨) ಎಂದು ತನ್ನ ಒತ್ತಿನಲ್ಲಿ ಕುಳ್ಳಿರಿಸಿಕೊಳ್ಳಲು ; ದೇವಿಯು ರಾಯನ ಇಂಗಿತವಂ ತಿಳಿದು, ಕಾಂಚನಮಾಲೆಯಂ ಕುರಿತು(ಎಲೆ ಬಾಲೆಯೇ, ರಾಯನ ನಡೆವಳಿಕೆ ಬೇರೊಂದು ಸರಿಯಾಗಿ ತೋರುತ್ತಲಿರು ವುದು. ಆದರೂ ಮುಂದೆ ಕಾರದಲ್ಲಿ ತಿಳಿಯಬೇಕು ?” ಎಂದು ರಹಸ್ಯವಾಗಿ ನುಡಿಯುತ್ತಿರಲು ; ರಾಯನು- ಎಲೈ ಐಂದ್ರಜಾಲಿಕನೇ, ನಿನ್ನ ವಿದ್ಯಾ ಕೌಶಲಮಂ ತೋರಿಸು ವನಾಗು ” ಎಂದು ಅಪ್ಪಣೆಯನ್ಶಿಯಲು ; ಅವನು ನವಿಲುಗರಿಯ ಕಂತೆಯನ್ನು ವೈಯಾರದಿಂ ತಿರುಹುತ್ತ, ( ಇದೊ ! ಇದೋ ! ಆಕಾಶದಲ್ಲಿ ಹರಿಹರ ಬ್ರಹ್ಮಾದಿಗಳೂ, ದೇವಾಧಿಪತಿಯಾದ ಇಂದ್ರನೂ, ಇನ್ನೂ ಸಿದ್ಧವಿದ್ಯಾಧರಗರುಡಗಂಧತ್ವರುಗಳೂ, ಅಪ್ಪ ರಸ್ತ್ರೀಯರುಗಳಿಂದೊಡಗೂಡಿ ನಾಟ್ಯಮಂ ಗೆಯ್ಯುತ್ತಿರುವರು ” ಎಂದು ನುಡಿಯಲು ; ವಿದೂಷಕನು ಆಕಾಶಮಂ ನೋಡಿ, ಕುಳಿತಿದ್ದ ಸ್ಥಾನದಿಂದೆದ್ದು ನಿಂತು, ಕೈ ಗಳಂ ಮುಗಿದುಕೊಂಡು, ಎಲೈ ರಾಜೇಂದ್ರನೇ, ಇದೊ ! ಬ್ರಹ್ಮನು ಪದ್ಮಾಸನ ದಲ್ಲಿ ಮಂಡಸಿ ತೋರುತ್ತಿರುವನು ಚಂದ್ರನ ಕಲೆಯಿಂದ ಸುಂದರನಾದ ಶಿವನು ಕೆ ಜಾಸದಂತೆ ಒಪ್ಪುತ್ತಲಿರುವ ವೃಷಭಾರೂಢನಾಗಿ ಪಾಶ್ವತೀಸಮೇತನಾಗಿ ಪ್ರಮ )