ಪುಟ:ವತ್ಸರಾಜನ ಕಥೆ.djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪y - ಕರ್ಣಾಟಕ ಕಾವ್ಯಕಲಾನಿಧಿ, - ಯವರು ನೋಡುತಕ್ಕುದಾಗಿ ಇದ್ದುದು ?” ಎಂದು ಬಿನ್ಲೈಸಲು ; ರಾಯನು ( ಹಿಂದಿ ನಿಂದ ನೋಡುವೆವು, ಪೋಗು ೨” ಎಂದು ಕಳುಹಿಸಿ, ದ್ವಾರಪಾಲಕನಂ ಕರೆದು, ( ಎಲೈ ಕಂಚುಕಿಯೇ, ಆ ವಸುಭೂತಿಯನ್ನು ಕರೆದುಕೊಂಡು ಬರುವನಾಗು. ಎಂದೂ, ಈ ಎಲೆ ಕಾಂಚನಮಾಲೆಯೇ ಈ ಐಂದ್ರಜಾಲಿಕನಿಗೆ ಭೂಷಣಾಂಬರಗಳ ಕೊಡಿಸುವಳಾಗು ” ಎಂದೂ ಅಪ್ಪಣೆಯನ್ಶಿಯಲು ; ಅವಳು ಆಟಗಾರನಿಗೆ ( ಸ್ವಾಮಿಯವರ ಆಜ್ಞೆಯಾದಂತೆ ನಡೆದುಕೊಳ್ಳುವನಾಗು ' ಎಂದು ಹೇಳಿ ಅವ ನೊಡಗೂಡಿ ಪೋಗಲು ; ರಾಯನು- ಎಲೈ ವಸಂತಕನೇ, ಆ ಸಿಂಹಳದೇಶದ ಮಂತ್ರಿಯನ್ನು ಇದಿ ರುಗೊಂಡು ಕರೆದುಕೊಂಡು ಬರುವನಾಗು ?” ಎಂದು ನುಡಿಯಲು ; ವಿದೂಷಕನು, ( ಹೇಗೆ ಅಪ್ಪಣೆಯಾಗುವುದೋ ಆ ರೀತಿಯಿಂದ ನಡೆದು ಕೊಳ್ಳುವೆನು ” ಎಂದು ನುಡಿದು, ದ್ವಾರಪಾಲಕಿಯಾದ ವಸುಂಧರೆಯೆಂಬ ಕಾಂತೆ ಯಿಂದೊಡಗೊಂಡು ಪೋಗಿ ಆ ವಸುಭೂತಿಗೆ ವಂದನೆಯಂ ಗೆಯ್ದು, ಕುಶಲಪ್ರಶ್ನೆ ಯಂ ವಿರಚಿಸಿ, ಕರೆದುಕೊಂಡು ಬರುತ್ತಿರಲು ; ಆ ವಸುಭೂತಿಯು ಸುತ್ತಲೂ ನೋಡಿ, ಆಶ್ರವಂ ಪೊಂದಿ ಒತ್ತಿನಲ್ಲಿರುವ ಬಾಭವ್ಯನಂ ಕುರಿತು,- ಎಲೈ ಬಾಘ್ರವ್ಯನೇ, ಈ ನಮ್ಮ ವತ್ಸ ರಾಜನ ಪ್ರಭಾವವು ಅಧಿಕವಾಗಿರುವುದು, ಈ ದ್ವಾರಪ್ರದೇಶವೇ ಇಂತಿರುವ ಸಂಪತ್ತಿನಿಂದ ಆಶ್ಚರ ವಾಗಿರುವುದು. ಆದರೆ ಇಲ್ಲಿರುವ ಆನೆಗಳೆಲ್ಲಾ ಐರಾವತಗಳಾಗಿಯೂ, ಇಲ್ಲಿರುವ ಕುದುರೆಗಳೆಲ್ಲಾ ಉಚ್ಛೇಶ ವಸ್ಸು ಗಳಾಗಿಯೂ, ಹಾಡುವ ಗಾಯಕರೆಲ್ಲಾ ಗಂಧ ರ್ವರಾಗಿಯೂ, ಇಲ್ಲಿರುವ ಸ್ತ್ರೀಯರುಗಳೆಲ್ಲಾ ಅಪ್ಪ ರಸ್ತೀಯರಾಗಿಯೂ, ಈ ಕೌಶಾಂಬೀನಗರಿಯೇ ಸ್ವರ್ಗವಾಗಿಯೂ ತೋರುತ್ತಿರುವುದು, ಮತ್ತು ಇದೊ ! ಇತ್ತಲು ಸುಗಂಧದಿಂ ದಿಕ್ಕುಗಳನ್ನೆಲ್ಲಾ ಮುಚ್ಚುತ್ತಲಿರುವ ಕಲ್ಪವೃಕ್ಷಗಳು ತಲೆದೋ। ರುತ್ತಿರುವುವು, ರತ್ನ ರಾಶಿಗಳು ನಿಜಕಾಂತಿಯಿಂದ ಗಗನದಲ್ಲಿರುವ ಇಂದ್ರಚಾಪದ ಶಂಕೆಯನ್ನುಂಟುಮಾಡುತ್ತಲಿರುವುವ, ಇಲ್ಲಿರುವ ಗೋವುಗಳು ಕಾಮಧೇನುಗ ಇಂತೆ ಜನರುಗಳಿಗೆ ಕಾಮಿತಾರ್ಥವಂ ಕರೆಯುತ್ತಲಿರುವುವು ಮತ್ತು ವತ್ಸ ರಾಜನಂ ನೋಡಲು ಇಚ್ಛೆಸಿ ಬಂದಿರುವ ಎನಗೆ ಏನೋ ಒಂದು ಅವಸ್ಥೆಯು ಸಂತೋಷದಿಂ ದುಂಟಾದುದು.” ಹೇಗೆಂದರೆ-ಇಲ್ಲಿ ವತ್ಸ ರಾಜನ ಆಜ್ಞಾ ಬಲದಿಂದ ಪುಟ್ಟದ ಭಯವು ಹೆಚ್ಚಾದ ನಡುಕವನ್ನು ಹುಟ್ಟಿಸುತ್ತಿರುವುದು ಸಂತೋಷದಿಂದುಂಟಾದ ಆನಂದಬಾಷ್ಪಗಳು ದೃಷ್ಟಿಗಳನ್ನು ಮುಚ್ಚುತ್ತಲಿರುವುವು, ಗದ್ದ ದವು ಅಕ್ಷರಗಳಿಂದ ಶೂನ್ಯಮಾದ ವಚನಗಳನ್ನು ಪುಟ್ಟಿಸುತ್ತಿರುವುದು, ಈ ಅವಸ್ಥೆಗಳೆಲ್ಲವೂ ಎನಗೆ ಪಟ್ಟಿರುವಮಟ್ಟಿಗೆ ಸಹಾಯವನ್ನು ೦ಟುಮಾಡುತ್ತಲಿರುವುವು ?” ಎಂದು ನುಡಿಯು ತಿರಲು ;