ಪುಟ:ವತ್ಸರಾಜನ ಕಥೆ.djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ನಕ್ಷರಾಜನ ಕಥ, - ೧ಳಿ ವಿದೂಷಕನು--( ಅಯ್ಯಾ ಪೂಜ್ಯನಾದ ಮಂತ್ರಿಷ್ಠನಾದ ವಸುಭೂ ತಿಯೇ, ಈ ರತ್ನ ಮಯವಾದ ಈ ಚಂದ್ರಶಾಲೆಯ ಸೋಪಾನವನ್ನು ಅವಧಾನ ದಿಂದ ಹತ್ತು ವನಾಗ ?” ಎಂದು ನುಡಿಯುತ್ತಿರಲು ; ಆ ವಸುಭೂತಿಯು ವಸಂತಕನ ಕತ್ತಿನಲ್ಲಿರುವ ರತ್ನ ಮಾಲೆಯಂ ನೋಡಿ, ಹಿಂದಿರುಗಿ ನೋಡಿ,- ಎಲೈ ಬಾಭವ್ಯನೇ, ನಮ್ಮ ರತ್ನಾ ವಳಿಯ ಕಂಠಕೆ ಅಲಂ ಕಾರವಂ ಗೆಯ್ದು ಕಳುಹಿಸಿದ ರತ್ನ ಮಾಲೆಯಂತೆ ಇವನ ಕತ್ತಿನಲ್ಲಿರುವ ರತ್ನ ಹಾರವು ತೋರುತ್ತಲಿರುವುದು ” ಎಂದು ನುಡಿಯುತ್ತಿರಲು ; ಅವನು- ಎಲೈ ಮಂತ್ರಿ ಶ್ರೇಷ್ಟನೇ, ನೀನು ಅಪ್ಪಣೆಯನ್ನಿತ್ತ ವಾಕ್ಯವು ಯುಕ್ತವೇ ಸರಿ. ಆದರೆ ಈ ರತ್ನ ಮಾಲೆಯು ಇವನಿಗೆ ಹೇಗೆ ಸೇರಿತೋ ತಿಳಿಯ ಬೇಕು ” ಎಂದು ನುಡಿಯಲು ; ಆ ಮಂತ್ರಿಯು- ಎಲೈ ಬಾಭ್ರವ್ಯನೇ, ನಾವು ವಿಚಾರಿಸುವುದು ಯುಕ್ತವಾಗಿ ತೋರಲಾರದು. ಏಕೆಂದರೆ ಮಹಾರಾಜನಾದ ಈ ವತ್ಸ ರಾಜನ ಮಂದಿರದಲ್ಲಿ ಇಂಧ ರತ್ನ ಮಾಲೆಯು ಮೊದಲಾದ ಅಮೋಘವಾದ ಭೂಷಣಗಳು ಇರುವುವು. ಈ ಪುರುಷನು ರಾಜಪ್ರಸಾದಕೆ ಯೋಗ್ಯನಾಗಿರುವು ದರಿಂದ ಸಂತುಷ್ಟನಾಗಿ ವತ್ಸ ರಾಜನು ಇವನಿಗೆ ಈ ಮಾಲಿಕೆಯನ್ನು ಅತ್ತಿರಬ ಹುದು ೨” ಎಂದು ತಮ್ಮೊಳು ತಾವು ನುಡಿಯುತ್ತಿರಲು ; ವಿದೂಷಕನು- ಎಲೈ ಮಂತ್ರಿಶಷ್ಟನೇ, ಇದೋ ! ಇತ್ತಲು ರಾಜೋ ತಮನಾದ ವತ್ಸ ರಾಜನು ರತ್ನ ಪೀಠದಲ್ಲಿ ರಾಜಿಸುತ್ತಿರುವನು.. ನೀನು ಭಯಭಕ್ತಿ ಯುಕ್ತನಾಗಿ ಪೊಂದುವನಾಗು ” ಎಂದು ನುಡಿಯಲು ; ಆ ವಸುಭೂತಿಯು ರಾಯನ ಸಮಿಾಪವಂ ಸೇರಿ~ (( ಎಲೈ ರಾಜೇಂದ್ರನೇ, ನೀನು ಸಮಸ್ತ ಸೌಖ್ಯಗಳಿಂದೊಡಗೂಡಿ ಸರ್ವೋತ್ತಮವಾದ ಜಯವನ್ನು ಹೊಂದು ವನಾಗು ! !” ಎಂದು ನುಡಿಯಲು ! ವೃದ್ದನಾದ ವಸುಭೂತಿಯನ್ನು ಕಂಡು ವತ್ಸ ರಾಜನು ತಾನು ಕುಳಿತಿದ್ದ ಪೀಠ ದಿಂದೆದ್ದು,*: ಎಲೈ ಪೂಜ್ಯನಾದ ವಸುಭೂತಿಯೇ, ನಿನಗೆ ನಮಸ್ಕಾರವಂ ಗೆಯ್ಯು ವೆನು ” ಎಂದು ನುಡಿದು, ವಂದನೆಯಂ ಗೆಯ್ಯುವುದಕೆ ಪೋಗುವುದರಲ್ಲೇ ವಸುಭೂ ತಿಯು ವತ್ಸ ರಾಜನಂ ಕಂಡೆದ್ದು ಆಲಿಂಗನವಂ ಗೆಯ್ದು , ರಮ್ಯ ಪೀಠದಲ್ಲಿ ಕುಳಿತು, (• ಎಲೈ ರಾಜೇಂದ್ರನೇ, ಬಹುದಿವಸದಿಂದಲೂ ರಾಜಸೇವೆಯಲ್ಲಿ ತತ್ಪರನಾದ ಬಾಭ) ವ್ಯನೂ ನಮಸ್ಕಾರವಂ ಗೆಯ್ಯುವನು ” ಎಂದು ಕಳಿತು ನುಡಿಯಲು : ವಕ್ಷ ರಾಜನು * ಎಲೈ ಬಾಭ್ರವ್ಯನೇ, ಕ್ಷೇಮವೇ ? ಕುಳಿತುಕೊಳ್ಳುವನಾಗು ” ಎಂದು ಅಪ್ಪಣೆಯ ಸ್ತ್ರೀಯಲು ; ಅವನು ವಂದನೆಯಂ ಗೆಯ್ದು, ಭಯಭಕ್ತಿಯಿಂದ ದೂರದಲ್ಲಿ ಕುಳಿತು ಕೊಳ್ಳಲು ; `ವಿದೂಷಕನು-- ( ಅಯ್ಯಾ ಪೂಜ್ಯನಾದ ಮಂತ್ರಿಯೇ ವಾಸವದತ್ತಾ ದೇ