ಪುಟ:ವತ್ಸರಾಜನ ಕಥೆ.djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܩX - ಕರ್ಣಾಟಕ ಕಾವ್ಯಕಲಾನಿಧಿ, - ದೇವಿಯು- ಎಲೈ ಸ್ವಾಮಿಯೇ, ದುಃಖದಿಂದಲೂ ದಿಗಿಲಿನಿಂದಲೂ ನಿನ್ನ ಒತ್ತಿನಲ್ಲಿರುವ ಎನ್ನನ್ನು ಮರೆತು, ಈ ರೀತಿಯಾದ ವ್ಯಸನವಂ ಪೊಂದು ವುದು ನ್ಯಾಯವಲ್ಲ. ನನ್ನ ವಿಚಾರದಲ್ಲಿ ನೀನು ವ್ಯಸನವಂ ಪೊಂದಲಾಗದು, ದಯಾ ಶೂನ್ಯಳಾದ ನಾನು ಸಂಕಲೆಯಂ ತೊಡಿಸಿ ಸೆರೆಮನೆಯಲ್ಲಿ ಸೇರಿಸಿರುವ ಸಾಗರಿ ಕೆಯಂ ಕಂಡು ವ್ಯಸನವಂ ಪೊಂದಬೇಕಾಗಿರುವುದು ವ್ಯರ್ಥವಾಗಿ ಉರಿಯಲ್ಲಿ ಕರಿಯಾಗಿ ಪೋಗುವಳು. ಅವಳನ್ನು ರಕ್ಷಿಸಿ ಎನಗೆ ಉಂಟಾಗುವ ಲೋಕಾಪವಾ ದವಂ ತಪ್ಪಿಸುವನಾಗು ?” ಎಂದು ದೀನೋಕ್ತಿಗಳಿಂದ ಕೈಗಳನ್ನೊಡ್ಡಿ ಬೇಡಿಕೊಳ್ಳ ಲಾರಾಯನು-- ಎಲೆ ವಾಸವದತ್ತೆಯೇ, ಇದೊ ! ಈಕ್ಷಣದಲ್ಲಿ ನಾನೇ ಪೋಗಿ. ಅವಳನ್ನು ಸಂರಕ್ಷಿಸುವೆನು ?” ಎ೦ದು ಪೋಗುತ್ತಿರಲು ; ವಸುಭೂತಿಯು- ಎಲೈ ರಾಜೇಂದ್ರನೇ, ಒಬ್ಬ ಸ್ತ್ರೀಗೋಸುಗವಾಗಿ ಲೋಕಕ್ಕೆಲ್ಲ ಅಧಿಪತಿಯಾದ ನೀನು ಬಲವಾಗಿ ಉರಿಯುತ್ತಿರುವ ಈ ಅಗ್ನಿ ಯಲ್ಲಿ ಪತಂಗದ ಹುಳುವಿನಂತೆ ಬಿದ್ದು ಕರಿಗೊಳ್ಳುವುದು ನ್ಯಾಯವಲ್ಲ” ಎನಲು ; ಬಾಬ್ ವ್ಯನು-IC ಎಲೈ ಸ್ವಾಮಿಯೇ, ಮಂತ್ರಿಯು ಯುಕ್ತವಾಗಿ ಬಿನ್ನಿಸುತ್ತಿರುವನು. ನೀನು ಹೋಗುವುದು ಉಚಿತವಾದ ಕಾರ್ಯವಲ್ಲವು ' ಎಂದು ವಿಜ್ಞಾಪಿಸಲು ; ವಿದೂಷಕನು- “ಎಲೈ ರಾಜೇಂದ್ರನೇ, ಆರಿಸುವುದಕ್ಕಾಗದೆ ದಳ್ಳುರಿಗಳನ್ನು ಬೀರುತ್ತಿರುವ ಅಗ್ನಿಯಲ್ಲಿ ನೀನು ಸಾಹಸವಂ ತೋರಿಸುವುದು ನ್ಯಾಯವಲ್ಲವು > ಎಂದು, ಅವನು ಹೊದ್ದು ಇದ್ದ ವಸ್ತ್ರದ ಸೆರಗನ್ನು ಹಿಡಿಯಲು ; - ರಾಯನು- ಎಲೈ ಮೂರ್ಖನಾದ ವಿದೂಷಕನೇ, ಕೇಳು, ಪ್ರಾಣಕಾಂ ತೆಯಾದ ಸಾಗರಿಕೆಯು ಉರಿದು ಹೋಗುತ್ತಿರುವಲ್ಲಿ ಇನ್ನು ಎನಗೆ ಪ್ರಾಣದಮೇಲೆ ಆಸೆ ಇರುವುದೇ ? ?” ಎಂದು ತಾನು ಹೊದ್ದು ಇರುವ ವಸ್ತವಂ ಬಿಟ್ಟು, ಪ್ರಜ್ವಲಿಸುತ್ತಿ ರುವ ಅಗ್ನಿಯನ್ನು ಪ್ರವೇಶಿಸಿ, ಹೊಗೆಯಿಂದ ಮುಚ್ಚಲ್ಪಟ್ಟ ಶರೀರವುಳ್ಳವನಾಗಿ, ಅಗ್ನಿ ಯಂ ಕುರಿತು , ( ಎಲೆ ಅಗ್ನಿ ಯೇ, ಸುಮ್ಮನಿರು ಸುಮ್ಮನಿರು. ಈ ಪೊಗೆಯ ಮೊತ್ತವನ್ನು ಪರಿತ್ಯಜಿಸುವನಾಗು, ಏತಕೆ ವ್ಯರ್ಥವಾಗಿ ನಿನ್ನ ಜ್ವಾಲೆಗಳ ಸಮೂಹ ವನ್ನು ಹೆಚ್ಚು ಮಾಡುತ್ತಲಿರುವೆ ? ಈ ಪ್ರಳಯಕಾಲದ ಅಗ್ನಿಯ ಹಾಗೆ ಪ್ರಜ್ವಲಿಸು ತಿರುವ ಪ್ರಾಣಕಾಂತೆಯಾದ ಸಾಗರಿಕೆಯ ವಿರಹಾಗ್ನಿಯ ದೆಸೆಯಿಂದ ದಗ್ಗನಾಗದೆ ಇರುವ ಎನ್ನನ್ನು ಈಗ ಸ್ವಲ್ಪನಾಗಿರುವ ನೀನು ಏನು ಮಾಡಬಲ್ಲೆ ? ಅಂಥ ಸಾಗರಿ ಕೆಯೇ ನಿನ್ನಲ್ಲಿ ದಗ್ಗಳಾಗಿ ಪೋಗುತ್ತಲಿರುವಲ್ಲಿ ಈ ಎನ್ನ ಶರೀರವನು ನಿನಗೆ ಸೌದೆ ಯನ್ನಾಗಿ ಮಾಡುವೆನು ?” ಎಂದು ನುಡಿಯುತ್ತಿರಲು ; ಬಾಭ್ರವ್ಯನು- ಭರತವಂಶವಂ ನಾಶವಂ ಗೆಯ್ಯುತ್ತಿರುವನು ... ಮುಂದೆ ಗತಿ ಯೇನು? ?” ಎಂದು ನುಡಿಯುತ್ತಿರಲು ;