ಪುಟ:ವತ್ಸರಾಜನ ಕಥೆ.djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ಚಿಕ್ಕಂದನ ಕಥ, - ೧44 ದೇವಿಯು- ಎಲೈ ಬಾಭ್ರವ್ಯನೇ, ಬಹುವಾಕ್ಯಗಳಂ ಪೇಳಿ ಫಲವಿಲ್ಲ. ಲೋಕಕಲ್ಲ ಬಹು ದುಃಖವನ್ನು ಂಟುಮಾಡುತ್ತಲಿರುವ ಎನ್ನ ವಾಕ್ಯದಿಂದ ರಾಯನು ವ್ಯರ್ಥವಾಗಿ ದಗ್ಧನಾಗುತ್ತಿರುವನು, ಅಂಥ ಮಹಾರಾಜೇಂದ್ರನೇ ಹೋಗಿ ಲೋ ಕಾಸವಾದವು ಬಲವಾಗಿ ಬರುತ್ತಲಿರುವಲ್ಲಿ ಈ ದೇಹವನ್ನು ಇರಿಸಿಕೊಂಡಿರುವುದು ನ್ಯಾಯವಲ್ಲ. ಪತಿಯೊಡನೆ ಮೃತಿಯಂ ಪೊಂದಿದ ಕಾಂತೆಯರಿಗೆ ಸದ್ಧ ತಿಯುಂಟಾ ಗುವುದೆಂದು ಶಾಸ್ತ್ರವಿರುವುದು' ಲೋಕಾಪವಾದಕ್ಕಿಂತಲೂ ಮರಣವೇ ಯುಕ್ತವಾದ ಕಾರ್ಯವ ?” ಎಂದು ನುಡಿದು, ತಾನೂ ಅಗ್ನಿ ಪ್ರವೇಶವಂ ಗೆಯ್ಯಲೋಸುಗ ಪೋ ಗುತ್ತಿರಲು ; ವಿದೂಷಕನು ಅಡ್ಡಲಾಗಿ ಬಂದು ನಿಂತು - ಎಲೌ ತಾಯೇ, ನೀನು ಈರೀತಿಯಂ ಗೆಯ್ಯುವುದು ನ್ಯಾಯವಲ್ಲ- ಮೊದಲು ನಾನು ಅಗ್ನಿಯಲ್ಲಿ ಬಿದ್ದ ಮೇಲೆ ನಿನ್ನ ಮನಬಂದಂತೆ ಮಾಡಬಹುದು ?” ಎಂದು ವಿಜ್ಞಾಪಿಸುತ್ತಿರಲು ; ವಸುಭೂತಿಯು-II ಹೋ ಹೋ ! ವತ್ಸ ರಾಜನು ಅಗ್ನಿಯಂ ಹೊಕ್ಕನು. ಮುಂದೆ ಗತಿ ಏನು ? ೨) ಎಂದು ಕೂಗುತ್ತಿರಲು ; ಬಾಭ್ರವ್ಯನು- ಇಂಥ ರಾಜೇಂದ್ರನೇ ಅಗ್ನಿಯಂ ಹೊಕ್ಕಿರುವಲ್ಲಿ ಸೇವಕನಾದ ನಾನು ಪ್ರಾಣವಂ ಧರಿಸಿ ಫಲವೇನು ? ೨” ಎಂದು ನುಡಿಯುತ್ತಿರಲು ; ರಾಯನು ಸ್ವಲ್ಪ ದೂರದಲ್ಲಿ ಸಾಗರಿಕೆಯಂ ಕಂಡು ಆನಂದಪರವಶನಾಗಿ ( ಇದೋ 1 ಮುಂದುಗಡೆಯಲ್ಲಿ ಎನಗೆ ಪ್ರಾಣಾಧಾರಳಾದ ನಾಗರಿಕೆಯು ಕಾಣ ವಳು ?” ಎಂದು ತ್ವರೆಯಿಂದ ಪೋಗುತ್ತಿರಲು ; ಸಾಗರಿಕೆಯು ಸುತ್ತಲೂ ಮೊತ್ತವಾಗಿ ಮುತ್ತಿರುವ ಅಗ್ನಿ ಜ್ವಾಲೆಯಂ ಕಂಡು ಓಡಿಪೋಗುವುದಕೆ ಸಂಕಲೆಯು ಬಲವಾಗಿ ಕಾಲುಗಳಲ್ಲಿ ಕೀಲಿಸಿರುವುದರಿಂದ ಇದ್ದ ಸ್ಥಳದಿಂದ ಎದ್ದು ಪೋಗಲಾರದೆ ಕುಳಿತು, ( ಈಗ ಎನಗೆ ಬಹಳ ಸಂತೋ। ಷವಾದುದು, ಏಕೆಂದರೆ ? ಪ್ರಜ್ವಲಿಸುವ ಅಗ್ನಿ ಯು ಈ ಸಂಕಟವನ್ನು ಪರಿಹರಿಸಿ ಪ್ರಾಣಾವಸಾನವನ್ನು ಂಟುಮಾಡುತ್ತಿರುವದು ” ಎಂದು ನುಡಿಯುತ್ತಿರಲು : ಅಷ್ಟರಲ್ಲೇ ರಾಯನು ವೇಗದಿಂ ಪೋಗಿ ನೋಡಿ, “ ಈ ಬಲವಾದ ಉರಿ ಯಲ್ಲಿ ನಾಗರಿಕೆಯು ಉಳಿದಿರುವುದು ಆಶ್ಚರವು ” ಎಂದು ನುಡಿಯುತ್ತಿರಲು ; ಅನಿತರಲ್ಲೆ ಸಾಗರಿಕೆಯು ರಾಯನಂ ಕಂಡು, ( ಇದೇನು ? ಈ ಉರಿಯಂ ಪೊಕ್ಕು ಎನ್ನ ಪ್ರಾಣಕಾಂತನಾದ ರಾಯನು ಬಂದಿರುವನು, ಈ ಮಹಾರಾಜನಂ ನೋಡಲಾಗಿ, ಎನಗೆ ಮರಳಿ ಪ್ರಾಣಗಳಲ್ಲಿ ಅಭಿಲಾಷೆಯುಂಟಾದುದು ?” ಎಂದು ರಾಯನಂ ಕುರಿತು ಎಲ್ಲೆ ಪೂಜ್ಯನಾದ ರಾಜೇಂದ್ರ ನೇ, ಎನ್ನ ನು ಸಲಹು ವುದು ” ಎಂದು ಕೂಗಿ ನುಡಿದು ಕೈಗಳನ್ನು ನೀಡಲು ; ರಾಯನು-II ಪ್ರಾಣವಲ್ಲ ಭಯೇ, ದುಃಖವಂ ಪೊಂದಬೇಡ. ಒಂದು ಮುಹೂರ್ತವು ಈ ಒಲವಾದ ಧೂಮ ಸಮೂಹವನ್ನು ಸಹಿಸುವಳಾಗು. “ನಗಳಿ೦ದ ಜಾರಿದ ಸೆರಗನ್ನು ಅಗ್ನಿಯು ದಹಿ 20