ಪುಟ:ವತ್ಸರಾಜನ ಕಥೆ.djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇHಳಿ - ಕರ್ಣಾಟಕ ಕಾವ್ಯಕಲಾನಿಧಿ, - ಸುತ್ತಲಿರುವುದು, ಇಲ್ಲಿಂದ ಶೀಘ್ರವಾಗಿ ಪೋಗುವುದಕ್ಕೆ ನಿಗಳ ಬಂಧನದಿಂದ ಮುಗ್ಗು ತ್ತಲಿರುವೆಯಾದುದರಿಂದ ಎನ್ನ ಕತ್ತನ್ನು ತಬ್ಬಿಕೊಳ್ಳು ವಳಾಗು ” ಎಂದು ನುಡಿಯಲು ; ಅವಳು ಅದೇರೀತಿಯಿಂದ ರಾಯನ ಕತಂ ತಬ್ಬಲು ; ರಾಯನು< ಎಲೆ ಕಾಂತೆಯೇ, ಒಂದು ಕ್ಷಣದಲ್ಲಿ ಎನಗೆ ಉ೦ಟಾಗಿದ್ದ ಸಂತಾಪವೆಲ್ಲವೂ ಪೋದುದು, ನೀನು ಭಯವಂ ಪೊಂದದೆ ಎನ್ನ೦ ಚೆನ್ನಾಗಿ ಆಲಿಂಗಿಸುವಳಾಗು. ಯಾವಕಾರಣ ನಿನ್ನ ಅ೦ಗಸ್ಪರ್ಶವು ಎನ್ನ ಹೃದಯತಾಪವನ್ನೂ ಹೊರಗಿನ ಅಗ್ನಿ ಜ್ವಾಲೆಯ ತಾಪವನ್ನೂ ಸಹ ಪರಿಹರಿಸಿ ಮನಕ್ಕೆ ಸಂತೋಷವನ್ನು ಂಟುಮಾಡಿರು ವುದೋ ಆದುದರಿಂದ ಈ ಅಗ್ನಿ ಯು ನಿನ್ನ ನ್ನು ದಹಿಸಲಾರದು ?” ಎಂದು ಹೇಳುತ್ರ ಸಾಗರಿಕೆಯನ್ನು ಎತ್ತಿಕೊಂಡು ಬಂದು, ಒಂದು ಸ್ಥಳದಲ್ಲಿ ಇರಿಸಿ, ಸುತ್ತಲೂ ನೋಡಿ, ಸ್ವಲ್ಪವಾದರೂ ಅಗ್ನಿ ಜ್ವಾಲೆಯಂ ಕಾಣದೆ, 'ಇದೇನಾಶ್ಚರ್ಯವ್ರ : ಕಾ ಡುಗಿಚ್ಚಿನಂತೆ ಉರಿಯುತಿರ್ದ ಉರಿಯು ಎಲ್ಲಿಪೋದುದು? ಅಂತಃಪುರವು ದಗ್ಧವಾಗದೆ ಎಂದಿನಂತೆ ಇರುತ್ತಿರುವುದು ” ಎ೦ದು, ಮುಂದೆ ಬಂದು ನಿಂತಿರುವ ವಾಸವದತ್ತೆ ಯಂ ಕಂಡು, 1 ಇದೇನು ಪ್ರದ್ಯೋತರಾಯನ ಪುತ್ರಿಯಾದ ವಾಸವದತ್ತೆಯು ಒತ್ತಿನಲ್ಲಿ ರ್ಪಳು ?” ಎಂದು ನುಡಿದು ನಿಂದಿರಲು ; ವಾಸವದತ್ತೆಯು ರಾಯನ ಮೈದ ಡಹಿ, ' ದೈವಯೋಗದಿಂದ ನಮ್ಮ ರಾಜೇಂದ್ರನು ಸ್ವಲ್ಪವಾಗಿ ಉರಿಯಲ್ಲಿ ಕಂದದೆ ಬಂದನು ?” ಎಂದು ನುಡಿಯಲು ; ಬಾಘ್ರವ್ಯನು ರಾಯನ ಚರಣಗಳಿಗೆ ವಂದನೆಯಂ ಗೆಯ್ಯು, “ ಎಲೈ ಸ್ವಾಮಿಯೇ, ಈಗ ನಾವೆಲ್ಲರೂ ಜೀವದೊಡನೆ ಕೂಡಿದೆವ ೨) ಎನಲು ; ರಾಯನ ಚರಣಗಳಿಗೆ ನಮಸ್ಕರಿಸಿದ ವಸುಭೂತಿಯು- ಎಲೈ ಮಹಾ ರಾಜನೇ, ಈಗ ಜಗತ್ತುಗಳಿಗೆಲ್ಲ ಆನಂದವುಂಟಾದುದು ” ಎಂದು ನುಡಿಯಲು ; ರಾಯನು ವಿದೂಷಕನಂ ನೋಡಿ, “ ಎಲೈ ಮಿತ್ರನೇ, ಈ ಕಾರ್ಯವು ಸ್ವನ್ನ ವೋ ಇಲ್ಲವಾದಲ್ಲಿ ಬುದ್ದಿ ಭ್ರಾಂತಿಯೋ, ಇಲ್ಲವಾದಲ್ಲಿ ಇಂದ್ರಜಾಲವೋ ತಿಳಿಯಲಿಲ್ಲವು ” ಎನಲು ; ವಿದೂಷಕನು ( ಎಲೈ ರಾಜೇಂದ್ರನೇ, ನೀನು ಸಂದೇಹವಂ ಪೊ೦ದ ಬೇಡ, ಇದು ಇ೦ದ್ರಬಾಲವಿದ್ಯೆಯೇ ಸರಿ, ವಾಸೀಪುತ್ರನಾದ ಐಂದ್ರಜಾಲಿಕನು ಎನ್ನಲ್ಲಿ ಇನ್ನೊ೦ದು ನೋಡತಕ್ಕ ವಿದ್ಯೆಯು ಇದೆ. ಅದನ್ನು ಅಗತ್ಯವಾಗಿ ನೋಡತಕ್ಕುದೆಂದು ನುಡಿದುಹೋದನು. ಈ ಜ್ವಾಲೆಯು ಅವನ ವಿದ್ಯಾಪ್ರಭಾವವೇ ಸರಿ ” ಎಂದು ನುಡಿಯಲು ; ರಾಯನು ( ಅಯ್ಯಾ ವಿದೂಷಕನೇ, ನೀನು ಹೇಳಿದ ವಾಕ್ಯವು ಯುಕ್ತವೇ ಸರಿ. ಅವನು ಹೇಳಿದುದು ನಿಶ್ಚಯವೇ ಸರಿ. ಆದರೆ ನಾನು ಮಂತ್ರಿಯ ಸಂದರ್ಶನದಲ್ಲಿ ಕುತೂಹಲವುಳ್ಳವನಾಗಿ ಅವನ ವಾಕ್ಯವಂ ಲಕ್ಷ್ಯವಂ ಗೆಯ್ಯಲಿಲ್ಲವು” ಎಂದು, ವಾಸವದತ್ತೆಯಂ ನೋಡಿ~ (1 ಎ ಕಾಂತೆಯೇ, ನಿನ್ನ ಮಾತಿನಿಂದ ನಾಗರಿಕೆಯನ್ನು ಕರೆದುಕೊಂಡು ಬಂದಿರುವೆನು ” ಎನಲು ; ಅವಳು(( ಎಲೈ ಮಹಾರಾಜೇಂದ್ರನೇ, ಉತ್ತಮವಾದ ಕಾರವಂ ಗೆಯಿರುವೆ ” ಎಂದು ನುಡಿ