ಪುಟ:ವತ್ಸರಾಜನ ಕಥೆ.djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವತ್ಸರಾಜನ ಕಥೆ, ೧೫ ಯುತ್ತಿರಲು ; ಅಷ ರಲ್ಲೇ ವಸುಭೂತಿಯು ಸಂಕಲೆಗಳಿ೦ದ ಅ೦ಕಿತಳಾಗಿರುವ ಸಾಗರಿ ಕೆಯಂ ನೋಡಿ, ಎಲೈ ಬಾಭ್ರವ್ಯನೇ, ನಮ್ಮ ವಿಕ್ರಮಬಾಹುರಾಯನ ಪುತ್ರಿಯಾದ ರತ್ನಾ ವಳಿಗೆ ಈ ಬಾಲೆಯು ಸಮಾನಳಾಗಿರುವಳು ” ಎಂದು ಸಾಗರಿಕೆಯಂ ತೋರಿ ಸಲು ; ಚಾಭ್ರವ್ಯನು- ( ಎಲ್ವೆ ಮಂತ್ರಿ ಶ್ರೇಷ್ಠನೇ, ಎನಗೂ ಅದೇರೀತಿಯಿಂದ ಸಂದೇಹವು ತೋರುತ್ತಿರುವುದು ?” ಎಂದು ನುಡಿಯಲು ; ಆ ಮಂತ್ರಿಯು-ಎಲೈ ಮಹಾರಾಜೇಂದ್ರನೇ, ಈ ಬಾಲೆಯು ಎಲ್ಲಿಂದ ಬಂದಳು ? ಯಾರು ತಂದು ಕೈ ಗಾ ಣಿಕೆಯನ್ನು ಒಪ್ಪಿಸಿರುವರು ? ಅದನ್ನು ಅಪ್ಪಣೆಯನೀಯಬೇಕು ” ಎಂದು ರಾಯ ನಂ ಬೆಸಗೊಳಲು ; ರಾಯನು • ಎಲ್ವೆ ಮಂತ್ರಿಯೇ, ನೀನು ಕೇಳಿದ ಸಂಗ ತಿಯು ಎನಗೂ ತಿಳಿಯದು. ವಾಸವದತ್ತಾ ದೇವಿಯಂ ಕೇಳುವನಾಗು ” ಎಂದು ಪೇಳಲು ; ದೇವಿಯು- ಎಲ್ವೆ ಮಂತ್ರಿ ಶ್ರೇಷ್ಟನಾದ ವಸುಭೂತಿಯೇ, ಈ ಬಾಲೆ ಯು ಸಮುದ್ರದಲ್ಲಿ ತೇಲಿಪೋಗುತ್ತ ಇದ್ದು ಧನಗುಪ್ತನೆಂಬ ವರ್ತಕನ ಕೈಗೆ ಸಿಕ್ಕ `ಲಾಗಿ ಅವನು ತಂದು ಒಪ್ಪಿಸಿರುವನು. ನಿನ್ನ ಸನ್ನಿ ಧಿಯ ಸೇವೆಗೆ ಯೋಗ್ಯಳೆಂದು ನಮ್ಮ ಮಂತ್ರಿಯಾದ ಯೌಗಂಧರಾಯಣನು ತಂದು ಒಪ್ಪಿಸಿದುದರಿಂದ ನಾನು ಸಾಗರಿಕೆ ಎಂದು ಹೆಸರನ್ನಿಟ್ಟಿರುವೆನು ?” ಎಂದು ನುಡಿಯಲು ; ರಾಯನು ಆಶ್ಚ. ರವಂ ಪೊಂದಿ, ( ಇವಳು ಧನಗುಪ್ತನಿಗೆ ಹೇಗೆ ಸಮುದ್ರದಲ್ಲಿ ದೊರಕಿದಳೋ, ಅವನು ಎನಗೆ ವಿಜ್ಞಾಪಿಸದೆ ಹೇಗೆ ಮಂತ್ರಿಗೆ ಪಿಜ್ಞಾಪಿಸಿದನೋ, ಆ ಮಂತ್ರಿಯಾದರೂ ಎನಗೆ ಶ್ರುತಪಡಿಸದ ದೇವಿಗೆ ಹೇಗೆ ಒಪ್ಪಿಸಿದನೋ : ಈ ವೃತ್ತಾಂತವು ತಿಳಿಯಲಿ ಇವು ?” ಎಂದು ತನ್ನ ಹೃದಯದಲ್ಲಿ ಆಲೋಚಿಸುತ್ತಿರಲು ; ವಸುಭೂತಿಯು-. (ಹೀಗ ಲ್ಲದೆ ಇದ್ದಲ್ಲಿ ನಮಗೆ ಗೊತ್ತಾಗಿರುವ ಈ ರತ್ನ ಮಾಲೆಯು ಈ ವಸಂತಕನ ಕಂಠದ ಲ್ಲಿರುವುದಕ್ಕೆ ನಿಮಿತ್ತವಿಲ್ಲ. ನಾವು ಹೇಗೆ ಸಮುದ್ರದಲ್ಲಿ ಬಿದ್ದು ಎದ್ದು ಬಂದಿರು ವೆವೋ ಅದೇರೀತಿಯಿಂದ ಇವಳೂ ಆ ವರ್ತಕನ ಹಸ್ತಕೆ ದೊರಕಿರುವಳಾದುದ ರಿಂದ ನಿಶ್ಚಯವಾಗಿ ಸಿಂಹಳೇಶ್ವರನ ಮಗಳಾದ ರತ್ತಾ ವಳಿಯೇ ಸರಿ ?” ಎಂದು ತನ್ನ ಮನದಲ್ಲಿ ನಿಶ್ಚಯಿಸಿ ಕಣ್ಣೀರುಗಳ೦ ಬಿಡುತ್ತ, “ ಎಲೈ ರಾಜಪುತ್ರಿಯಾದ ರತ್ನಾ ವಳಿಯೇ, ನಿನಗೆ ಈ ಅವಸ್ಥೆಯು ಬರಬಹುದೆ ! 2' ಎಂದು ನಾಗರಿಕೆಯಂ ಆಲಿಂಗ ನವಂ ಗೆಯ್ದು ರೋದನವಂ ಗೆಯ್ಯಲು ; ಸಾಗರಿಕೆಯು- ಎಲೈ ಮಂತ್ರಿಯಾದ ವಸುಭೂತಿಯೇ, ನಿನ್ನನ್ನು ಕಂಡು ಎನ್ನ ಪ್ರಾಣಗಳು ಸಂತೋಷವನ್ನು ಹೊಂದಿ ದುವ?” ಎಂದು ಸ್ವರವೆತ್ತಿ ರೋದನವಂ ಗೆಯ್ಯಲಾಮಂತ್ರಿಯು-ಎಲೆ ತಾಯೇ, ಆ ರೀತಿಯಾದ ಐಶ್ವರದಲ್ಲಿದ್ದ ನಿನ್ನ ನ್ನು ಮಂದಭಾಗ್ಯನಾದ ನಾನು ಈ ಅವಸ್ಥೆಯಲ್ಲಿರು ವುದನ್ನು ಹೇಗೆ ನೋಡಲಿ ? ೨) ಎಂದು ಕೂಗಿ ಅಳುತ್ತಾ ಭೂಮಿಯಲ್ಲಿ ಬಿದ್ದು ಹೊರಳುತ್ತಿರಲು; ಸಾಗರಿಕೆಯು ಆ ವಸುಭೂತಿಯ ಮೇಲೆ ಬಿದ್ದು, ( ಎಲ್ವೆ ತಂದೆ