ವಿಷಯಕ್ಕೆ ಹೋಗು

ಪುಟ:ವತ್ಸರಾಜನ ಕಥೆ.djvu/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೬ - ಕರ್ಣಾಟಕ ಕಾವ್ಯಕಲಾನಿಧಿ, - ಯಾದ ವಿಕ್ರಮಬಾಹುವೇ, ಎಲೌ ತಾಯಿಯಾದ ಕಮಲಾವಳಿಯೇ, ಎಲ್ಲಿ ಇದ್ದೀರಿ? ಎನಗೆ ಪ್ರತಿವಾಕ್ಯವನ್ನು ಹೇಳಿ ', ಎಂದು ನುಡಿದು, ಮೂರ್ಛಯಂ ಪೊಂದಲು ; ವಾಸವದತ್ತೆಯು, ( ಎಲೈ ಬಾಭ್ರವ್ಯನೇ, ಇವಳು ಎನ್ನ ತಂಗಿಯಾದ ರತ್ನಾವ ಳಿಯೇ ? ” ಎನಲು ; ಅವನು - ಎಲೌ ಪೂಜ್ಯಳಾದ ದೇವಿಯೇ, ಅರತ್ನಾ ವಳಿಯೇ ಇವಳು ?” ಎಂದು ನುಡಿಯಲು ; ದೇವಿಯು-( ತಂಗಿಯಾದ ಎಲೌ ರತ್ತಾ ವಳಿಯೇ, .. ದುಃಖವಂ ಪೊಂದಬೇಡ ?” ಎಂದು ಅವಳನ್ನು ಆಲಿಂಗಿಸಿ, ಧಾರಾಳವಾಗಿ ಕಣ್ಣೀ ರುಗಳಂ ಬಿಡುತ್ತಿರಲು ; ರಾಯನು-II ಉತ್ತಮವಾದ ವಂಶದಲ್ಲಿ ಪುಟ್ಟದ ವಿಕ್ರ ಮಬಾಹುರಾಯನ ಮಗಳಾದ ರತ್ನಾ ವಳಿಯೇ ? ” ಎಂದು ಬೆಸಗೊಳಲು ; ವಿದೂ ಷಕನು ತನ್ನ ಕತ್ತಿನಲ್ಲಿದ್ದ ರತ್ನ ಮಾಲೆಯಂ ಮುಟ್ಟಿ ನೋಡಿ - ನಾನು ಮೊದಲೇ ಈ ಸಾಗರಿಕೆಯು ಮಹತ್ತರವಾದ ಸದ್ವಂಶದಲ್ಲಿ ಪುಟ್ಟದವಳಾಗಿರಬೇಕು, ಇಲ್ಲವಾ ದಲ್ಲಿ ಅಮೂಲ್ಯವಾದ ಇಂಥ ರತ್ನ ಮಾಲೆಯು ಸಾಧಾರಣವಾದ ಜನರಿಗೆ ದೊರಕತ ಕುದಲ್ಲವೆಂದು ನಿಶ್ಚಯಿಸುತ್ತಿದ್ದೆನು ” ಎಂದು ತನ್ನ ಮನದಲ್ಲಿ ಆಲೋಚಿಸುತ್ತಿರಲು; ವಸುಭೂತಿಯು ವಾಸವದತ್ತಾ ದೇವಿಯಂ ನೋಡಿ, ಎಲ್‌ ದೇವಿಯೇ, ನಿನ್ನ ತಂಗಿ ಯಾದ ರತ್ನಾ ವಳಿಗೆ ಇಂಥ ಅವಸ್ಸಯು ದೊರಕಬಹುದೇ ! " ಎನಲು ; ರಾಯನು ಸಿಂಹಳೇಶ್ವರನ ಪುತ್ರಿ ಎಂದು ನಿಶ್ಚಯಿಸಿ- ಎಲೌ ವಾಸವದತ್ತಾ ದೇ ವಿಯೇ, ನಿನ್ನ ತಂಗಿಯಾದ ರತ್ನಾ ವಳಿಯು ಅಧಿಕವಾದ ದುಃಖವಂ ಹೊಂದುತ್ತಿರು ವಳು, ನೀನು ಜಾಗ್ರತೆಯಿಂದ ಬಂದು ಆಲಿಂಗನವಂ ಗೆಯು ಇವಳ ವ್ಯಸನವಂ ಪರಿಹರಿಸುವಳಾಗು ” ಎಂದು ನುಡಿಯಲು ; ವಾಸವದತ್ತೆಯು ರಾಯನ ಮುಖವಂ ನೋಡುವುದಕ್ಕೂ ವಸುಭೂತಿಗೆ ಪ್ರತ್ಯುತ್ತರವಂ ಪೇಳುವುದಕ್ಕೂ ಸಹ ಲಜ್ಜೆಯಂ ಪೊಂದುತ್ತಿರುವೆನೆಂದು ತನ್ನ ಮನದಲ್ಲಿ ಯೋಚಿಸಿ, ರತ್ನಾ ವಳಿಯಂ ನೋಡಿ ಕಣ್ಣೀ ರುಗಳಂ ಬಿಡುತ್ಯ, ತನ್ನ ಬಾಹುಗಳಂ ನೀಡಿ ( ಎಲೆ ತಂಗಿಯಾದ ರತ್ನಾ ವಳಿಯೇ; ಅತಿನಿಷ್ಣು ರಳಾದ ಎನಗೆ ಪ್ರತ್ಯುತ್ತರವಂ ನುಡಿಯುತ್ತ ಆಲಿಂಗನವಂ ಗೆಯ್ಯುವ ಳಾಗು. ” ಎಂದು ನುಡಿದು, ಅವಳ ಕ೦ಠಾಲಿಂಗನವಂ ಗೆಯ್ಯಲು; ಆ ರತ್ನಾ ವಳಿಯು ಮುಗ್ಗು ಎದ್ದು, ವಾಸವದತ್ತಾದೇವಿಯ೦ ಆಲಿಂಗಿಸಲು ; ವಾಸವದತ್ತಾ ದೇವಿಯು ವಸುಭೂತಿಯಂ ಪೊರದಟ್ಟಿ ರಾಯನಂ ಕುರಿತು, ಎಲೈ ರಾಜೇಂದ್ರನೇ, ಎನಗೆ ಬಲವಾಗಿ ನಾಚಿಕೆಯುಂಟಾಗುತ್ತಿರುವುದು, ನೀನು ಜಾಗ್ರತೆಯಿಂದ ಈ ರತ್ನಾ ವ ಳಿಯ ಪಾದಗಳಲ್ಲಿರುವ ಸಂಕಲೆಯಂ ತೆಗೆಯುವನಾಗು ” ಎಂದು ಬಿನ್ಲೈಸಲು; ರಾಯನು- ನೀನು ಹೇಳಿದಂತೆ ಮಾಡುವೆನು ” ಎಂದು ಆ ರತ್ತಾ ವಳಿಯ ಪಾದ ಬಂಧನವಂ ತೆಗೆಯಲು ; ರತ್ನಾ ವಳಿಯು ರಾಯನನ್ನು ನೋಡಿ ಲಜ್ಞೆಯನ್ನೂ ಭೀತಿ ಯನ್ನೂ ಸಂತೋಷವನ್ನೂ ಸಹ ಪೊಂದುತ್ತಿರಲು ; ವಾಸವದತ್ತೆಯು ವಸುಭೂ ತಿಯಂ ಕುರಿತು,- ಎಲೈ ಮಂತ್ರಿ ಶ್ರೇಷ್ಠನೇ, ಕೇಳು, ನಮ್ಮ ಮಂತ್ರಿಯಾದ