ಪುಟ:ವತ್ಸರಾಜನ ಕಥೆ.djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವತ್ಸರಾಜನ ಕಥೆ, - ೧೫೭ ಯೌಗಂಧರಾಯಣನಿಂದ ನಾನು ಈ ರೀತಿಯಾದ ದುರ್ಜನಕೆ ಒಳಗಾದೆನು, ಎನ್ನ ಸಮೀಪಕ್ಕೆ ಈ ರತ್ನಾ ವಳಿಯನ್ನು ಕರೆದುಕೊಂಡು ಬಂದ ಕಾಲದಲ್ಲಿ ಇವಳ ವೃತ್ತಾಂ ತವನ್ನು ತಿಲಮಾತ್ರವಾದರೂ ತಿಳುಹಿಸದೆ ಪೋದನು. ನಾನಾದರೋ ಇವಳ ವೃತ್ತಾಂತವನ್ನು ಕೇಳಿ ಬಲ್ಲೆ ನಲ್ಲದೆ ಬಾಲ್ಯದಿಂದ ಇವಳನ್ನು ಒಂದು ಬಾರಿಯ ಕಂಡವಳಲ್ಲ. ಸಾಧಾರಣರಾದ ಸ್ತ್ರೀಯರಲ್ಲಿ ಇವಳು ಒಬ್ಬಳೆಂದು ಕಂಡು ಯಾ ವುದೋ ಒಂದು ಅಪರಾಧಕ್ಕೋಸುಗವಾಗಿ ತಕ್ಕ ಶಿಕ್ಷೆಯನ್ನುಂಟುಮಾಡಬೇಕಾಗಿ ಬಂದಿತು ” ಎಂದು ಪಶ್ಚಾತ್ತಾಪಯುಕ್ತಳಾಗಿ ಪೇಳುತಿರ್ದಳು. ಎಂಬಲ್ಲಿಗೆ ಶ್ರೀ ಕೃಷ್ಟರಾಜ ಕಂಠೀರವರಿಂ ಲೋಕೋಪಕಾರಾರವಾಗಿ ನವರಸಭರಿತವಾಗಿ ಕರ್ಣಾಟಕಭಾಷೆಯಿಂದ ವಿರಚಿಸಲ್ಪಟ್ಟ ಶ್ರೀಕೃಷ್ಯರಾಜ ಸೂಕ್ತಿ ಮುಕ್ತಾವಳಿಯೆಂಬ ಗ್ರಂಥದೇಳಿ ವತ್ಸರಾಜನ ಕಥೆಯಲ್ಲಿ ಹದಿನೇಳನೆಯ ಗುಚ್ಛಂ ಸಂಪೂರ್ಣವಿ. 崇基、 ಹದಿನೆಂಟನೆಯ ಗುಚ್ಛ೦. ಅನಂತರದಲ್ಲಿ ಯೌಗಂಧರಾಯಣನು ರಾಜಕಾರಗಳನ್ನು ವಿಜ್ಞಾಪಿಸುವುದ ಕೋಸುಗವಾಗಿ ಅಂತಃಪುರವಂ ಕುರಿತು ಬರುತ್ತ ವಾಸವದತ್ತಾ ದೇವಿಯು ಎನ್ನ ವಚನವನ್ನು ಕೇಳಿ ತನ್ನ ಪತಿಯಾದ ರಾಜೇಂದ್ರನಲ್ಲಿ ಮನಸ್ತಾಪನಂ ಪಡೆದು ಕೆಲವು ದಿವಸದವರೆಗೂ ವಿಯೋಗವನ್ನು ಅನುಭವಿಸುವಳಾದಳು. ಯಾವ ರತ್ನಾ ವಳಿಯ ನ್ನು ರಾಯನಿಗೆ ಪತ್ನಿಯಂ ಗೆಯ್ಯಲೋಸುಗ ನಾನು ಅತಿದುಃಖವಂ ಪೊ೦ದಿದೆನೋ, ಅಖಂಡಭೂಮಂಡಲಾಧಿಪತ್ಯವು ಆ ರತ್ನಾ ವಳಿಯ ಪಾಣಿಗ್ರಹಣದಿಂದ ಉಂಟಾಗು ತಿದೆ ಎಂಬ ವಾರ್ತೆಯನ್ನು ಕೇಳುವುದಕ್ಕೆ ಮೊದಲೇ ನಮ್ಮ ರಾಯನು ಅವಳಲ್ಲಿ ಹೇರಳವಾದ ಪ್ರೀತಿಯನ್ನು ಮಾಡುವುದರಲ್ಲಿ ಸಂದೇಹವೇ ಇಲ್ಲ. ಆದರೂ ಆ ರತ್ನಾ ವಳಿಯ ವೃತ್ತಾಂತವನ್ನು ದೇವಿಗೆ ಪೇಳದೆ ಇ೦ತು ಅನರ್ಥವನ್ನು ಂಟುಮಾಡಿದೆನು. ಈಗ ಮುಖವನ್ನು ತೋರಿಸುವುದಕ್ಕೆ ಲಜ್ಞೆಯಂ ಹೊಂದುವೆನು ” ಎಂದು ಕ್ಷಣಮಾ ತ್ರ ಯೋಚಿಸಿ, ( ಆದರೂ ನಾನು ಬಲವತ್ತರವಾದ ಸ್ವಾಮಿಭಕ್ತಿಯಿಂದ ಈ ಕಾವ್ಯ ವಂ ನಡೆಯಿಸಿರುವೆನಾದುದರಿಂದ ಎನಗೆ ಭಯವಿಲ್ಲವು ?” ಎಂದು ಮುಂದಕೆ ಅಡಿಯಿ)