ಪುಟ:ವತ್ಸರಾಜನ ಕಥೆ.djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ಕರ್ಣಾಟಕ ಕಾವ್ಯಕಲಾನಿಧಿ, - ಒಂದುವೇಳೆಯಲ್ಲಾದರೂ ಹೇಳಬಾರದೆ ! ೨” ಎನಲು ; ವಿದೂಷಕನು- ಮಂತ್ರಿಯ ಅಭಿಪ್ರಾಯಮಂ ತಿಳಿದ ಬಳಿಕ ಮರಳಿ ಚರೈತಚರೈಣೆಯಿಂದ ಫಲವಿಲ್ಲವು ” ಎನಲು ; - ದೇವಿಯು-1 ರತ್ನಾ ವಳಿಯೇ, ಈಗಲಾದರೂ ಎನ್ನ ತಂಗಿಯೆಂಬ ಅಭಿಮಾ ನದಿಂದ ಎನ್ನಲ್ಲಿ ಮಿತ್ರತ್ವವನ್ನು ೦ಟುಮಾಡುವಳಾಗು ” ಎಂದು ಅವಳನ್ನು ತನ್ನ ಹಸ್ತದಿಂ ಪಿಡಿದು, ಸಮಸ್ತವಾದ ತನ್ನ ರತ್ನಾ ಭರಣಗಳಿಂದ ಅಲಂಕರಿಸಿ, ರಾಯನ ಸವಿಾಪವಂ ಸೇರಿ ಎಲೈ ರಾಜೋತ್ತಮನೇ, ನನ್ನ ತಂಗಿಯನ್ನು ಪರಿಗ್ರಹಿಸುವ ನಾಗು ” ಎಂದು ನುಡಿಯಲು ; ರಾಯನು ಅಧಿಕಾನಂದ ಭರಿತನಾಗಿ, “ ಎಲೈ ಪ್ರಾಣಕಾಂತೆಯೇ, ಯಾವಾಗಲು ನಿನ್ನ ವಾಕ್ಯವನ್ನು ಮೀರಿ ನಡೆದವನಲ್ಲ !” ಎಂದು ಎರಡು ಹಸ್ತಗಳಂ ನೀಡಿ, ರತ್ನಾ ವಳಿಯಂ ಪರಿಗ್ರಹಿಸಲು ; ವಸುಭೂತಿಯು ರಾಯನಂ ಕುರಿತು-II ಅಯ್ಯಾ ರಾಜೇಂದ್ರನೇ, ಇನ್ನು ಮೇಲೆ ಸಮಸ್ತ ಬಂಧುಗಳು ಕೂಡಿ ವಿದಿತವಾಗಿ ವಿವಾಹವಂ ರಚಿಸಬೇಕು ” ಎಂದು ಬಿನ್ನಿಸಲು ; ವಿದೂಷಕನು ರಾಯನಂ ಕುರಿತು-II ಅಯ್ಯಾ ರಾಜೇಂದ್ರನೇ, ಈ ವಸು ಭೂತಿಯು ಹೇಳುವ ವಾಕ್ಯವನ್ನು ಕೇಳಿದೆಯಾ ? ಸಮಸ್ತ ಬಂಧುಗಳೂ ಬಂದು ವಿಧ್ಯುಕ್ತವಾಗಿ ವಿವಾಹವಾಗಬೇಕಲ್ಲದೆ ರತ್ನಾ ವಳಿಯನ್ನು ಇಚ್ಛೆ ಬಂದಂತೆ ಪರಿಗ್ರಹಿಸಕೂಡದೆಂಬ ತಾತ್ಸಲ್ಯವನ್ನು ಅಂತರಂಗದಲ್ಲಿರಿಸಿ ಈ ವಾಕ್ಯವನ್ನು ಪೇಳು ತಿರುವನು ” ಎಂದು ರಹಸ್ಯವಾಗಿ ಹೇಳುತ್ತಿರಲು ; - ಅಷ್ಟರಲ್ಲೇ ದ್ವಾರಪಾಲಕಿಯು ವೇಗದಿಂ ಬಂದು, ಯೌಗಂಧರಾಯಣನಂ ಕುರಿತು- ಅಯ್ಯಾ ಮಂತ್ರಿಗಳೇ, ಸಮುದ್ರತೀರದಲ್ಲಿರುವ ಧನಗುಪ್ತನೆಂಬ ವರ್ತ ಕನ ಮನೆವಾರ್ತೆಯ ವಸುಗುಪ್ತನು ನಿನ್ನ ಹೆಸರಿಗೆ ಒಂದು ಪತ್ರಿಕೆಯನ್ನು ಬರೆದು ಒಬ್ಬ ಚಾರನನ್ನು ಕಳುಹಿಸಿಕೊಟ್ಟಿರುವನು ?” ಎಂದು ಬಿನ್ಲೈಸಲು;

  • ಆ ವಾಕ್ಯವಂ ಕೇಳ ರಾಯನು ಮಂತ್ರಿಯಂ ಕುರಿತು-ಅಯ್ಯಾ ಮಂತ್ರಿ ಯೇ, ಇಲ್ಲಿಗೆ ಆ ಪತ್ರಿಕೆಯನ್ನು ತೆಗೆದುಕೊಂಡು ಬರುವಂತೆ ಹೇಳುವನಾಗು ” ಎಂದು ಅಪ್ಪಣೆಯನೀಯಲು ;

ಆ ದ್ವಾರಪಾಲಕಿಯು, <ಆಜ್ಞೆಯಾದಂತೆ ನಡೆದುಕೊಳ್ಳುವೆನು ?” ಎಂದು ಪೋಗಿ ಪತ್ರಿಕೆಯನ್ನು ತೆಗೆದುಕೊಂಡು ಬಂದ ಜಂಘಾಲನೆಂಬ ಚಾರನಿಂದೊಡಗೂ ಡಿಬರಲು ಆ ಚಾರನು ರಾಯನ ಪುರೋಭಾಗದಲ್ಲಿ ಪತ್ರಿಕೆಯಂ ಮಡಗಿ, ನಮಸ್ಕಾರ ವಂ ಗೆಯ್ದು ನಿಂದಿರಲು ; ಯೌಗಂಧರಾಯಣನು ಆ ಪತ್ರಿಕೆಯಂ ತೆಗೆದುಕೊಂಡು ಮುದ್ರೆಯ ಒಡೆದು ಓದ ಲು; ಅದರ ಒಕ್ಕಣೆ:- ಮಹಾರಾಜೇಂದ್ರನಿಗೆ ಪ್ರೇಮಪಾತ್ರನಾದ ಯೌಗಂಧರಾ ಯಣನ ಸನ್ನಿಧಿಗೆ ವಸುಗುಪ್ತನು ಮಾಡುವ ವಿಜ್ಞಾಪನೆಯು:-ಈಗ ಸಿಂಹಳಾಧಿಪತಿ