ಪುಟ:ವತ್ಸರಾಜನ ಕಥೆ.djvu/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವತ್ಸರಾಜನ ಕಥೆ - ೧೬ # ಪುತ್ರರುಗಳನ್ನು ಇಲ್ಲಿಗೆ ಕರೆಸಿದನು. ಮುಂದೆ ನಿನ್ನ ಅಭಿಪ್ರಾಯವು ಹೇಗೆ ಇರು ವುದು ? ೨೨ ಎನಲಾ ರಾಯನು ಕೋಪವಂ ತಾಳಿ, :- ಎಲ್ಯಾ ಹಾಈವರ ಹುಡುಗನೇ, ಕೇಳು, ಯುಕ್ತವಾದ ನಡೆತೆಯಿಂದ ಈ ರತ್ನಾ ವಳಿಯನ್ನು ಕೊಟ್ಟು ವಿವಾಹವಂ ಗೆಯ್ದರ೦ತೂ ಸರಿ, ಇಲ್ಲವಾದಲ್ಲಿ ಸಿಂಹಳ ದೇಶವನ್ನು ಸಮುದ್ರದಲ್ಲಿ ಕಲಸಿ, ಕಲ ರ್ವಾಣಿಯಾದ ಆ ಕಾಂತೆಯನ್ನು ಕೈವಶಳಂ ಗೆಯ್ಯದಿದ್ದೆನಾದರೆ ನಿರ್ಮಲವಾದ ಚಂದ್ರ ಕುಲದಲ್ಲಿ ಪುಟ್ಟ ದುದಕ್ಕೆ ಫಲವೇನು ? " ಎಂದು ನುಡಿದು- ಎಲೈ ರಾಜಪುತ್ರರು ಗಳಿರಾ, ಮಾರ್ಗಾಯಾ ಸವಂ ಪರಿಹರಿಸುವರಾಗಿರಿ ” ಎಂದು ನುಡಿಯಲು ; ಗಂಧರಾಯಣನು ಸಮಸ್ತ ವಸ್ತುಗಳಿಂದ ಸಂಪೂರ್ಣವಾದ ಬಿಡದಿಯ ಮನೆಗೆ ಆ ರಾಜಪುತ್ರರುಗಳನ್ನು ಕರೆದುಕೊ೦ಡು ಪೋಗಲಾರಾಜಪುತ್ರರುಗಳು ತಮ್ಮ ಮಂತ್ರಿಯಾದ ವಸುಂಧತಿಯುಂ ಕರು- ಅಯ್ಯಾ ಮಂತ್ರಿಯೇ, ನಮ್ಮ ರತ್ನಾ ವಳಿಯು ನಮ್ಮ ಅರಮನೆಯಲ್ಲಿರುವುದಕ್ಕೆ ಯೋಗ್ಯಳಲ್ಲದೆ ಅಲ್ಲಿರುವುದು ಯುಕ್ತವಲ್ಲ. ಈ ವಾಕ್ಯವನ್ನು ಪೂಜ್ಯಳಾದ ವಾಸವದತ್ತಾ ದೇವಿಗೆ ವಿಜ್ಞಾಪನೆಯಂ ಗೆಯ್ದು ಕೆಲವು ಸಪಿಸಮೇ ಳಾದ ರತಾ ವತಿಯನ್ನು ಇಲ್ಲಿಗೆ ಕರೆದುಕೊಂಡು ಬರು ವುದು ” ಎಂದು ನುಡಿಯಲು ; ಆ ಮಂತ್ರಿಯು ಅವರು ಹೇಳಿದ ದುರುಳುತನದ ಮಾತಂ ಕೇಳಿ, ಮನನೊ೦ದು, “ ಪ್ರಥಮಚುಂಬನದಲ್ಲೇ ಹಲ್ಲುಮುರಿದ ರೀತಿ ಯನ್ನು ಮಾಡುತ್ತಲಿರುವರು. ಇನ್ನೂ ಬಂದು ನಾಲ್ಕು ಗಳಿಗೆಯಿಲ್ಲದೆ ಇದ್ದರೂ ಇವರು ಮಾಡುವ ಪಾರುಪತ್ಯವು ಬಲವಾಗಿರುವುದು, ವತ್ಸ ರಾಜನಾದರೋ, ರಾಜಾಧಿರಾಜನಾಗಿ ಶೂರ ಗ್ರೇಸರನಾಗಿರುವನು. ಮುಂದೆ ರಾಜಕಾರಗಳು ವಿರೋಧವಾಗಿ ಹೇಗೆ ಪರಿಣಮಿಸುತ್ತಿರುವವೋ ತಿಳಿಯೆನು ” ಎಂದು ಕಳವಳವಂ ಪೊಂಗುತ್ತ ಬಂದು, ಭೌಗಂಧರಾಯಣನಿಗೆ ಈ ವಾರ್ತೆಯನ್ನು ರದಗ್ಧವಾಗಿ ತಿಳಿ ಸಲು ; ಅವನು ನಸುನಗುತ್ತ-: ೧೨ ಮಂತ್ರಿಗಳೆ, ನಿಮ್ಮ ರಾಜಪುತ್ರರುಗಳು ಅವರ ಬಾಲಭಾವಕ್ಕೆ ತಕ್ಕಂಥ ಕಾವ್ಯಗಳನ್ನು ನಡೆಸುತ್ತ ಬರುವರು ” ಎ೦ದು ನುಡಿದು, ಸಭಾನಾನದಿಂದೆದ್ದು ಒರುಗುವ ವತ್ಸ ರಾಜನ ಕಿವಿಯಲ್ಲಿ ನಿಂದಾನು ವಿಂ ದರು ಹೇಳಿದ ವಾಕ್ಯವನ್ನು ಹೇಳಲು : ರಾಯನ ಕ್ರೋಧವನ್ನೂ ವಿಷಾದವನೂ ಸಹ ಪೊಂದಿ, ಮುತ್ತಿನ ಹಜಾರವಂ ಕುರಿತು ಬ೦ದು, ಭೌಗಂಧರಾಯಣ ವಸು ಭೂತಿ ವಾಸವದತ್ತೆಯರಂ ಬರುವಂತೆ ಮಾಡಿ, ವಾಸವದತ್ತೆಯಂ ಕುರಿತು ... ಎಲೆ ದೇವಿಯೇ, ನಿನ್ನ ತಮ್ಮಂದಿರಾದ ವಿಂದಾನುವಿಂದರುಗಳು ಹೇಳಿದ ವಾಕ್ಯವನ್ನು ಕೇಳಿದೆಯಾ ? ನಮ್ಮ ಅಂತಃಪುರದಲ್ಲಿ ರತ್ನಾ ವಳಿಯು ಇನ್ನು ಮೇಲೆ ಇರುವು ದಕ್ಕೆ ಯೋಗ್ಯಳಲ್ಲವೆಂತಲೂ ಜಾಗ್ರತೆಯಿಂದ ಸಿಂಹಳ ದೇಶಕ್ಕೆ ಕರೆದುಕೊಂಡು ಪೋಗಬೇಕೆಂತಲೂ ಇನ್ನೂ ಬಹಳವಾದ ದುರಾಲೋಚನೆಯಂ ಗರುವಂತೆ ಯ ತೋರುತ್ತಿರುವುದು, ಮುಂದೆ ರತ್ನಾವಳಿಯನ್ನು ಕಳುಹಿಸತಕ್ಕುದೊ ಇಲ್ಲೇ -