ಪುಟ:ವತ್ಸರಾಜನ ಕಥೆ.djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Av - ಕರ್ಣಾಟಕ ಕಾ ಕಲಾನಿಧಿ, - ಬರುವವರೆಗೂ ಸ್ವಸ್ಥಚಿತ್ತನಾಗಿರುವುದು ' ಎಂದು ನುಡಿದು, ಅಲ್ಲಿಂದ ಬರುತ್ತ ಬೀಸುವ ದೊಣ್ಣೆಗೆ ತಲೆತಪ್ಪಿದರೆ ಸಾಸಿರಬರಿಸವೆಂಬ ಗಾದೆಯು ಈಗ ಯುಕೆ ವಾಯಿತು. ರಾಯನಿಗೆ ಬರಿಯ ಪೌರುಷವನ್ನು ಪೇಳಿ ಬಂದೆನು, ಬಂಗಿಯಂ ತಿಂದಂತೆ ಕಣ್ಣು ಗಳ೦ ಕೆಂಪುಗೂಡಿಸಿರುವ ನಿಂದಾನುವಿಂದರುಗಳ ಸಮೀಪಕೆ ಹೇಗೆ ಪೋಗಬೇಕು ? ೨) ಎಂದು ಯೋಚಿಸುತ್ತ, ಬರುತಿರ್ದನು. ಎಂಬಲ್ಲಿಗೆ ಶಿ ಕೃಷ್ಣರಾಜ ಕಂಠೀರವರಿಂ ಲೋಕೋಪಕಾರಾದ್ಧಮಾಗಿ | ನವರಸಭರಿತವಾಗಿ ಕರ್ಣಾಟಕ ಭಾಷೆಯಿಂದ ವಿರಚಿಸಲ್ಪಟ್ಟ ಶ್ರೀಕೃಷ್ಯರಾಜ ಸೂಕ್ತಿ ಮುಕ್ತಾವಳಿಯೆಂಬ ಗ್ರಂಥದೊಳ ಹದಿನೆಂಟನೆಯು ಗುಚ್ಛಂ ಸಂಪೂರ್ಣ೦.

ಹತ್ತೊಂಭತ್ತನೆಯ ಗುಚ್ಚ ೦. ಅನಂತರದಲ್ಲಿ ಬಹಳವಾಗಿ ವಿದೂಷಕನು ಯೋಚಿಸುತ್ತ ಬರುತ್ತಿರಲು ; ಸುಸಂಗತೆಯು ಅನೇಕವಾದ ಆಭರಣಗಳಿಂದ ವಿಭೂಷಿತಳಾಗಿ ಅತ್ಯಂತ ಸಂತೋಷ ದಿಂದ ಕೂಡಿ ನಿಂದಾನುಸಿ೦ಗರಿರುವ ಮನೆಯಿಂದ ಹೊರಟುಬರುತ್ಯ, ಚಿಂತಾಕ್ರಾಂತ ನಾಗಿ ಬರುವ ವಿದೂಷಕನಂ ಕಂಡು, (ಎಲೈ ವಸಂತಕನೇ, ಏನು ಕಾಣದಿಂ ಚಿ೦ ತೆಯಿಂದೊಡಗೂಡಿ ಬರುವನಂತೆ ತೋರುತ್ತಿರುವೆ ? ” ಎನಲು; ಅವನು ಉದ್ದವಾಗಿ ಉಸಿರಂ ಬಿಟ್ಟು, 4 ಎಲೆ ಕಾಂತೆಯೇ, ಕೇಳು, ರಾಜಸೇವೆಯೇ ಬಹಳ ಕಷ್ಟ ವಾಗಿರುವುದು ಅದರಲ್ಲ ಸ್ತ್ರೀಯರ ಮಧ್ಯಸ್ಸು ಮತ್ತೂ ಪ್ರಾಣಕಷ್ಟವಾದುದು. ಈಗ ರಾಯನು ವಿಂದಾನುವಿಂದರುಗಳ ಶಿರಸ್ಸನ್ನು ಛೇದಿಸುತ್ತೇನೆಂದು ಖಡ್ಡ ವಂ ಕರದಲ್ಲಿ ಪಿಡಿದಿರುವನು. ರಾಂರನಲ್ಲಿ ರತ್ನಾ ವಳಿಯ ಅನುರಾಗವಂ ಬಿಟ್ಟು ತನ್ನ ಅಣ್ಣಂದಿರಂ ಸೇರಿ ಸಿಂಹಳದೇಶಕ್ಕೆ ಹೇಗೆ ಪೋಗುತ್ತಲಿರುವಳೆಂದು ಕಾಲರುದ್ರ ನಂತೆ ಕುಳಿತು ಇದ್ದಾನೆ. ನಾನು ಆ ರತ್ನಾವಳಿಯ ಅಭಿಪ್ರಾಯವಂ ಚೆನ್ನಾಗಿ ತಿಳಿ ದು ಬರುತ್ತೇನೆಂದು ಬಂದೆನು. ಮುಂದೆ ರಾಜಕಾರಿಗಳು ಹೇಗೆ ವಿರೋಧವಂ ಪೊಂದುವುವೋ ತಿಳಿಯದು. ನಾನು ಎಲ್ಲಿಗಾದರೂ ಕಾಲಿಗೆ ಬುದ್ದಿ ಹೇಳಬೇಕೆಂದು ಇದ್ದೇನೆ. ಈಗ ಯಾವುದಾದರೂ ಒಂದು ಉಪಾಯವಂ ಗೆಯ್ದು ರಾಯನಂ ಸ: ತೈಸಬೇಕು” ಎಂದು ನುಡಿಯಲು ; ಸುಸಂಗತೆಯು - ಅಯ್ಯಾ ವಿದೂಷಕನೇ,