ಪುಟ:ವತ್ಸರಾಜನ ಕಥೆ.djvu/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವಕ್ಕರಾಜನ ಕಥೆ, - ೧t ಕೇಳು, ಸೂರನು ಪಶ್ಚಿಮದಲ್ಲಿ ಉದಯಿಸಿದರೂ ನಮ್ಮ ರತ್ನಾ ವಳಿಯು ರಾಯ ನಲ್ಲಿ ಅನುರಾಗವಂ ಬಿಟ್ಟಿರಳು, ಈಗ ಪೇಳಿರುವ ಅಭಿಪ್ರಾಯವೂ ಇದೆ ” ಎಂದು ಸಮಸ್ತ ಸಂಗತಿಯನ್ನೂ ಅವನ ಕಿವಿಯಲ್ಲಿ ಹೇಳಿ, “ ನೀನು ಈ ಸಂಗತಿಯನ್ನು ರಾಯನಿಗೆ ಬಿನ್ನಿಸಲು ಪೋಗುವನಾಗು, ನಾನು ದೇವಿಗೆ ವಿಜ್ಞಾಪಿಸುವೆನು ? ಎಂದು ಪೋಗಲು; ಅವನು ಅಧಿಕ ಹೃಷ್ಟನಾಗಿ ರಾಯನ ಸಮೀಾನವಂ ಸೇರಿ, ನಗುತ್ಯ, ಎಲೈ ರಾಜೇಂದ್ರನೇ, ಯಾವ ಕಾವ್ಯವನ್ನಾಗಲಿ ಯೋಚಿಸದೆ ಮಾಡಿದಲ್ಲಿ ಬಹಳ ವಿಪತ್ತಿಗೆ ಕಾರಣವಾಗುವುದು. ಈಗ ರತ್ನಾ ವಳಿಯು ದೇವಿಗೆ ವಿಜ್ಞಾಪಿಸುವಂತೆ ಸುಸಂಗತ ಯೊಡನೆ ಪೇಳಿ ಕಳುಹಿಸಿರುವುದೇನೆಂದರೆ- ಯಾವಾಗ ನೀವು ಸ್ವಂತವಾದ ಆಭರ ಣಗಳಿಂದ ಅಲಂಕರಿಸಿ ರಾಜೇಂದ್ರನ ಹಸ್ತಕೆ ಒಪ್ಪಿಸಿದಿರೋ ಆಗಲೇ ನಾನು ಪತ್ನಿ ಪದವಿಯಂ ಪಡೆದೆ ಈಗ ರಾಯನಂ ಹೊರತು ಈ ಭೂಮಂಡಲದಲ್ಲಿರುವ ದೊರೆ ಗಳೇ ಮೊದಲಾದ ಗಂಡುಪ್ರಾಣಿಗಳು ಎನಗೆ ತಂದೆಗಳೆಂತಲೂ ಸಹೋದರರೆಂತಲೂ ನಿಶ್ಚಯಿಸಿ ಇದ್ದೇನೆ, ಆದರೂ ಲೋಕದಲ್ಲಿ ಜನನಿಯ ಜನ್ಮಭೂಮಿಯ ಪ್ರಾಣ ಗಳಿಗಿಂತಲೂ ಪ್ರೇಮಾಸ್ಪದಗಳೆಂದು ಹೇಳುವ ವಾಕ್ಯವು ಸತ್ಯವಾದುದರಿಂದಲೂ, ಸಿಂಹಳ ದೇಶದಲ್ಲಿರುವ ವೈಭವಗಳೆಲ್ಲವನ್ನೂ ನಿಮಗೆ ತೋರಿಸಿ ವಿಧ್ಯುಕ್ತವಾಗಿ ವಿವಾಹವಾಗಿ ರಾಯನೊಡನೆ ಕೂಡಿದ ನಿಮ್ಮ ಪಾದಪೂಜೆಯನ್ನು ನಮ್ಮ ಅರಮನೆ ಯಲ್ಲಿ ಮಾಡಬೇಕೆಂಬ ಕುತೂಹಲವು ಬಲವತ್ತರವಾಗಿರುವುದರಿಂದಲೂ, ಈಗ ಸಿಂಹಳದೇಶಕ್ಕೆ ಪೋಗಲಿಚ್ಛೆಸಿರುವೆನು. ಇದರ ಮೇಲೆ ಆಣ್ಣೆಯಾದಂತೆ ನಡೆದು ಕೊಳ್ಳುವೆನು' ಎಂದು ಹೇಳಿರುವ ವಾರ್ತೆಯನ್ನು ಸುಸಂಗತೆಯು ಹೇಳಿದಳು ” ಎಂದು ಬಿನ್ನಿಸುತ್ತಿರುವಷ್ಟರಲ್ಲೇ ವಾಸವದತ್ತಾದೇವಿಯು ಸುಸಂಗತೆಯ ಕೈಲಾಗವಂ ಪಿಡಿದು ರಾಯ.ನಿರುವ ಆಸ್ಟ್ಯಾನವಂ ಕುರಿತು ಬ೦ದು ರತ್ನಾ ವಳಿಯ ಅಭಿಪ್ರಾಯಗಳೆಲ್ಲ ವನ್ನೂ ಬಿಸಿ-ಮಹಾರಾಜೇಂದ್ರನೇ, ಸ್ತ್ರೀಯರಿಗೆ ತೌರುಮನೆಯಲ್ಲಿ ಬಲವಾದ ಅಭಿಮಾನವಿರುವುದರಿಂದಲೂ, ವಿಕ್ರಮಬಾಹ, ರಾಯನು ಒಹುದೇಶಕೆ ಅಧಿಸತಿಯಾ ಗಿರುವುದರಿಂದಲೂ ವಿಧ್ಯುಕ್ತವಾಗಿ ವಿವಾಹವಾಗುವುದು ಯುಕ್ತವಾಗಿರುವುದು. ರತ್ನಾ ವಳಿಯು ಸಿಂಹ ದೇಶಕೆ ಪೋಗುವಂತೆ ಅಪ್ಪಣೆಯನ್ನೀ ಯುವನಾಗು ” ಎಂದು ಬೇಡಿಕೊಳ್ಳಲು ರಾಯನು ಎಲೆ ಕಾಂತೆಯೇ, ನಿನ್ನ ಚಿತ್ತಕೆ ಹೇಗೆ ಅಭಿಮತ ವೋ ಆ ರೀತಿಯಿಂದ ಕಾವ್ಯಗಳನ್ನು ನಡೆಸಬಹುದು ?” ಎಂದು ದ್ರಾಕ್ಷಿಣ್ಯವನ್ನು ಮೀರ ಲಾರದೆ ನುಡಿಯಲು ; - ಅಷ್ಟರಲ್ಲೇ ನಿಂದಾನುವಿಂದರು ಸಿಂ ಹಳದೇಶಕ್ಕೆ ಪೋಗುವಂತೆ ಅಪ್ಪಣೆಯಂ ಕೇಳಬೇಕೆಂದು ರಾಯನ ಸಮೀಾ ಸಳ ರತ್ನಾ ವಳಿಯನ್ನು ಕರೆದುಕೊಂಡುಬರಲು , ರಾಯನು ದೂರದಲ್ಲಿ ಮಿಂಚಿನ ಬಳಿ ಯು ಕೈ ಕಾಲುಗಳಂ ಪಡೆದು ಬರುವುದೋ ೯. 5}}