ಪುಟ:ವತ್ಸರಾಜನ ಕಥೆ.djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೦ - ಕರ್ಣಾಟಕ ಕಾವ್ಯಕಲಾನಿಧಿ, - ಎಂಬಂತೆ ಮೂರು ಲೋಕವಂ ಸೂರೆಗೊಳ್ಳುತ್ತ ಬರುವ ರತ್ನಾ ವಳಿಯಂ ಕಂಡು ಇಂಥ ಕಂತೆಯನ್ನು ಅಗಲಿ ಎಂತು ಪ್ರಾಣಧಾರಣೆಯಂ ಮಾಡಬಹುದೆಂದು ಆಲೋ ಚಿಸುತ್ತಿರಲು ; - ಅಷ್ಟರಲ್ಲೇ ರತ್ತಾ ವಳಿಯು, ವಿಂದಾನುವಿಂದರು ಅಪ್ಪಣೆಯಂ ಕೇಳಿ ಹೊರಸಾ ರಿದ ಬಳಿಕ ಮುಂದು ಸಾರಿಬಂದು, ಬಳುಕುವ ನಡುವಿನಿಂದಲೂ ಕುಲುಕುವ ಕುಚ ಗಳಿ೦ದಲೂ ತುಳುಕುವ ಅನುರಾಗದಿಂದಲೂ ಯುಕ್ತಳಾಗಿ, ತೋರಮಲ್ಲಿಗೆಯ ಹಾರ ಗಳು ಕುಡದಿಂದ ಮುಂದುದೋರಿ ಪರಿಮಳವ ಉಬ್ಬೇರಿಸುವಂತೆ ಮಂಡಿಗಳನ್ನೂರಿ ವೈಯ್ಯಾರವ ತೋರಿ ಅದೇನೋ ಒ೦ದು ಹೊಸಪರಿಯಾದ ವೈಖರಿಯ೦ ಬೀರಿ ನಮಸ್ಕಾರ ನಂ ಗೆಯ್ದು ಸುಸಂಗತೆಯ ಹಿಂಬಾಗವಂ ಸೇರಿ ಮಾರುಮಾರುದ್ದಗಳಾಗಿ ಕಾನನ ಕಮಲಶರಂಗಳಾ ಕಾರನುಂ ಬೀರುತ್ತಲಿರುವ ಓರೆನೋಟಗಳಂ ಬೀರುತ್ಯ ನಿಂದು, ವಾಸವದತ್ತಾ ದೇವಿಯಂ ಕುರಿತು, 1 ಎಲ್ ಪೂಜ್ಯಳಾದ ದೇವಿಯೇ, ರಾಯನ ಅಡ್ಡೆಯಂ ಕೊಡಿಸಿದ ಸಿಂಹಳದೇ ಶಕ್ಕೆ ಪೋಗಿ ಇದೊಂದು ಬಾರಿ ಮಾತಾಪಿತೃಗಳಿಗೆ ಹೆರಳ ಾದ ಉತ್ಸವವ ಬೀರಿ ಬರುವೆನು ” ಎಂದು ಮೃದು ಮಧುರವಾಈವಂ ಪೇಳಲಾದೇವಿಯು _ ಎಲೆ ರತಾ ವಳಿಯೇ, ಮಹಾರಾಜೇಂ ಡ್ರನೆ ಫುರೋ ಭಾಗದಲ್ಲಿ ಸುಶೋಭಿಸುತ್ತಿರುವಲ್ಲಿ ಎನ್ನನ್ನು ಕುರಿತು ಏಕೆ ಉತ್ತರವಂ ಕೇಳುತ್ತಲಿರುವೆ ? ೨) ಎಂದು ನುಡಿಯಲಾರಾ ವಳಿಯು ರಾಯನಂ ಕುರಿತು ವಿಜ್ಞಾಪಿಸುವುದಕ್ಕೆ ವಿಶೇಷವಾದ ಲಟ್ಟೆಯಂ ಪೊಂದಿ ನಿಂದಿರಲಾರಾ ಯನು ಅವಳ ಅಭಿಪ್ರಾಯಮಂ ತಿಳಿದು, ವಾಸವದತ್ತಾದೇವಿಯಂ ಕುರಿತು ಎಲೆ ಕಲ್ಯಾಣಿಯೇ, ರತ್ನಾ ವಳಿಯು ಸಮುದ್ರವನ್ನು ದಾಂಟ ಬಹುದೂರವಾಗಿ ಪೋಗಬೇಕಾಗಿರುವುದು. ಎನ್ನಿ ಂದ ಏಕೆ ತಡವುಂಟಾಗಬೇಕು, ಅಪ್ಪಣೆಯನ್ನಿತ್ತು ಕಳುಹಿಸಬಹುದು, ಮತ್ತು ತನ್ನ ತೌರುಮನೆಗೆ ಪೋಗುವುದಕ್ಕೆ ನಮ್ಮ ಅಪ್ಪಣೆಯಂ ಕೇಳುವ ಪ್ರಕೃತವಿಲ್ಲ, ಲೋಕದಲ್ಲಿ ಸ್ತ್ರೀಯರುಗಳು ಸ್ವಕಾರಗಳಲ್ಲಿ ನಿಪುಣರಾಗಿ ಪರರ ಸಂತಾಪವನ್ನು ತಿಳಿ ದರೂ ತಿಳಿಯದಂತೆ ನಟಿಸುವುದು ಸ್ವಧರ್ಮವಾಗಿರುವಲ್ಲಿ ವಿಶೇಷವಾಗಿ ಪೇಳತಕ್ಕು ದೇನಿರುವುದು? ' ಎಂದು ನುಡಿಯಲು ; ರತ್ನಾ ವಳಿಯು- ಎಲೈ ಅಯ್ಯನೇ, ಕೇಳು, ಪ್ರಕಾರಗಳಲ್ಲಿ ನಿರತರಾಗಿರುವುದು ಸ್ತ್ರೀಯರೇ ಪುರುಷರೋ ಎಂಬು ವಂಥದು ಕಾಲ್ಯಾ೦ತರದಲ್ಲಿ ಕಾಣಬೇಕು, ಆದರೆ ಈಗ ಅಣ್ಣಂದಿರುಗಳು ಎನ್ನ ಆಗಮನವನ್ನು ಇದಿರು ನೋಡುತ್ತ ಕಾದಿರುವರು ?” ಎಂದು ನುಡಿಯಲು ; ದೇವಿ ಯು ಕಾಂಚನಮಾಲೆಯು ತಂದ ಗಂಧ ತಾಂಬೂಲ ಪುಷ್ಟ ಕುಂಕುಮಗಳಿಂದ ರತಾ ವಳಿಯನ್ನು ಅಲಂಕುಸಿ, ಬಿಡುಮುತ್ತಿನ ಅಕ್ಷತೆಯಂ ಅವಳ ಶಿರದಲ್ಲಿ ತಳಿದು, (ಎಲೆ ಭದ್ರಾ೦ಗೀ, ನೀನು ಬಯಸಿರುವ ಬಯಕೆಯು ನಿಮ್ಮ ವಿಲ್ಲದೆ ಕೊನೆಮುಟ್ಟ © ! ೨” ಎಂದು ಶ್ರೀರಾದನಂ ಗೆಯ್ಯಲು ; ವಿದೂಷಕನು-- ಎಲೌ ದೇವಿಯೇ,