ಪುಟ:ವತ್ಸರಾಜನ ಕಥೆ.djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬ ಕರ್ನಾಟಕ ಕಾವ್ಯ ಕಲಾನಿಧಿ, - ಸೌಭಾಗ್ಯಕೆ ಭರಣಿಯಂತೆ ಕಲ್ಯಾಣಗುಣದ ಮಂಡಪದಂತೆ ಕಾಮಿತಾರ್ಥದ ಕೈಬೊ ಕಸದಂತೆ ಕುಶಲವಿದ್ಯೆಗಳಿಗೆ ಕುಶಲಗೃಹದಂತೆ ಒಮ್ಪತಿರ್ದ ರತ್ನಾ ವಳಿಯಂ ಸಿಂಹ ಇದೇಶಕೆ ಕಳುಹಿಸಿ ಈ ರೀತಿಯಾದ ವಿಯೋಗದುಃಖವನ್ನು ಪೊಂದಬೇಕಾಗಿರು ವುದು, ಇಲ್ಲವಾದಲ್ಲಿ ಆ ವಿಂದಾನುವಿಂದರುಗಳ ದೇಹವನ್ನು ದಿಗ್ಗಲಿಯಂ ಗೆಯು ಮುಗ್ಗಾ ಯಾದ ರತ್ನಾ ವಳಿಯಲ್ಲಿ ಪರಿಪರಿಯಾದ ಸುಖವಂ ಪೊಂದಿ ಸುಖದಿಂದಿ ರುವೆನು ?” ಎಂದು ನುಡಿಯಲಾ ವಸಂತಕನು- ಅಯ್ಯಾ ರಾಜೇಂದ್ರನೇ, ಚಿತ್ರ ದಲ್ಲಿ ಕೋಪವಂ ಪೊಂದದೆ ಇದ್ದರೆ ಕೆಲವು ವಾಕ್ಯವನ್ನು ಬಿನ್ಲೈಸುವೆನು, ಕೇಳು. ಲೋಕದಲ್ಲಿ ಪ್ರಜೆಗಳು ದೊರೆಯಾದವನು ಪಾಪಿಯಾದರೆ ಅವರು ಪಾಸವಂ ಗೆಯ್ಯು ವರು, ಕಾಮಿಯಾದರೆ ಅವರು ಕಾಮುಕರಾಗುವರು, ಧರಾತ್ಮನಾದರೆ ಅವರು ಧರಿ ವ್ಯರಾಗುವರು. ಹೇಗೆಹೇಗೆ ಪ್ರಭುತ್ವವಂ ಮಾಡುವನು ಆಗುತ್ತಲಿರುವನೋ ಆರೀ ತಿಯಾಗಿ ಪ್ರಜೆಗಳೂ ಅನುವರ್ತಿಸುತ್ತಿರುವರು. ಮತ್ತು ಬೃಹಸ್ಪತಿ ಶುಕ್ರಾಚಾ ರರು ಮೊದಲಾದ ನೀತಿಶಾಸ್ತ್ರವಂ ಬಲ್ಲವರು ಪ್ರಭುವಾದವನು ಜಿತೇಂದ್ರಿಯನಾ ಗಿಯ, ಶೂರನಾಗಿಯ, ಪ್ರಜಾರಂಜಕನಾಗಿಯ, ನೀತಿಶಾಸ್ತ್ರಜ್ಞನಾಗಿಯೂ, ಧರಾಧರಗಳನ್ನು ಬೇರ್ಪಡಿಸುವಲ್ಲಿ ಸಮರ್ಥನಾಗಿಯೂ, ಕೀರ್ತಿಯಂ ಕಾಮಿಸುವ ನಾಗಿಯೂ, ಲೋಕಾಪವಾದದಲ್ಲಿ ಭೀತಿಯುಳ್ಳವನಾಗಿಯೂ, ಶುಭಯಂಕರನಾ ಗಿಯೂ, ತ್ಯಾಗಿಯಾಗಿಯೂ, ಮಂತ್ರಿಸಮ್ಮತವಾಗಿಯೂ, ದಯಾಪರನಾಗಿಯ, ಗಾಂಭೀರಯುಕ್ತನಾಗಿಯ, ಉತ್ಸಾಹಪ್ರಿಯನಾಗಿಯ, ವಿಚಕ್ಷಣನಾಗಿಯೂ, ಇಂಗಿತಜ್ಞನಾಗಿಯೂ, ಇವು ಮೊದಲಾದ ಅನಂತ ಕಲ್ಯಾಣಗುಣಗಳಿಂದ ವಿಭೂಷಿತ ನಾಗಿಯೂ ಇರಬೇಕೆಂತಲೂ, ಯಾವುದೊ೦ದು ತನ್ನ ರಹಸ್ಯಕಾರವನ್ನೂ ಪರರಿಗೆ ತೋರ್ಪಡಿಸದೆ ಯಾವ ಕೆಲಸವನ್ನಾ ದರೂ ಬಾಯಿಂದಾಡದೆ ಮಾಡಿತೋರಿಸುತ್ತ, ಮರೆತಾದರೂ ಅನುಚಿತವಾಕ್ಯವಂ ನುಡಿಯದೆ, ಪರಿಪರಿಯಾದ ವಿಪತ್ತುಗಳು ಬಂದು ಒದಗಿದರೂ ಧೈರವ ಬಿಡದೆ, ಮಿತಭಾಷಿಯಾಗಿ ಮಿತಾಹಾರಿಯಾಗಿ ಪ್ರಜೆಗಳೇ ತನ್ನ ಪುತ್ರರೆಂದು ತಿಳಿದು ಅವರಿಗೆ ಅಡ್ಡೆಸುವ ಕೋಟಲೆಗಳನ್ನು ಒರಿ ಗೆಯ್ಯುತ್ತ, ತುಂಬಿಯು ಪುಷ್ಪವು ಕ೦ದದ೦ತೆ ಮಕರಂದರಸವಂ ಪೀರುವಂತೆ ಪಣ ಗಳಂ ಗಳಿಸುತ್ಯ, ದ್ರವ್ಯಾಥ್ಯನಾಗಿರಬೇಕೆ೦ತಲೂ ಹೇಳುತ್ತಿರುವರು. ಈಗ ನೀನು ಒಬ್ಬ ರತ್ನಾವಳಿಗೋಸ್ಕರವಾಗಿ ನಿನಗೆ ಸಮಾನನಾದ ವಿಕ್ರಮಬಾಹುರಾಯನ ಪುತು ರಾದ ವಿಂದಾನುವಿಂದರಂ ಸಂಹರಿಸಿದಲ್ಲಿ ಲೋಕಾಪವಾದವು ಬಲವಾಗಿ ಬರುತ್ತಿರು ವದು, ಲೋಕದಲ್ಲಿ ಅಪಕೀರ್ತಿಗಿಂತಲೂ ಮೃತ್ಯುವಿಲ್ಲ, ಯಾವುದೊಂದು ನೆವ ದಿಂದಾದರೂ ಸ್ಪಲ್ಪವಾದರೂ ಅಪಕೀರ್ತಿಯು ಪ್ರಾಪ್ತವಾದಲ್ಲಿ ಮರಣಾಂತವಾಗಿ ಪೋಗುವುದೇ ಹೇಳು ? ಕೋಪ ಬಂದಲ್ಲಿ ಕ್ಷಮೆಯಂ, ವಿಪತ್ತು ಬಂದಲ್ಲಿ ಧೈರವಂ, ಸರರು ಕ್ಷುದ್ರವಂ ಪೇಳಿದಲ್ಲಿ ವಿಚಾರವಂ, ಲೋಕಾಪವಾದದಲ್ಲಿ ಭೀತಿಯಂ, ಪ್ರಜೆಗ