ಪುಟ:ವತ್ಸರಾಜನ ಕಥೆ.djvu/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವತ್ಸರಾಜನ ಕಥೆ, ೧೩ ಳಲ್ಲಿ ಅನುರಾಗವಂ, ಶತ್ರುಗಳಲ್ಲಿ ಪರಾಕ್ರಮವಂ, ದೇವಬ್ರಾಹ್ಮರಲ್ಲಿ ಭಕ್ತಿಯಂ, ಸುಖದುಃಖಗಳಲ್ಲಿ ಸಮಾನಬುದ್ದಿಯಂ, ಸಹ ತಾಳಿ ರಾಜ್ಯಭಾರವಂ ಗೆಯ್ಯುವನೇ ಉತ್ತಮನಾದ ದೊರೆಯೆಂದು ಪ್ರಸಿದ್ದಿಯ೦ ಪೊಂದುವನು. ಎನಗೆ ಬಾಲ್ಯದಿಂದ ಲೂ ಬಲವತ್ತರವಾದ ಸಲುಗೆಯು ಇರುತ್ತಿರುವುದರಿಂದ ಈ ರೀತಿಯಾದ ವಾಕ್ಯವನ್ನು ಪೇಳಿರುವೆನು. ಲೋಕದಲ್ಲಿ ದೊರೆಯಾದವನಿಗೆ ನೀತಿಗೂಡಿ ಮುಂದಕೆ ಹಿತವಾದ ವಾಕ್ಯವಂ ಪೇಳುವ ಪುರುಷನು ದುರ್ಲಭನು, ಅಥವಾ ಪೇಳಿದಾಗೂ ಆ ವಾಕ್ಯ ವು ಹಿತಕರವಾದುದು ಎಂದು ತಿಳಿದು ನಡೆಯುವ ದೊರೆಯು ದುರ್ಲಭನಾಗಿರುವನು. ಯುಕ್ತವಾಗಲಿ ಅಯುಕ್ತವಾಗಲಿ ಯಾವ ಕಾರವನ್ನು ಪ್ರಭುವಾದವನು ಪೇಳುವ ನೋ ಪ್ರತಿಧ್ವನಿಯನ್ನಿ ಯುವ ದೇವಾಲಯಗಳ೦ತೆ ಸತ್ವ ಜನರೂ ಆ ವಾಕ್ಯವನ್ನೆ ಶ್ಲಾಘನೆಯಂ ಗೆಯ್ಯುತ್ತಿರುವರು. ಈಗ ಸಿ೦ಹಳದೇಶಕ್ಕೆ ಪೋಗಿ ರತ್ನಾ ವಳಿಯಂ ನಿನಗೆ ಕೊಟ್ಟು ವಿವಾಹವಂ ಗೆಯ್ಯದೆ ಇನ್ನೊಬ್ಬ ದೇಶದ ರಾಯನಿಗೆ ಕೊಡು ಇದ್ದಲ್ಲಿ ಆ ವಾರ್ತೆಯನ್ನು ಆಕ್ಷಣದಲ್ಲಿ ಬರೆದು ಕಳುಹಿಸುವಂತೆ ಗೂಢಚಾರರಂ ಕಳುಹಿಸುವುದಲ್ಲದೆ ಈಗ ಊಳಿಗಮಂ ಗೆಯ್ಯುವುದಕೆಂದು ಸುಸಂಗತೆ ಮೊದಲಾದ ಹೆಣ್ಣು ಗಳಂ ಕಳುಹಿಸಿದಂತೆ ಬೆನ್ನು ಗಾವಲಿಗೆಂದು ಶೂರರಾದ ಕೆಲವು ಸೇನೆಯನ್ನು ಜತೆಗೊಳಿಸಿ ಕಳುಹಿಸಿ, ಒಳಗುಟ್ಟಿನಲ್ಲಿ ರತ್ನಾ ವಳಿಯನ್ನು ಇನ್ನೊಬ್ಬ ರಾಯನಿಗೆ ಕೋ ಡುತ್ತ ಇದ್ದಲ್ಲಿ ಆ ಕಾರಕೆ ನಿರೋಧವಂ ಗೆಯು ಇಲ್ಲಿಗೆ ವಾರ್ತೆಯಂ ಕಳುಹಿಸುವಂ ತೆಯ ಅದುವರೆಗೂ ಅಲ್ಲೇ ಇರುವಂತೆಯ ಪೇಳಿ ಕಳುಹಿಸುವುದು ಯುಕ್ತವಾಗಿ ರುವುದು ' ಎಂದು ಬಿನ್ನೆಸಲು ; ರಾಯನು ವಿದೂಷಕನು ಪೇಳಿದ ವಾಕ್ಯವನು ಯುಕ್ತವೆಂದು ತಿಳಿದು ಅವನಂ ಕುರಿತು, ( ಅಯ್ಯಾ ವಿದೂಷಕನೇ, ಈಗ ನೀನು ಪೇಳಿದಂತೆ ಕೇಳುವೆನು. ಕೆಲವು ಸೇನೆಯಂ ಕಳುಹಿಸುವಂತೆ ಮಂತ್ರಿಯಾದ ಯೌಗಂಧರಾಯಣನಿಗೆ ಹೇಳುವುದು ” ಎಂದು ಅಪ್ಪಣೆಯನ್ಶಿಯಲು ; ಅವನು ಅದೇ ರೀತಿಯಿಂದ ಮಂತ್ರಿಯಂ ಕುರಿತು ಪೇಳಲೋಸುಗ ಫೋಗಲು; ರಾಯನು ರತ್ನಾ ವಳಿಯನ್ನ ಹೃದಯದಲ್ಲಿ ಸ್ಮರಿಸುತ್ತ ಒಂದು ದಿನವನ್ನು ಯುಗವನ್ನಾಗಿ ಕಳೆಯುತ್ತಿರಲು ; - ಇತ್ತಲು, ರತ್ನಾ ವಳಿಯು ಜೈಷ್ಟರಾದ ವಿಂದಾನುವಿಂದರುಗಳಂ ಪೊಂದಿ ಹಡ ಸ್ನೇರಿ ಸಮುದ್ರ ಮಧ್ಯದಲ್ಲಿರುವ ಸಿಂಹಳದೀಪವೆಂಬ ಪದಕಕ್ಕೆ ಮಧ್ಯನಾಯಕಮಣಿ ಯಂತೆ ಮೆರೆಯುವ ರತ್ನ ಪುರವಂ ಪೊಂದಿ, ಕಮಲಾವಳಿ ವಿಕ್ರಮಬಾಹುರಾಯರ ಪಾದಪದ್ಯಂಗಳಿಗೆ ನಮಸ್ಕಾರವಂ ಗೆಯ್ದು ನಿಂದಿರಲಾವಿಕ್ರಮಬಾಹುರಾಯನು ಸಂತೋಷಸಮುದ್ರದಲ್ಲಿ ಮುಳುಗಿ, ಆದಿಲಕ್ಷ್ಮಿಯಂತೆ ಒತ್ತಿನಲ್ಲಿ ಒಪ್ಪುತಿರ್ದ ಮಗ ಳನ್ನು ತೊಡೆಯಮೇಲೆ ಕುಳ್ಳಿರಿಸಿಕೊಂಡು ಮುಡಿಯನ್ನು ತಡಹುತ್ತ, ಇಲ್ಲಿಂದ ಪೋ ದುದು ಮೊದಲಾಗಿ ಮರಳಿ ಬರುವವರೆಗೂ ನಡೆದ ವೃತ್ತಾಂತವನ್ನೂ ವತ್ವರಾಜ