ಪುಟ:ವತ್ಸರಾಜನ ಕಥೆ.djvu/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೪ - ಕರ್ಣಾಟಕ ಕಾಠ್ಯಕಲಾನಿಧಿ, - ನೊಬ್ಬನಲ್ಲದೆ ಕಡಮೆಯಾದ ಭೂಪತಿಯರ ವಿವಾಹವಾಗುವುದಿಲ್ಲವೆಂಬ ರತ್ನಾ ವಳಿ ಯ ಪ್ರತಿಜ್ಞೆಯನ್ನೂ ಸಹ ನಿಂದಾನುವಿಂದರುಗಳಿ೦ದ ಕೇಳಿ, ಮನದಲ್ಲಿ ಅಧಿಕವಾದ ಆನಂದವಂ ಪೊಂದಿ, ಮಗಳಂ ಕುರಿತು, ( ಎಲೆ ಕಲ್ಯಾಣಿಯಾದ ರತ್ನಾ ವಳಿಯೇ ಏನು ವಿಪತ್ತುಗಳು ಬಂದಾಗೂ ಧೈರವಂ ಬಿಡದೆ ನಿನ್ನ ಪಾತಿವ್ರತ್ಯವಂ ಸಂರಕ್ಷಿಸಿ ವತ್ಸ ರಾಜನನ್ನೆ ಒಪ್ಪಿಕೊಂಡಿರುವ ನಿನ್ನ ಮನೋನಿಶ್ಚಯವು ನಮ್ಮ ವಂಶಕ್ಕೆ ಬಹಳ ವಾದ ಪ್ರತಿಷ್ಠೆಯನ್ನು ೦ಟುಮಾಡಿದುದು ' ಎಂದು ನುಡಿಯಲು ; ಕಮಲಾವಳಿಯು ವಿಂದಾನುವಿಂದರಂ ಕುರಿತು- ಎಲೈ ಪುತ್ರರುಗಳಿರಾ, ನಿಮ್ಮ ತಂಗಿಯಾದ ರತ್ನಾ ವಳಿಗೆ ವತ್ಸ ರಾಜನ ಸಿವಾಹವನ್ನು ಈ ನಮ್ಮ ರತ್ನ ಪುರಿಯಲ್ಲೇ ಮಾಡಬೇಕೆಂಬ ಕುತೂಹಲದಿಂದ ಇವಳನ್ನು ಇಲ್ಲಿ ಕರೆದುಕೊಂಡು ಬಂದಿರುವುದಾಗಿ ತೋರು ವುದು ” ಎನಲು ; ಮಂತ್ರಿಯಾದ ವಸುಭೂತಿಯು ಎಲೌ ದೇವಿಯೇ ಕೇಳು, ವಿವಾಹವಾಗತಕ್ಕಂಥ ವರನು ಹೆಣ್ಣಿನವರ ಮನೆಗೆ ಒಂದು ಮದುವೆಯಾಗುವುದು ಲೋಕದಲ್ಲಿ ಯುಕ್ತವಾಗಿರುವುದು, ದರಿದ್ರರಾದ ಜನರು ತಮ್ಮಲ್ಲಿ ಹುಟ್ಟಿದ ಕನ್ಯ ಯನ್ನು ಗಂಡಿನ ಮನೆಗೆ ಕಳುಹಿಸಿ ಮದುವೆಯನ್ನು ಆಗಮಾಡಿಸುತ್ತಿರುವರು ?” ಎಂದು ಬಿನ್ಲೈಸಲು ; ವಿಕ್ರಮಬಾಹುರಾಯನು ಹರ್ಷಭರಿತನಾಗಿ, ( ಎಲ್ವೆ ಮಂತ್ರಿಷ್ಟ ನೇ, ಶುಭಸ್ಯ ಶೀಘ್ರವೆಂಬ ನ್ಯಾಯವಿರುವುದರಿಂದ ವತ್ಸ ರಾಜನು ರತ್ತಾ ವಳಿಯ ವಿವಾಹಕೋಸುಗವಾಗಿ ಶುಭದಿವಸದಲ್ಲಿ ನಮ್ಮ ರತ್ನ ಪುರಿಗೆ ಬಂದು ಸೇರುವಂತೆ ಮಾನದೊಡಗೂಡಿ ಎನ್ನ ಹೆಸರಿಗೆ ಒಂದು ಪತ್ರಿಕೆಯನ್ನು ಬರೆಯುವನಾಗು ೨೨ ಎಂದು ಅಪ್ಪಣೆಯನ್ನಿತ್ತು, ಮಗಳ ಹಸ್ತವಂ ಪಿಡಿದು ಕರಾವಳಿ ಯಿಂದೊಡಗೂಡಿ ಭೋಜನಾರ್ಥವಾಗಿ ಪಾಕಶಾಲೆಯ೦ ಕುರಿತು ಒರು, ದ್ವಾರಪಾಲಕಿಯಂ ಕುರಿ ತು, ( ಎಲೆ ಮದವತಿಯೇ, ನೀನು ಹೋಗಿ ನಮ್ಮ ಪುರಾಧಿಪತಿಯಾದ ವೀರಕೇತು ವಿಗೆ ನಮ್ಮ ರತ್ನ ಪುರಿಯನ: ರತ್ನ ತೋರಣಗಳಿಂದ ಅಲಂಕರಿಸುವುದೆಂದು ಎನ್ನ ಆಜ್ಞೆಯನ್ನು ಹೇಳುವಳಾಗು ಎಂದು ಅಪ್ಪಣೆಯನ್ಶಿಯಲು ;

  • ಅವಳು-« ಹೇಗೆ ಆಜ್ಞೆಯಾಗುವುದೋ ಆ ರೀತಿಯಿಂದ ನಡೆದುಕೊಳ್ಳು ವೆನು ?” ಎಂದು ಪೋಗಲು ;

ಇತ್ತಲು, ವತ್ಸ ರಾಜನು ರತ್ನಾ ವಳಿಯನ್ನ ಹೃದಯದಲ್ಲಿ ಸ್ಮರಿಸಿ, ಅಧಿಕವಾದ ಸಂತಾಪವಂ ಪೊಂದು, ಬಿಳಿದಾಳೆಯ ಗರಿಯಂತೆ ಬಿಳೇರಿದ ಮುಖವುಳ್ಳವನಾಗಿ, ರಾಜ್ಯ ವಿಚಾರಣೆಯಂ ಬಿಟ್ಟು, ಮನ್ಮಥನಿಗೆ ಮನವಂ ಕೊಟ್ಟು, ಅನುರಾಗವೆಂಬ ಕವ ಚವಂ ತೊಟ್ಟು, ಸಮಸ್ತ ವಸ್ತುವನ್ನೂ ರತ್ನಾ ವಳಿಯನ್ನಾಗಿಯೇ ಪರಿಭಾವಿಸುತ್ತ, ಶುಕ ಪಿಕಗಳ ಶಬ್ದಗಳಿಗೆ ಮುಳಿಸುಗೊಂಡು ಸಂಜರಗಳಂ ದೂರದಲ್ಲಿ ಕಟ್ಟಿರೆಂದು ಊಳಿಗದವರಿಗೆ ಕಟ್ಟು ಮಾಡುತ್ಯ, ಆಹಾರದಲ್ಲಿಯೂ ನಿದ್ರೆಯಲ್ಲಿಯ ಅಪೇಕ್ಷೆಯಂ ಪೊಂದದೆ, ದಿನಕ್ಕೆ ಒಂದು ಸರಿಯಾಗಿ ಸಣ್ಣನಾಗುತ್, ಸೇವಕ ಜನಗಳ ಮೇಲೆ ನಿಮಿ