ಪುಟ:ವತ್ಸರಾಜನ ಕಥೆ.djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧L - ಕರ್ಣಾಟಕ ಕಾವ್ಯಕಲಾನಿಧಿ, - ದ್ರನನ್ನು ರತ್ನಾ ವಳಿಯ ವಿವಾಹಕ್ಕೋಸ್ಕರವಾಗಿ ಸಿಂಹಳದೇಶಕೆ ಕರೆದುಕೊಂಡು ಪೋಗುವಂತೆ ತೋರುವುದು, ಇನ್ನು ಮೇಲೆ ನಮ್ಮ ಸ್ವಾಮಿಗೆ ಸಮಸ್ತವಾದ ಆಯಾ ಸಗಳು ಪರಿಹಾರವಾಗಿ ಆರೋಗ್ಯವುಂಟಾಗುವುದು ” ಎಂದು ನುಡಿಯಲು ; ರಾಯ ನು ನಸುನಗುತ್ತ, ( ಎಲೆ ದೇವಿಯೇ, ಯಾವಾಗಲೂ ಇಲ್ಲದ ಅಸೆಯಂ ಪ್ರಟ್ಟಿಸಿ ವಿನೋದವಂ ಗೆಯ್ಯುವುದು ಯುಕ್ತವೆ ? ?” ಎಂದು ನುಡಿಯುತ್ತಿರಲು ; - ಅಷ್ಟರಲ್ಲೇ ವಸುಭೂತಿಯು ವಸುಂಧರೆಯಿಂದೊಡಗೂಡಿ ಬಂದು ರಾಯ ನಿಗೆ ನಮಸ್ಕಾರವಂ ಗೆಯ್ದು, ತಾನು ತಂದಿರುವ ಪತ್ರಿಕೆಯನ್ನು ಮುಂದಿರಿಸಲು ; ರಾಯನು ಆ ಪತ್ರಿಕೆಯ೦ ತೆಗೆದುಕೊಳ್ಳು ವಂತೆ ತನ್ನ ಮಂತ್ರಿಗೆ ಸನ್ನೆ ಯಂ ಗೆಯ್ದು, ವಸುಭೂತಿಯಂ ಕುರಿತು ಎಲ್ಲೆ ಮಂತ್ರಿ ಶ್ರೇಷ್ಟನೇ, ನೀನು ಮರಳ ಇಲ್ಲಿಗೆ ಬಂದುದಂ ನೋಡಿದುದಲ್ಲಿ ಏನೋ ಹೊಸದಾದ ಒಂದು ಹೊಸಕಾಲ್ಯ ತೋರುತ್ತಲಿ ರುವುದು ?” ಎಂದು ನುಡಿಯಲು ; ಅವನು- ಎಲೈ ಮಹಾರಾಜೇಂದ್ರನೇ, ಪತ್ರಿ ಕೆಯಂ ಪರಾಂಬರಿಸಿದಲ್ಲಿ ಸಮಸ್ತವ ಚಿತ್ರಕ್ಕೆ ವೇದ್ಯವಾಗುವುದು ” ಎಂದು ಬೆನ್ನೈ ಸಲು ; ಯೌಗಂಧರಾಯಣನು ಆ ಪತ್ರಿಕೆಯ ನೀರಾಜಿಯ ಮೇಲುಮುಸುಕಂ ತೆಗೆದು ಮುದ್ರೆಯನ್ನೊ ಡೆದು ನೋಡುತ್ತಿರಲು ; ಆ ಪತ್ರಿಕೆಯಲ್ಲಿ ( ಸ್ವಸ್ತಿಶ್ರೀ ಕೌಶಾಂಬೀನಗರಕ್ಕಲಂಕಾರರಾಗಿ ಸಮಸ್ತ ಸಾಮಂತರಾಯ ರಿಂದ ಕಪ್ಪನಂ ಒಪ್ಪಿಸಿಕೊಳ್ಳುತ್ತ ರಾಜಾಧಿರಾಜನೆಂಬ ಬಿರುದನ್ನು ವಹಿಸಿರುವ ವತ ರಾಜನ ಸನ್ನಿಧಿಗೆ :-ಸಿಂಹಳ ದೇಶಾಧಿಪತಿಯಾದ ವಿಕ್ರಮಬಾಹುರಾಯನು ವಿರ ಚಿಸುವ ಆಶೀರ್ವಾದ. ನೀವು ನಮ್ಮಲ್ಲಿ ಬಂಧುತ್ವ ವನ್ನ ಬಳೆಯಿಸಿದಾರಭ್ಯವಾಗಿ ನಮ್ಮ ದೇಶಕ್ಕೆ ಬಿಜಯಂಗೆಯ್ದು ನಮ್ಮ ಮನಸ್ಸಿಗೆ ಸಂತೋಷವನ್ನು ೦ಟುಮಾಡಲಿಲ್ಲ ವಾದುದರಿಂದ ಈಗ ನಮ್ಮ ಮೇಲಣ ಪೂರ್ಣಾಭಿಮಾನದಿಂದ ವಾಸವದತ್ತಾ ದೇವಿ ಯಿಂದಲೂ ಮಂತ್ರಿಮುಖ್ಯವಾದ ಚತುರಂಗಸೇನೆಯಿಂದಲೂ ಸಿಂಹಳದೇಶಕೆ ಬಿಜಯಂಗೆಯ್ದು ಕೂಡಿದ ಬಂಧುತ್ವವನ್ನು ಹೆಚ್ಚಾಗಿ ಅಭಿವೃದ್ದಿಯಂ ಪೊಂದಿಸಿ ಮಹಾವಿಷ್ಣುವು ಶ್ರೀದೇವಿ ಭೂದೇವಿಯರ ಸೌಖ್ಯವನ್ನು ಹೊಂದುವಂತೆ ನೀವು ಒ೦ದಕೆ ಎರಡಾದ ಸಂತೋಷವನ್ನು ಹೊಂದಿ ಪೋಗಬಹುದು, ಆದುದರಿಂದಲೇ ಮಂತ್ರಿಯಾದ ವಸುಭೂತಿಯನ್ನು ನಿಮ್ಮ ಸನ್ನಿಧಿಗೆ ಕಳುಹಿಸಿ ಇದ್ದೇನೆ. ಸತ್ವಜ್ಞ ರಾದವರಿಗೆ ಪತ್ರಿಕಾಮುಖದಿಂದ ಶ್ರುತಪಡಿಸತಕ್ಕ ಪ್ರಕೃತವಿಲ್ಲವು ?” ಎಂದು ಬರೆದಿರುವ ಅಭಿಪ್ರಾಯಮಂ ಕೇಳಿ ಸಂತೋಷವಂ ಪೊಂದಿ, ವಿದ ಷಕನು ರಾಯನಂ ಕುರಿತು, “ಎಲೈ ಮಹಾರಾಜೇಂದ್ರನೇ, ವಿಷ್ಣುವಿನಂತೆ ಒಂದಕೆ ಎರಡಾದ ಸೌಖ್ಯವನ್ನು ಹೊಂದಬೇಕೆಂದು ಬರೆದ ವಾಕ್ಯಕೆ ತಾತ್ಸರವೇನು ? ?” ಎಂದು ಬೆಸಗೊಳಲು; ವಸುಭೂತಿಯು- ಎಲೈ ವಿದೂಷಕನೇ, ಸ್ವಲ್ಪ ದಿವಸದಲ್ಲೇ ಪ್ರತ್ಯಕ್ಷವಾಗಿ ನೋಡುತಿರುವಲ್ಲಿ ಏಕೆ ಪ್ರಶ್ನೆ ಯಂ ಗೆಯ್ಯುತ್ತಿರುವೆ ? ?” ಎನಲು ;